

1st May 2026

ಕೊಪ್ಪಳ.
ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವುದನ್ನು ಮರೆತಿರುವ ಜಿಲ್ಲಾ ಉಸ್ತುವಾರು ಸಚುವ ಶಿವರಾಜ ತಂಗಡಗಿ ಅವರು ಪ್ರಧಾನ ಮಂತ್ರಿಗಳಿಗೆ ಕವನದ ಮೂಲಕ ವ್ಯಂಗ್ಯ ಮಾಡಿರುವುದು ಅವರ ಅಸಭ್ಯ ವರ್ತನೆ ಬಹಿರಂಗಪಡಿಸಿದ್ದಾರೆ. ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರೆಂಬುದನ್ನು ಮರೆತು ಪ್ರಧಾನಮಂತ್ರಿಯವರ ಬಗ್ಗೆ ಈ ರೀತಿ ಕವನ ಕಟ್ಟಿರುವುದು ಅವರ ನಡೆತೆಯನ್ನು ತೊರಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಕಿಡಿ ಕಾರಿದ್ದಾರೆ.
ಕವನದ ಮೂಲಕ ಪ್ರಧಾನಿ ಮೋದಿಯವರ ಬಗ್ಗೆ ವ್ಯಂಗ್ಯ ಮಾಡಿರುವ ಸಚಿವ ಶಿವರಾಜ ತಂಗಡಗಿ ನಡೆಯನ್ನು ಗುಳಗಣ್ಣನವರ್ ಖಂಡಿಸಿದ್ದಾರೆ. ದೇಶದ ಪ್ರಧಾನಮಂತ್ರಿ ಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ತಂಗಡಗಿ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಭಯದಿಂದ ಕಾಂಗ್ರೆಸ್ ಹೈಕಮಾಂಡ್ನ್ನು ಓಲೈಸಿಕೊಳ್ಳಲು ಪ್ರಧಾನಿ ಮೋದಿಜಿಗೆ ನಿಂದನೆ ಮಾಡಿದ್ದಾರೆ. ಕೀಳು ಮಟ್ಟದ ರಾಜಕಾರಣಕ್ಕಿಳಿದಿರುವ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲೆಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ೧೯೯೯ರಿಂದ ವಾಜಪೇಯಿ ಅವರ ಕಾಲದಿಂದಲೂ ಭಾರತೀಯ ಜನತಾ ಪಾರ್ಟಿ ಮಹಿಳಾ ಮೀಸಲಾತಿ ಪರವಾಗಿದೆ. ಇದನ್ನು ನಿರಂತರವಾಗಿ ವಿರೋಧ ಮಾಡಿಕೊಂಡು ಬಂದಿದ್ದು ಕಾಂಗ್ರೆಸ್. ತಂಗಡಗಿ ಇವರ ಹೇಳಿಕೆ ಕೇವಲ ರಾಜಕೀಯ ಟೀಕೆ ಅಲ್ಲ, ಇದು ಅತ್ಯಂತ ಹೀನ, ಅಸಭ್ಯ ಮತ್ತು ನಾಚಿಕೆಗೇಡಿತನದ ಪರಮಾವಧಿಯಾಗಿದೆ. ಸಚಿವ ಶಿವರಾಜ ತಂಗಡಗಿಯ ಕವನ ಕಟ್ಟಿರುವುದು ಕಾಂಗ್ರೆಸ್ ಪಕ್ಷದ ನಿಜ ಸ್ವರೂಪವನ್ನು ಬಯಲು ಮಾಡಿದ್ದಾರೆ. ಅಭಿವೃದ್ಧಿ, ಆಡಳಿತ, ದೇಶದ ಭವಿಷ್ಯ ಬಗ್ಗೆ ಮಾತನಾಡಲು ಇವರ ಬಳಿ ವಿಷಯವೇ ಇಲ್ಲ. ಅದಕ್ಕಾಗಿಯೇ ಪ್ರಧಾನಿಗಳ ವೈಯಕ್ತಿಕ ಜೀವನದ ಮೇಲೆ ದಾಳಿ ಮಾಡಿ ಜನರ ನಗೆಪಾಟಿಗೆ ಗುರಿಯಾಗಿದ್ದಾರೆ ನವೀನಕುಮಾರ ಗುಳಗಣ್ಣನವರ ಕಿಡಿ ಕಾರಿದರು.
ಮುಂದುವರೆದು ಮಾತನಾಡಿರುವ ಅವರು ಪ್ರಧಾನಮಂತ್ರಿಯವರ ಜೀವನ ದೇಶ ಸೇವೆಗೆ ಅರ್ಪಿತವಾಗಿದೆ. ಕುಟುಂಬದ ಬಗ್ಗೆ, ವೈಯಕ್ತಿಕ ವಿಷಯಗಳ ಬಗ್ಗೆ ಹೀಗೆ ಕೆಳಮಟ್ಟದ ಮಾತುಗಳು ಹೇಳುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ. ಇದು ೧೪೦ ಕೋಟಿ ಭಾರತೀಯರ ಅವಮಾನ ಮಾಡಿದಂತಾಗಿದೆ. ಸಂಸತ್ ನಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡಲಾಗುತ್ತಿಲ್ಲ ಎನ್ನುವುದು ಸಂಪೂರ್ಣ ಸುಳ್ಳು. ವಾಸ್ತವದಲ್ಲಿ, ಪ್ರಶ್ನೆ ಕೇಳುವ ಧೈರ್ಯವೇ ಇಲ್ಲದ, ವಿಷಯವಿಲ್ಲದ ವಿರೋಧ ಪಕ್ಷವೇ ಈ ರೀತಿಯ ನಾಟಕ ಮಾಡುತ್ತಿದೆ. ಸಚಿವ ತಂಗಡಗಿ ಅವರು ತಮ್ಮ ಇಂತಹ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು. ದೇಶದ ಜನರ ಮುಂದೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಜನತೆ ತಕ್ಕ ಪಾಠ ಕಲಿಸುತ್ತಾರೆ ಇದು ರಾಜಕೀಯವಲ್ಲ ಇದು ಕಾಂಗ್ರೆಸ್ನ ಹತಾಶೆ, ನಿರಾಶೆ ಮತ್ತು ಸಂಸ್ಕೃತಿ ಇಲ್ಲದ ರಾಜಕಾರಣದ ಪ್ರತಿಬಿಂಬವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಕ್ಸ್:
ಜಿಲ್ಲೆಯ ಅಭಿವೃದ್ಧಿಯ ಕವನ ಕಟ್ಟಿ ತೋರಿಸಲಿ
ಶಿವರಾಜ ತಂಗಡಗಿ ಹಿಂದುಳಿದ ಕನಕಗಿರಿ ಕ್ಷೇತ್ರದಲ್ಲಿ ಮೂರು ಭಾರಿ ಶಾಸಕರಾಗಿ ಮೂರು ಭಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತ್ತು ಈಗ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಎರಡುವರೆ ವರ್ಷದಿಂದ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕವನದ ಮೂಲಕ ತೊರಿಸಲಿ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೇವಲ ಕಾರಟಗಿಗೆ ಸಿಮೀತರಾಗಿರುವ ತಂಗಡಗಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಕುರಿತು ಚಿಂತನೆ ಮಾಡುತ್ತಿಲ್ಲ. ಜಿಲ್ಲೆಯಾದ್ಯಂತ ಗ್ರಾಮಗಳ ರಸ್ತೆಗಳು ಹಾಳಾಗಿವೆ. ಸ್ವ ಕ್ಷೇತ್ರದಲ್ಲೆ ಹದೆಗೆಟ್ಟಿರುವ ರಸ್ತೆ ಕುರಿತು ಯುವಕರು ತೊರಿಸುತ್ತಿದ್ದಾರೆ. ಇದರ ಬಗ್ಗೆ ತಂಗಡಗಿ ಚಿಂತನೆ ಮಾಡಿಲಿ. ಮೂರು ಭಾರಿ ಗುಜರಾತ ರಾಜ್ಯದ ಮುಖ್ಯಮಂತ್ರಿಯಾಗಿ, ೧೨ ವರ್ಷದಿಂದ ಈ ದೇಶದ ಪ್ರಧಾನಮಂತ್ರಿಯಾಗಿರುವ ಮೋದಿ ಬಗ್ಗೆ ಕೀಳುಮಟ್ಟದ ಕವನ ರಚಿಸಿರುವ ತಂಗಡಗಿಗೆ ಜನರೇ ಬುದ್ಧಿ ಕಲಿಸುತ್ತಾರೆ.
ನವೀನ್ಕುಮಾರ ಗುಳಗಣ್ಣನವರ, ಬಿಜೆಪಿ ಜಿಲ್ಲಾಧ್ಯಕ್ಷರು, ಕೊಪ್ಪಳ.

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ

ಕಾಂಗ್ರೆಸ್ ಮಹಿಳೆಯರನ್ನು ಗ್ಯಾರಂಟಿಗೆ ಸಿಮೀತಗೊಳಿಸಿದೆ- ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಆರೋಪ

ಮಹಿಳಾ ಮೀಸಲಾತಿಗೆ ವಿರೋಧ: ಹೇಮಲತಾ ನಾಯಕ ಆಕ್ರೋಶ- ಸಾಮಾನ್ಯ ಮಹಿಳೆಯರಿಗೆ ಅಧಿಕಾರ:ಕಾಂಗ್ರೆಸ್ ಅಡ್ಡಿಪಡಿಸಿದೆ

2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಎಚ್.ಕೆ. ಪಾಟೀಲ