

8th May 2026

ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ಮೂರ್ತಿಗೆ ರೂ.2.5 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಶಾಸಕ ಜನಾರ್ಧನರೆಡ್ಡಿ ಆಪ್ತರಾದ ಬೆಂಗಳೂರಿನ ಎಎಂಆರ್ ಗ್ರುಪ್ ನ ಡಾ.ಎ.ಮಹೇಶರೆಡ್ಡಿ ಸಮರ್ಪಣೆ ಮಾಡಿದ್ದಾರೆ.
ಶುಕ್ರವಾರ ಶಾಸಕ ಗಾಲಿ ಜನಾರ್ಧನರೆಡ್ಡಿ ದಂಪತಿಗಳೊಂದಿಗೆ ಆಗಮಿಸಿದ ಉದ್ಯಮಿ ಮಹೇಶರೆಡ್ಡಿ ತಮ್ಮ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ನೇರವೆರಿಸಿ ಆಭರಣಗಳನ್ನು ಭಕ್ತಿ, ಭಾವಗಳಿಂದ ಸಮರ್ಪಣೆ ಮಾಡಿದರು.
ರೂ.2.5 ಕೋಟಿ ಮೌಲ್ಯದ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಛತ್ರಿ, ಕಿರೀಟ ಹಾಗೂ ಗದೆಗಳಗಳಿಗೆ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಸಲ್ಲಸಿ ಶ್ರೀ ಆಂಜನೇಯ ಮೂರ್ತಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರ ವಸಂತಕುಮಾರಿ, ಕನಕಗಿರಿ ತಹಸಿಲ್ದಾರ ವಿಶ್ವನಾಥ ಮುರಡು, ಗ್ರೇಡ್ 2 ತಹಶೀಲ್ದಾರ ಮಹಾಂತಗೌಡ ಪಾಟೀಲ್, ಮಾಜಿ ಸಂಸದ ಶಿವರಾಮೇಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರು ಹಿರೂರು,ಜೆಪಿ ಮುಖಂಡಾದ ವಿರುಪಾಕ್ಷಪ್ಪ ಸಿಂಗನಾಳ್, ತಿಪ್ಪೇರುದ್ರಸ್ವಾಮಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಮಲ್ಲಿಕಾರ್ಜುನಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ್ ಬಾದವಾಡಿಗಿ, ವೆಂಕಟೇಶ್ ಜಬ್ಬಲಗುಡ್ಡ, ರಮೇಶ್ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ್ ಅಂಜನಾದ್ರಿ ಮತ್ತಿತರರು ಇದ್ದರು.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*