

11th May 2026

ಗಂಗಾವತಿ.
ಮುಜರಾಯಿ ಇಲಾಖೆಗೆ ಒಳಪಡುವ ತಾಲೂಕಿನ ಐತಿಹಾಸಿ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ಮೂರ್ತಿಗೆ ಶಾಸಕ ಗಾಲಿ ಜನಾರ್ಧನರೆಡ್ಡಿ ಆಪ್ತ ಹೈದರಾಬಾದಿನ ಉದ್ಯಮಿ ಎಎಂಆರ್ ಗ್ರುಪ್ ಮಾಲೀಕ ಎ.ಮಹೇಶರೆಡ್ಡಿ ಸಮರ್ಪಣೆ ಮಾಡಿರುವ ರೂ.2.50 ಕೊಟಿ ಮೌಲ್ಯದ್ದೆಂದು ತಿಳಿಸಿದ್ದ ಆಭರಣಗಳು ಪೂರ್ಣ ಪ್ರಮಾಣದ ಬಂಗಾರವಲ್ಲ. ಬಂಗಾರ ಲೇಪಿತ ತಾಮ್ರವೆಂದು ಎಂದು ತಪಾಣೆಯಲ್ಲಿ ಬಹಿರಂಗವಾಗಿದ್ದು, ದಾಖಲೆ ಪಡೆಯದೇ ಆಭರಣಗಳನ್ನು ಸ್ವೀಕರಿಸಿರುವ ಅಧಿಕಾರಿಗಳು ಈಗ ಪೇಚಿಗೆ ಸಿಲುಕಿದ್ದಾರೆ.
ಮೇ 8ರಂದು ಹೈದರಾಬಾದ್ನ ಎಎಂಆರ್ ಗ್ರೂಪ್ ಮಾಲೀಕ ಡಾ. ಎ. ಮಹೇಶರೆಡ್ಡಿ ಕುಟುಂಬವು ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ದೇವರಿಗೆ ವಿಶೇಷ ಕಾಣಿಕೆ ಅರ್ಪಿಸಿದ್ದರು. ಹೈದರಾಬಾದ್ನ ನುರಿತ ಕುಸುರಿ ಕೆಲಸಗಾರರು ಸಿದ್ಧಪಡಿಸಿದ್ದ ಪ್ರಭಾವಳಿ, ಕಿರೀಟ, ಗದೆ, ಛತ್ರಿ ಹಾಗೂ ಚಾಮರಗಳನ್ನೊಳಗೊಂಡ ಒಟ್ಟು 12 ಆಭರಣಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿತ್ತು. ಈ ಆಭರಣಗಳ ಮೌಲ್ಯ 2.5 ಕೋಟಿ ರೂ. ಎಂದು ಶಾಸಕ ಜನಾರ್ಧನರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅಂದು ಋತ್ವಿಜರ ತಂಡದಿಂದ ವಿಶೇಷ ಪೂಜೆ ನೆರವೇರಿಸಿ, ಬೆಟ್ಟವನ್ನು ಪುಷ್ಪಗಳಿಂದ ಅಲಂಕರಿಸಿ ಅತ್ಯಂತ ಸಡಗರದಿಂದ ಸಮರ್ಪಣಾ ಕಾರ್ಯಕ್ರಮ ನಡೆಸಿದ್ದರು. ಶಾಸಕರು ಬಂದಿರುವದರಿಂದ ಅಧಿಕಾರುಗಳು ತರಾತುರಿಯಲ್ಲಿ ಆಭರಣಗಳನ್ನು ಸ್ವಿಕರಿದ್ದರು. ಆದರೆ ಮುಜರಾಯಿ ಇಲಾಖೆಯ ನಿಯಮದಂತೆ ಆಭರಣಗಳನ್ನು ನುರಿತ ತಜ್ಞರಿಂದ ತಪಾಷಣೆ ಮಾಡಿಸಿ ಭದ್ರವಾಗಿಟ್ಟುಕೊಳ್ಳಬೇಕು.
ಹೀಗಾಗಿ ಭಾನುವಾರ ಆಭರಣಗಳನ್ನು ಸಹಾಯಕ ಆಯುಕ್ತ ಕ್ಯಾ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಲೋಹ ಪರಿಶೋಧಕ ಮತ್ತು ಮೌಲ್ಯಮಾಪನ ತಂಡವು ಪರಿಶೀಲಿಸಿಲಿಸಿದ್ದು, ಆಭರಣಗಳು ಪೂರ್ಣ ಪ್ರಮಾಣ ಬಂಗಾರವಲ್ಲ. ತಾಮ್ರದಿಂದ ತಯಾರಿಸಿ ಬಂಗಾರ ಲೇಪನ ಮಾಡಲಾಗಿದ್ದು, ಶಾಸಕರು ತಿಳಿಸಿದಂತೆ ಅಷ್ಟೊಂದು ಬೆಲೆ ಹೊಂದಿಲ್ಲ ಎಂದು ಅಧಿಕಾರಿಗಳು ಸ್ಷಷ್ಟಪಡಿಸಿದ್ದಾರೆ.
ಸಮರ್ಪಣೆ ಸಮಯದಲ್ಲೆ ಆಭರಣಗಳನ್ನು ತಪಾಷಣೆ ಮಾಡಿ ಅಧಿಕೃತವಾಗಿ ಸ್ವಿಕರಿಸಬೇಕು.
ಆದರೆ ಶಾಸಕ ಜನಾರ್ದನರೆಡ್ಡಿ ಒತ್ತಡಕ್ಕೆ ಮಣಿದ ಅಧಿಕಾರಿಗಳು ಅಂದು ಯಾವುದೇ ಪರಿಶೀಲನೆ ನಡೆಸದೆ ಆಭರಣಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದರು. ಸಮರ್ಪಣೆಯಾದ ಎರಡು ದಿನಗಳ ನಂತರ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ಲೋಹ ಪರಿಶೋಧಕರಾದ ಗುಂಡಾಚಾರ್ ಮತ್ತು ಪರಶುರಾಮ ವಿಶ್ವಕರ್ಮ ಅವರು ಆಭರಣಗಳನ್ನು ಪರೀಕ್ಷಿಸಿದಾಗ ಶಾಕಿಂಗ್ ಸತ್ಯ ಹೊರಬಿದ್ದಿದೆ. ಈ ಎಲ್ಲ ಆಭರಣಗಳು ಪೂರ್ಣ ಪ್ರಮಾಣದ ಚಿನ್ನವಲ್ಲ, ಬದಲಿಗೆ ಚಿನ್ನ ಲೇಪಿತ ತಾಮ್ರ ಎಂದು ತಜ್ಞರು ದೃಢೀಕರಿಸಿದ್ದಾರೆ.
ಈ ಬೆಳವಣಿಗೆಯಿಂದ ತಬ್ಬಿಬ್ಬಾಗಿರುವ ಅಧಿಕಾರಿಗಳು, ದಾನಿ ಮಹೇಶರೆಡ್ಡಿ ಅವರಿಗೆ ತಕ್ಷಣವೇ ಆಭರಣಗಳ ಅಸಲಿ ಬಿಲ್ ಮತ್ತು ಚಿನ್ನದ ದೃಢೀಕೃತ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದಾರೆ. ಅಂಜನಾದ್ರಿ ದೇವಾಲಯದ ಪೂಜೆ ಹಕ್ಕಿನ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ವಿವಾದ ನಡೆಯುತ್ತಿದ್ದು, ಅರ್ಚಕ ವಿದ್ಯಾದಾಸ್ ಬಾಬಾ ಬೆಂಬಲಿಗರು ಮತ್ತು ಜಿಲ್ಲಾಡಳಿತದ ನಡುವೆ ಮುಸುಕಿನ ಗುದ್ದಾಟವಿದೆ. ಇಂತಹ ಸಮಯದಲ್ಲಿ ಮೌಲ್ಯಮಾಪನ ಮಾಡದೆ ಆಭರಣ ಪಡೆದ ಅಧಿಕಾರಿಗಳ ನಡೆ ಈಗ ವಿರೋಧಿಗಳಿಗೆ ಅಪಪ್ರಚಾರ ಮಾಡಲು ಪ್ರಬಲ ಅಸ್ತ್ರವಾಗಿದೆ. ಆಭರಣ ಸಮರ್ಪಣೆಯ ಕುರಿತು ಶಾಸಕರು ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದರು. ಆದರೆ ಆಭರಣಗಳ ಅಸಲಿಯತ್ತು ಬಹಿರಂಗವಾಗುತ್ತಿದ್ದಂತೆ ದೇವರ ವಿಷಯದಲ್ಲಿ ಈ ರೀತಿ ಸುಳ್ಳು ಪ್ರಚಾರ ಪಡೆದುಕೊಳ್ಳುವುದು ಸರಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬಾಕ್ಸ್
ಆಭರಣಗಳ ದಾಖಲೆ ಪಡೆದು ಸ್ಪಷ್ಟಪಡಿಸುತ್ತೇವೆ
ಭಕ್ತರು ದೇವಸ್ಥಾನಕ್ಕೆ ಬಂದು ಕಾಣಿಕೆ ನೀಡಿದಾಗ ಪಡೆಯಬೇಕಾಗುತ್ತದೆ. ಅದರಂತೆ ಅಂಜನಾದ್ರಿಗೆ ಉದ್ಯಮಿಗಳು ಬಂಗಾರದ ಆಭರಣಗಳೆಂದು ನೀಡಿದ್ದಾರೆ. ಅವುಗಳನ್ನು ಪರಿಶೀಲಿಸಿದ್ದೇವೆ. ಆಭರಣಗಳ ಮೂಲ ಬಿಲ್ ಗಳನ್ನು ಸಲ್ಲಿಸುವಂತೆ ಉದ್ಯಮಿಗೆ ತಿಳಿಸಿದ್ದೇವೆ.
ಯು.ವಸಂತಕುಮಾರಿ, ತಹಶೀಲ್ದಾರ, ಗಂಗಾವತಿ.
ಬಾಕ್ಸ್
ತಪ್ಪು ಮಾಹಿತಿ ನೀಡುವುದು ಸರಿಯಲ್ಲ
ಅಂಜನಾದ್ರಿಗೆ ಸಮರ್ಪಣೆ ಮಾಡಿರುವ ಬಂಗಾರದ ಆಭರಣಗಳ ಅಸಲಿತ್ತು ಮತ್ತು ಅವುಗಳ ಮೌಲ್ಯದ ಕುರಿತು ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಉದ್ಯಮಿ ನೀಡಿರುವ ಆಭರಣಗಳನ್ನು ಅಧಿಕಾರಿಗಳು ಅಂದೇ ಪರಿಶೀಲಿಸಿ ಬಹಿರಂಗಪಡಿಸದೇ ವಿಳಂಬ ಮಾಡಿರುವುದು ಭಕ್ತರಲ್ಲಿ ಅನುಮಾನಕ್ಕೆಡೆ ಮಾಡಿದೆ. ತಕ್ಷಣ ಈ ವಿಷಯದಲ್ಲಿ ಸ್ಪಷ್ಟಿಕರಣ ನೀಡಬೇಕು.
ವಿಠ್ಠಲ್ ನಾವಡೆ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ, ಗಂಗಾವತಿ.

ಅಂಜನಾದ್ರಿಗೆ ದಾನ ನೀಡಿದ ಲೋಹಗಳ ದಾಖಲೆಗಳು ಪುನಃ ಪರಿಶೀಲನೆ- ಜಿಲ್ಲಾಧಿಕಾರಿ ಇಟ್ನಾಳ ಸ್ಪಷ್ಟನೆ

ಅಂಜನಾದ್ರಿಯ ಶ್ರೀ ಆಂಜನೇಯ ಮೂರ್ತಿಗೆ- 2.5 ಕೋಟಿ ಮೌಲ್ಯದ ಚಿನ್ನಾಭರಣ ಸಮರ್ಪಣೆ- ಎಎಂಆರ್ ಗ್ರುಪ್ ನ ಡಾ.ಎ.ಮಹೇಶರೆಡ್ಡಿ ಸೇವೆ

ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ- ನಾಗರಾಜ ನಂದಾಪುರ ನೇಮಕ: ಡಿಕೆಶಿ ಆದೇಶ- ದಲಿತ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ

ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿಗೆ ಜನ ಬೆಂಬಲ- ಬಿಜೆಪಿ ರಾಜ್ಯ ಸದಸ್ಯ ಡಾ. ಬಸವರಾಜ.ಕೆ ಹೇಳಿಕೆ