

5th May 2026

undefined
ಗಂಗಾವತಿ.
ದೇಶದ ಕೋಟ್ಯಂತರ ಜನಸಾಮಾನ್ಯರ ಚಿತ್ತ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ಕೇಂದ್ರಿಕೃತವಾಗಿ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದರು. ಅದರಂತೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮತದಾರ ಪ್ರಭುಗಳು ಎನ್.ಡಿ.ಎಗೆ ಬೆಂಬಲಿಸುವುದರ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ದಿಕ್ಕೂಚಿ ನೀಡಿದ್ದಾರೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಚುನಾವಣಾ ಫಲಿತಾಂಶ ಕುರಿತು ಅವರು ಪ್ರತಿಕ್ರೀಯೆ ವ್ಯಕ್ತಪಡಿಸಿದ್ದಾರೆ. ಚುನಾವಣಾ ಫಲಿತಾಂಶ ಅಭಿವೃದ್ಧಿ, ಸ್ಥಿರತೆ ಮತ್ತು ದೇಶದ ಭದ್ರತೆಯ ಪರ ಜನರ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಅತಿಯಾದ ಅಲ್ಪಸಂಖ್ಯಾತರ ತೃಷ್ಟಿಕರಣ ಹಾಗೂ ದುರಾಡಳಿತದಿಂದ ಜನರು ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ಹಾಗೂ ಮಾನ್ಯ ಕೇಂದ್ರಗೃಹ ಸಚಿವ ಅಮಿತ ಷಾಜೀಯವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಈ ಬಾರಿ ಬಿಜೆಪಿಗೆ ಅತಿದೊಡ್ಡ ಬಹುಮತ ನೀಡಿದ್ದಾರೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮೊತ್ತೊಮ್ಮೆ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮವಾಗಿ ಎನ್.ಡಿ.ಎ ಮೈತ್ರಿಕೂಟ ದೇಶವ್ಯಾಪಿಯಾಗಿ ಅಧಿಕಾರಕ್ಕೆ ಬರಲಿದೆ. 2028 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು

ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿಗೆ ಜನ ಬೆಂಬಲ- ಬಿಜೆಪಿ ರಾಜ್ಯ ಸದಸ್ಯ ಡಾ. ಬಸವರಾಜ.ಕೆ ಹೇಳಿಕೆ

ಪ್ರಧಾನಿಗೆ ವ್ಯಂಗ್ಯ: ತಂಗಡಗಿ ಅಸಭ್ಯ ವರ್ತನೆ ಬಹಿರಂಗ- ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಕಿಡಿ

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ

ಕಾಂಗ್ರೆಸ್ ಮಹಿಳೆಯರನ್ನು ಗ್ಯಾರಂಟಿಗೆ ಸಿಮೀತಗೊಳಿಸಿದೆ- ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಆರೋಪ

ಮಹಿಳಾ ಮೀಸಲಾತಿಗೆ ವಿರೋಧ: ಹೇಮಲತಾ ನಾಯಕ ಆಕ್ರೋಶ- ಸಾಮಾನ್ಯ ಮಹಿಳೆಯರಿಗೆ ಅಧಿಕಾರ:ಕಾಂಗ್ರೆಸ್ ಅಡ್ಡಿಪಡಿಸಿದೆ