

12th May 2026

ಕೊಪ್ಫಳ.
ನಗರದಲ್ಲಿ 10 ನೇ ವರ್ಷದ ಮಾವು ಮೇಳಕ್ಕೆ ಚಾಲನೆನೀಡಲಾಗಿದೆ. ಜಿಲ್ಲೆಯ ನೂರಕ್ಕು ಹೆಚ್ಚು ರೈತರು 200 ಕ್ಕು ಹೆಚ್ಚು ತಳಿಯ ಮಾವಿನ ನ ಹಣ್ಣು ಮತ್ತು ಮಾವಿನ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಮೇಳದಲ್ಲಿ ಈ ಮೇಳದದಲ್ಲಿ ಕೊಪ್ಪಳದ ರೈತರು ಬೆಳೆದ ಪ್ರಪಂಚದ ಅತ್ಯಂತ ದುಬಾರಿ ಮಾವಿನ ಹಣ್ಣಾದ “ಮೀಯಾಜಾಕಿ” ಎಂಬ ಜಪಾನ್ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಾಗೂ ಮಾರಾಟ ಮಾಡಲಾಗುತ್ತಿದೆ. ಈ ಮಾವಿನ ಹಣ್ಣು ವೇಳೆ ದೇಶದಲ್ಲಿ 1 ಕೆ.ಜಿ.ಗೆ ರೂ.2.50 ಲಕ್ಷಕ್ಕೆ ಮಾರಾಟವಾಗುತ್ತದೆ. ಆದರೆ ಈ ತಳಿಯನ್ನು ಕೊಪ್ಪಳದಲ್ಲಿಯೇ ಬೆಳೆಯುತ್ತಿರುವುದರಿಂದ ಇದರ ಬೆಲೆಯನ್ನು ಮೇಳದಲ್ಲಿ ಪ್ರತಿ ಕೆ.ಜಿಗೆ ರೂ. 2500 ರಿಂದ 3000 ರ ವರೆಗೂ ದರವನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಸಾಕಷ್ಟು ಗ್ರಾಹಕರು ಮುಂಗಡವಾಗಿ ಖರೀದಿಸಲು ಹಣ ಪಾವತಿಸಿರುವುದು ವಿಶೇಷವಾಗಿದೆ.
ಕೊಪ್ಪಳ ಜಿಪಂನ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರಸಭೆ ಎದುರಿನ ತೊಟಗಾರಿಕೆ ಕಛೇರಿಯ ಆವರಣದಲ್ಲಿ ಆಯೋಜಿಸಿರುವ ಹತ್ತನೇ ವರ್ಷದ ಮೇಳವನ್ನು ಸಂಸದ ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಜಿಪಂ ಸಿಇಓ ವರ್ಣೀತ್ ನೇಗಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದಾ ಅವರು ಉದ್ಘಾಟಿಸಿದರು. ನಂತರ ಸಂಸದ ರಾಜಶೇಖರ ಹಿಟ್ನಾಳ್ ಪ್ರದರ್ಶನ ವೀಕ್ಷಣೆ ಮಾಡಿ ಮಳಿಗೆಗಳನ್ನು ಉದಘಾಟಿಸಿದರು. ಮೆಚ್ಚುಗೆ ವ್ಯಕ್ತಪಡಿಸಿದರು.
ಮಾವು ಮೇಳದ ಫಲವಾಗಿ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 6500 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ಇವುಗಳಲ್ಲಿ ಮುಖ್ಯವಾಗಿ ಕೇಸರ್ ತಳಿಯು ಅತ್ಯಂತ ಬೇಡಿಕೆಯ ತಳಿಯಾಗಿದೆ. ಹಾಗೂ ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ. ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳನ್ನು ಬೆಳೆಯತ್ತಿದ್ದು ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಕೊಪ್ಪಳದಲ್ಲಿ ರೈತರು ಬೆಳೆದ ಜಗತ್ತಿನ ದುಬಾರಿ ಮಾವು ಮಿಯಾ ಜಾಕಿ ಮಾವನ್ನು ಮಾರಾಟಕ್ಕೆ ಇಡಲಾಗಿದೆ.
ಈ ಮೇಳದಲ್ಲಿ 100 ಕ್ಕೂ ಹೆಚ್ಚಿನರೈತರು ಭಾಗವಹಿಸಲು ಪೈಪೋಟಿ ಮೇಲೆ ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಸ್ಟಾಲ್ ಗಳನ್ನು ನೊಂದಾಯಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕರಿಗೆ ನೇರವಾಗಿ ಮಾರಾಟ ಮಾಡಲು ರೈತರು ಹೆಚ್ಚಾಗಿ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಮೇಳದಲ್ಲಿ ಕೇಸರ್, ಬೆನೆಶಾನ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಪುನಾಸ್ ಸೇರಿದಂತೆ 200 ಕ್ಕೂ ಅಧಿಕ ವಿವಿಧ ಮಾವಿನ ತಳಿಗಳನ್ನು ಹಾಗೂ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿ ಇಡಲಾಗಿದೆ.
ಈ ಮೇಳದಲ್ಲಿ ಮಾವಿನ ಹಣ್ಣಿನ ರುಚಿಕರವಾದ ಸೀಕರಣೆಯನ್ನು ಸಹ ಮಾರಾಟ ಮಾಡಲಾಗುತ್ತಿದೆ. ಹಾಗೂ ಉಪ್ಪಿನಕಾಯಿ ಮಾವನ್ನು ಸಹ ಮಾರಾಟ ಮಾಡಲಾಗುತ್ತಿದ್ದು ಹಾಗೂ ರೈತರೇ ತಯಾರಿಸಿದ ಉಪ್ಪಿನಕಾಯಿಗಳನ್ನು ಆಕರ್ಷಕವಾದ ಬಾಟಲ್ ಗಳಲ್ಲಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುತ್ತಿದೆ.
ಈ ಮೇಳದಲ್ಲಿ ಭಾಗವಹಿಸಲು 100 ಕ್ಕೂ ಹೆಚ್ಚಿನ ರೈತರು ನೇರವಾಗಿ ನೊಂದಾಯಿಸಿರುತ್ತಾರೆ. ರೈತರಿಗಾಗಿ ಉಚಿತವಾಗಿ 30 ಕ್ಕೂ ಹೆಚ್ಚಿನ ಸ್ಟಾಲ್ ಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಮಾವಿನ ತಳಿಗಳನ್ನು ಸುಸಜ್ಜಿತವಾಗಿ ಪ್ರದರ್ಶನದಲ್ಲಿ ಇಡಲಾಗಿದೆ. 10 ಕ್ಕೂ ಹೆಚ್ಚಿನ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಮಾವಿನ ಹಣ್ಣು ಮಾರಲು ಸ್ಟಾಲ್ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳ ನೂರಾರು ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಮತನಾಡಿ, ಈ ಮೇಳದಲ್ಲಿ ಮಾವು ಬೆಳೆಯಲು ಆಸಕ್ತಿ ಹೊಂದಿದ ರೈತರಿಗೆ ಮಾವನ್ನು ಬೆಳೆಯುವ ಬಗ್ಗೆ ಹೊಸ ತಂತ್ರಜ್ಞಾನಗಳು ಹಾಗೂ ಮಾರುಕಟ್ಟೆ, ಗುಣಮಟ್ಟದ ಮಾವು ಮತ್ತು ಇಳುವರಿ ಹೇಗೆ ತೆಗೆಯಬೇಕೆಂದು ಎಂಬುದರ ಬಗ್ಗೆಯು ತಿಳಿಸಿಕೊಡಲಾಗುತ್ತಿದೆ ಹಾಗೂ ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುವ ಬಗ್ಗೆ ಹಾಗೂ ವಿವಿಧ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಕುರಿತು ಮಾಹಿತಿಯನ್ನು ಸಹ ನೀಡಲಾಗುತ್ತಿದೆಎಂದರು.
ಬಾಕ್ಸ್
"ಕೊಪ್ಪಳ ಕೇಸರ್ ಮಾವು" ಬ್ರಾಂಡ್ ಮಾವಿಗೆ ಅಧಿಕ ಬೇಡಿಕೆ
“ಕೊಪ್ಪಳ ಕೇಸರ್ ಮಾವು" ಬ್ರಾಂಡ್ನ ಬಾಕ್ಸ್ನಲ್ಲಿನ ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಸಾರ್ವಜನಿಕರಿಗೆಬಾಕ್ಸ್ನಲ್ಲಿನ ಹಣ್ಣುಗಳನ್ನು ಸಿಗುವಂತೆ ಅನುಕೂಲ ಮಾಡಲಾಗಿದೆ. ಇದರಿಂದ ಕೊಪ್ಪಳ ಕೇಸರ್ ಮಾವು ಹೆಚ್ಚು ಜನಪ್ರಿಯವಾಗಿದೆ, ಅಲ್ಲದೇ ಸಾರ್ವಜನಿಕರು ಬಾಕ್ಸ್ಗಳನ್ನು ಗಳನ್ನು ಮೆಚ್ಚಿಕೊಂಡಿರುತ್ತಾರೆ. ಹಾಗೂ ಈ ಬಾಕ್ಸ್ಗಳನ್ನು ರೈತರಿಗೆ ಆರ್.ಕೆ.ವಿ.ವಾಯ್. ಯೋಜನೆಯಡಿ ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ.
ಈ ಮೇಳವೂ ದಿನಾಂಕ 12.05.2026 ರಿಂದ 22.05.2026ರ ವರೆಗೆ 10 ದಿನಗಳ ಕಾಲ ತೋಟಗಾರಿಕೆ ಇಲಾಖಾ ಆವರಣದಲ್ಲಿ ನಡೆಯುತ್ತಿದ್ದು, ಬೇಡಿಕೆ ಅನುಸಾರ 10 ದಿನಗಳಿಗೂ ಹೆಚ್ಚಿನ ದಿನಗಳ ಕಾಲ ನೆಡೆಸಲು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು.
ಕೃಷ್ಣ ಉಕ್ಕುಂದ ಉಪ ನಿರ್ದೇಶಕ,ಬತೋಟಗಾರಿಕೆ ಇಲಾಖೆ, ಕೊಪ್ಪಳ.

ಎರಡು ವರ್ಷಗಳ ಬಳಿಕ ಮಹಿಳೆ, ಬಾಲಕ ಪತ್ತೆ ವಿಜಯವಾಡದಲ್ಲಿ ಪತ್ತೆ ಹಚ್ಚಿದ ಎಎಚ್ಟಿಯು ತಂಡ; ಕುಟುಂಬಕ್ಕೆ ಒಪ್ಪಣೆ