

27th April 2026

ಕೊಪ್ಪಳ.
ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವ ಮೇ. 16 ಮತ್ತು 17 ರಂದು ನಡೆಸಲು ಈಗಾಗಲೆ ಜಿಲ್ಲಾಡಳಿತ ಸಿದ್ದತೆಯಲ್ಲಿ ತೊಡಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಲಾಂಛನ ಬಿಡುಗಡೆ ಮಾಡಿದರು.
ಸೋಮವಾರ ಸಂಜೆ ಜಿಲ್ಲಾಡಳಿತದ ಸಭಾಂಗಣದಲ್ಲಿ 'ಕನಕಗಿರಿ ಉತ್ಸವ-2026'ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಕನಕಗಿರಿಯ ಇತಿಹಾಸ ಬಿಂಬಿಸುವ ಉತ್ಸವ ಇದಾಗಿದೆ. ಸರ್ವರು ಪಾಲ್ಗಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ, ಜಿಪಂ ಸಿಇಓ ವರ್ಣಿತ ನೇಗಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮತ್ತಿತರ ಅಧಿಕಾರಿಗಳು ಇದ್ದರು.

ಬಾಲ್ಯ ವಿವಾಹ ಪ್ರಕರಣ: ಮೂವ್ವರಿಗೆ ಜೈಲು ಶಿಕ್ಷೆ- ಗಂಗಾವತಿ ನ್ಯಾಯಾಲಯದಲ್ಲಿ ತೀರ್ಪು ಪ್ರಕಟ