

11th May 2026

ಕೊಪ್ಪಳ.
ಜಿಲ್ಲೆಯ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನಕ್ಕೆ ಹೈದ್ರಾಬಾದ್ನ ದಾನಿ ಎಎಂಆರ್ ಪ್ರಾವೈಟ್ ಲಿಮಿಟೆಡ್ನ ಎ ಮಹೇಶರೆಡ್ಡಿ ಅವರು ದೇಣಿಗೆಯಾದ ನೀಡಲಾದ ಎಲ್ಲ ಕವಚಗಳಿಗೆ ಉಪಯೋಗಿಸಿದ ಲೋಹಗಳಿಗೆ ಸಂಬಂಧಿಸಿದ ಬಿಲ್ ಹಾಗೂ ಇತರೆ ದಾಖಲೆಗಳನ್ನು ಪುನಃ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ ಸ್ಪಷ್ಟಪಡಿಸಿದ್ದಾರೆ.
ದಾನಿಗಳು, ಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಲಾದ. ಬಂಗಾರದ ಸಾಮಗ್ರಿಗಳ ಅಸಲಿಯತ್ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿರುವ ಅವರು, ಕಾಣಿಕೆಗಳನ್ನು ದೇವಸ್ಥಾನ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳಲಾದ ಬಗ್ಗೆ ಆಂಜನೇಯ ದೇವಸ್ಥಾನದ ಆಡಳಿತಾಧಿಕಾರಿಗಳು ಮತ್ತು ಗಂಗಾವತಿ ತಹಸೀಲ್ದಾರರು, ನಿಯೋಜಿತ ಪೊಲೀಸ್ ಸಿಬ್ಬಂದಿ, ದೇವಸ್ಥಾನ ಸಿಬ್ಬಂದಿ, ಹೈದ್ರಾಬಾದ್ನ ಎಎಂಆರ್ ಪ್ರೈವೇಟ ಲಿಮಿಟೆಡ್ನ ಡಾ.ಮಹೇಶ ರೆಡ್ಡಿ ಅವರ ಪರವಾಗಿ ಆಂದ್ರಪ್ರದೇಶದ ಆದೋನಿಯ ದೇವಸ್ಥಾನದ ವಾಸ್ತುಶಿಲ್ಪಿ ಶ್ರೀ ಗುಂಡಾಚಾರಿ ಸ್ಥಪತಿ, ಹುಲಿಗಿ ಗ್ರಾಮದ ಅಕ್ಕಸಾಲಿಗರು, ಬ್ಯಾಂಕನ ಆಭರಣ ಮೌಲ್ಯಮಾಪಕರು ಸಮಕ್ಷಮದಲ್ಲಿ ಮೇ 10ರಂದು ಪಂಚನಾಮ ನಡೆಸಲಾಗಿದೆ.
ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ನೀಡಲಾದ ಲೋಹಗಳ ವಿವರ ನೀಡಿದ್ದು, ಈ ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಕೆ ಮಾಡಲಾಗಿದ್ದು, ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಇರುವುದಾಗಿ ದಾನಿಗಳ ಪರವಾಗಿ ಹಾಜರಿದ್ದ ಶ್ರೀ ಗುಂಡಾಚಾರಿ ಸ್ಥಪತಿ ಅವರು ಹೇಳಿದ್ದಾರೆ. ಈ ಸಂಬಂಧ ಸರ್ಕಾರದ ಪರವಾಗಿ ಹಾಜರಿದ್ದ ಅಕ್ಕ ಸಾಲಿಗರು ಕವಚಗಳನ್ನು ಪರಿಶೀಲನೆ ಮಾಡಿ ತಾಮ್ರದ ಕವಚಗಳಿಗೆ ಲೇಪನ ಮಾಡಿದ ಬಂಗಾರ ತೂಕವು ಅಂದಾಜು 250 ಗ್ರಾಂದಿಂದ 300 ಗ್ರಾಮಗಳು ಇರುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಕಚೇರಿ ಸಮಿತಿ ಸುಪರ್ದಿಗೆ ಬಂಗಾರದ ಲೇಪನವುಳ್ಳ ಎಲ್ಲ ತಾಮ್ರ ಕವಚಗಳನ್ನು ತೆಗೆದುಕೊಳ್ಳಲು ಸರಿಯಾಗಿ ನಿಖರ ಮಾಹಿತಿ ಅವಶ್ಯವಿರುವುದರಿಂದ ದೇಣಿಗೆ ನೀಡಲಾದ ಎಲ್ಲ ಕವಚಗಳಿಗೆ ಉಪಯೋಗಿಸಲಾದ ಲೋಹಗಳ ವಿವರವನ್ನು ಮಾಲ್ಯದ ಮಾಹಿತಿಯೊಂದಿಗೆ ಬಿಲ್, ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಮೇ 12ರೊಳಗೆ ನೀಡಲು ದಾನಿಗಳ ಪರವಾಗಿ ಹಾಜರಿದ್ದ ಶ್ರೀ ಗುಂಡಾಚಾರಿ ಸ್ಥಪತಿ ಅವರಿಗೆ ಸೂಚಿಸಲಾಗಿತ್ತು.
ಅದರಂತೆ ಶ್ರೀ ಗುಂಡಾಚಾರಿ ಸ್ಥಪತಿ ಅವರು ಮೇ 11ರಂದು ಇನೋವೈಸ್, ಮಜೂರಿ ವಿವರಗಳು ಮತ್ತು ಇನ್ನೀತರ ದಾಖಲೆಗಳನ್ನು ಸಲ್ಲಿಸಿದ್ದು, ಈ ಬಿಲ್ಗಳು ಮತ್ತು ಇನ್ನೀತರ ದಾಖಲೆಗಳನ್ನು ಆಧರಿಸಿ ಪುನಃ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಅಂಜನಾದ್ರಿಗೆ ಸಲ್ಲಿಸಿದ ಆಭರಣಗಳು ಪೂರ್ಣ ಬಂಗಾರವಲ್ಲ: ಪರಿಶೀಲನೆಯಲ್ಲಿ ಬಹಿರಂಗ- ದಾಖಲೆ ಪಡೆಯದೆ ಪೆಚೀಗೆ ಸಿಲುಕಿದ ಅಧಿಕಾರಿಗಳು

ಅಂಜನಾದ್ರಿಯ ಶ್ರೀ ಆಂಜನೇಯ ಮೂರ್ತಿಗೆ- 2.5 ಕೋಟಿ ಮೌಲ್ಯದ ಚಿನ್ನಾಭರಣ ಸಮರ್ಪಣೆ- ಎಎಂಆರ್ ಗ್ರುಪ್ ನ ಡಾ.ಎ.ಮಹೇಶರೆಡ್ಡಿ ಸೇವೆ

ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ- ನಾಗರಾಜ ನಂದಾಪುರ ನೇಮಕ: ಡಿಕೆಶಿ ಆದೇಶ- ದಲಿತ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ

ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿಗೆ ಜನ ಬೆಂಬಲ- ಬಿಜೆಪಿ ರಾಜ್ಯ ಸದಸ್ಯ ಡಾ. ಬಸವರಾಜ.ಕೆ ಹೇಳಿಕೆ