

12th May 2026

undefined
ಕೊಪ್ಪಳ.
ಮೇ.16 ಮತ್ತು 17 ರಂದು ನಿಗದಿಯಾಗಿದ್ದ
ಕನಕಗಿರಿ ಉತ್ಸವವನ್ನು ದಿಡೀರ್ ರದ್ದುಪಡಿಸಲಾಗಿದೆ.
ಈ ಕುರಿತು ಜಿಲ್ಲಾಡಳಿತದಿಂದ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.ಆಡಳಿತಾತ್ಮಕ ಕಾರಣಗಳಿಂದ, ಕನಕಗಿರಿ ಉತ್ಸವ 2026ನ್ನು ಮುಂದಿನ ತಿಂಗಳು ಜೂನ್ 10 ಮತ್ತು 11ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮೇ.16, 17 ರಂದು ನಡೆಸಲು ಈಗಾಗಲೇ ಎಲ್ಲಾ ಸಿದ್ದತೆಗಳು ಮಾಡಲಾಗಿತ್ತು. ಅಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಉತ್ಸವಕ್ಕೆ ಬರುವ ಕಲಾವಿದರು ಮತ್ತು ವಿವಿಧ ಕಾರ್ಯಕ್ರಮಗಳು, ಮೇ.14 ರಂದು ಕ್ರೀಡೋತ್ಸವ ಆಯೋಜನೆ ಮಾಡಿರುವ ಕುರಿತಂತೆ ಮಂಗಳವಾರ ಸಂಜೆಯಷ್ಟೆ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದರು. ಆದರೆ ತಡರಾತ್ರಿ ಉತ್ಸವ ಮುಂದೂಡಿರುವ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವುದು ಆಶ್ಚರ್ಯ ಮೂಡಿದೆ.

ಕೊಪ್ಪಳದಲ್ಲಿ ಹತ್ತು ದಿನಗಳ ಮಾವು ಮೇಳೆಕ್ಕೆ ಚಾಲನೆ: 200 ತಳಿಯ ಮಾವಿನ ಹಣ್ಣುಗಳ ಪ್ರದರ್ಶನ- 1 ಕೆಜಿಗೆ ರೂ.2.5ಲಕ್ಷ ಬೆಲೆಯ 'ಮೀಯಾ ಜಾಕಿ' ಮಾವು