

13th May 2026

undefined
ಗಂಗಾವತಿ.
ದೇಶದ ಜನ ಸಾಮಾನ್ಯರಿಗೆ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀಯವರು ನೀಡಿರುವ ಕರೆಯನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಸ್ವಾಗತಿಸಿದ್ದು, ಅವರ ಕೊರಿಕೆ ಸ್ವಾವಲಂಬಿ ಭಾರತದ ಸಂಕಲ್ಪವಾಗಿದೆ. ಇದನ್ನು ಯಾರು ಅಪಾರ್ಥ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಜಾಗತಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀಯವರ ಸಲಹೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ತಪ್ಪಾಗಿ ಅರ್ಥೈಸುತ್ತಿರುವುದು ದೇಶದ ಪ್ರಗತಿ ಪೂರಕವಲ್ಲ. ಹಿಂದೆ ದೇಶವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾಗ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರು “ವಾರದಲ್ಲಿ ಒಂದು ಹೊತ್ತು ಊಟ ಬಿಡಿ" ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದರು. ಆ ಒಂದು ಮನವಿಯಿಂದ ಇಂದು ದೇಶ ಕೃಷಿಯಲ್ಲಿ ಸ್ವಾವಲಂಬಿಯಾಗಲು ಸಹಕಾರಿಯಾಯಿತು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದಿಂದ ಇಂದು ಪ್ರತಿಯೊಂದು ರಾಷ್ಟ್ರವು ಸಂಕಷ್ಟಕ್ಕೆ ಒಳಗಾಗಿದೆ. ಇನ್ನು ಕೆಲವೊಂದು ದೇಶಗಳು ದೂರದೃಷ್ಟಿ ಆಲೋಚನೆ ಇಲ್ಲದೆ ಆಡಳಿತ ನಡೆಸಿದ ಪರಿಣಾಮವಾಗಿ ದಿವಾಳಿ ಅಂಚಿನಲ್ಲಿವೆ, ಮೋದಿಯವರ ಶಿಸ್ತುಬದ್ಧ ಆಡಳಿತದಿಂದಾಗಿ ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇಲ್ಲ. ಬಂಗಾರ, ಪೆಟ್ರೋಲ್, ಡಿಸೇಲ್ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲು ಕರೆನ್ಸಿಯಾಗಿ ಡಾಲರ್ ಬಳಕೆ ಮಾಡುವುದರಿಂದ ನಮ್ಮಲ್ಲಿರುವ ವಿದೇಶಿ ವಿನಿಮಯ ಖಾಲಿಯಾಗಿ ರೂಪಾಯಿ ಮೌಲ್ಯ ಕುಸಿತಗೊಂಡು ಆರ್ಥಿಕತೆಗೆ ಧಕ್ಕೆ ಉಂಟಾಗುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮೇಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಮನವಿಯನ್ನು ತಪ್ಪಾಗಿ ಅರ್ಥೈಯಿಸದೆ ವಿರೋಧ ಪಕ್ಷಗಳ ಹೇಳಿಕೆಗೆ ಕಿವಿಗೊಡದೆ ದೇಶದ ಹಿತದೃಷ್ಠಿಯಿಂದ “ ಸದೃಢ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲರ ಮೇಲಿದೆ. ಬಂಗಾರ, ಪೆಟ್ರೋಲ್, ಡಿಸೇಲ್ ಮಿತವಾಗಿ ಬಳಸಿ“ ಸದೃಢ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು" ಬನ್ನಿ ದೇಶ ಮೊದಲು ಎಂಬ ಭಾವನೆಯೊಂದಿಗೆ ನಾವೆಲ್ಲರು ಒಂದಾಗಿ ಮುನ್ನಡೆಯೋಣ ಮುನವಳ್ಳಿ ತಿಳಿಸಿದ್ದಾರೆ.

ಅಂಜನಾದ್ರಿಗೆ ದಾನ ನೀಡಿದ ಲೋಹಗಳ ದಾಖಲೆಗಳು ಪುನಃ ಪರಿಶೀಲನೆ- ಜಿಲ್ಲಾಧಿಕಾರಿ ಇಟ್ನಾಳ ಸ್ಪಷ್ಟನೆ

ಅಂಜನಾದ್ರಿಗೆ ಸಲ್ಲಿಸಿದ ಆಭರಣಗಳು ಪೂರ್ಣ ಬಂಗಾರವಲ್ಲ: ಪರಿಶೀಲನೆಯಲ್ಲಿ ಬಹಿರಂಗ- ದಾಖಲೆ ಪಡೆಯದೆ ಪೆಚೀಗೆ ಸಿಲುಕಿದ ಅಧಿಕಾರಿಗಳು

ಅಂಜನಾದ್ರಿಯ ಶ್ರೀ ಆಂಜನೇಯ ಮೂರ್ತಿಗೆ- 2.5 ಕೋಟಿ ಮೌಲ್ಯದ ಚಿನ್ನಾಭರಣ ಸಮರ್ಪಣೆ- ಎಎಂಆರ್ ಗ್ರುಪ್ ನ ಡಾ.ಎ.ಮಹೇಶರೆಡ್ಡಿ ಸೇವೆ

ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ- ನಾಗರಾಜ ನಂದಾಪುರ ನೇಮಕ: ಡಿಕೆಶಿ ಆದೇಶ- ದಲಿತ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ

ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿಗೆ ಜನ ಬೆಂಬಲ- ಬಿಜೆಪಿ ರಾಜ್ಯ ಸದಸ್ಯ ಡಾ. ಬಸವರಾಜ.ಕೆ ಹೇಳಿಕೆ