

16th May 2026

ಕೊಪ್ಪಳ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರಕಾರ ಈಗ ಸುಸೂತ್ರವಾಗಿ ನಡೆಯುತ್ತಿದೆ. ಮೂರು ವರ್ಷ ಸಿದ್ಧರಾಮಯ್ಯ ಅವರು ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿದ್ದಾರೆ. ಯಾವುದೇ ಕಪ್ಪು ಚುಕ್ಕಿ ಅವರ ಮೇಲೆ ಇಲ್ಲ. ಹೀಗಾಗಿ ಇನ್ನೆರಡು ವರ್ಷ ಅವರೇ ಸಿಎಂ ಆಗಿ ಮುಂದುವರೆದರೆ ೨೦೨೮ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂಬುದು ನನ್ನ ವೈಯಕ್ತಿ ಅಭಿಪ್ರಾಯ. ಮುಖ್ಯಮಂತ್ರಿ ಬದಲಾವಣೆ ಮಾಡಲು ಮುಂದಾದರೆ ಸಿದ್ಧರಾಮಯ್ಯ ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಲಿ. ಅವರೇ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮಂತ್ರಿ ಮಂಡಲ ವಿಸ್ತರಣೆ ಮಾಡುವಂತೆ ನಾನು ಕೂಡಾ ಸಲಹೆ ನೀಡಿದ್ದೇನೆ. ಮುಖ್ಯಮಂತ್ರಿ ಬದಲಾವಣೆ ಮಾಡುವುದು ಅನುಮಾನ. ಇನ್ನೆರಡು ವರ್ಷ ಸಿದ್ಧರಾಮಯ್ಯ ಅವರೇ ಮುಂದುವರೆಯುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರಿಗೆ ಈ ಕುರಿತು ನಾನು ಸಿದ್ಧರಾಮಯ್ಯ ಅವರನ್ನೇ ಮುಂದುವರೆಸಬೇಕು ಎಂದು ಹೇಳಿದ್ದೇನೆ. ಅವರನ್ನು ಬದಲಾವಣೆ ಮಾಡಿದರೆ ನೀವು ಮುಖ್ಯಮಂತ್ರಿಯಾಗಿ ಎಂದು ಸಹ ಮನವಿ ಮಾಡಿದ್ದೇನೆ. ಮೂರು ವರ್ಷ ಸಿಎಂ ಸಿದ್ಧರಾಮಯ್ಯ ಅವರು ಉತ್ತಮ ಆಡಳಿತ ನೀಡಿದ್ದಾರೆ. ಇನ್ನೆರಡು ವರ್ಷ ಅವರನ್ನೇ ಮುಂದುವರೆಸಿದರೆ ಯಾವುದೇ ಗೊಂದಲವಿಲ್ಲದೇ ಸರಕಾರ ನಡೆಯುತ್ತದೆ. ಮತ್ತು ಮುಂದಿನ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಮತ್ತು ಡಿಕೆಸಿ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂದು ನಾನು ಹೇಳುತ್ತೇನೆ. ಡಿ.ಕೆ.ಶಿವಕುಮಾರ ಸೇರಿದಂತೆ ಪರಮೇಶ್ವರ, ನಾನು ಸಹ ಸಿಎಂ ಆಗಲು ಅರ್ಹತೆ ಹೊಂದಿದ್ದೇವೆ. ಆದರೆ ಈ ರಾಜ್ಯದ ಹಿರಿಯ ನಾಯಕರು, ಅನುಭವಿಗಳಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದು ರಾಯರೆಡ್ಡಿ ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಸಿ, ಕಾಂಗ್ರೆಸ್ ಮುಖಂಡ ರಾಘವೇಂದ್ರ ಜೋಶಿ ಗುನ್ನಾಳ್, ಹನುಮಂತಗೌಡ ಚಂಡೂರ, ಮಹೇಶ ಹಳ್ಳಿ, ಹನುಮೇಶ ಕಡೆಮನಿ ಇದ್ದರು.

ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿಸಲು ಸಚಿವ ಎಚ್.ಕೆ. ಪಾಟೀಲ ಸೂಚನೆ

ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ- ರಾಜೀನಾಮೆ ನೀಡುವಂತೆ ಶಾಸಕ ರಾಯರೆಡ್ಡಿ ಅಗ್ರಹ

ಕುಡುತಿನಿಯಲ್ಲಿ ಉದ್ವಿಗ್ನತೆ ಜಮೀನಿಗೆ ತೆರಳುತ್ತಿದ್ದ ಭೂಸಂತ್ರಸ್ತ ರೈತರನ್ನು ವಶಕ್ಕೆ ಪಡೆದ ಪೊಲೀಸರು

ವಿಂಡ್ ಪವರ್ ನಿಯಂತ್ರಣ ನನ್ನ ಕೈಯಲ್ಲಿ ಇಲ್ಲ- ರಾಯರೆಡ್ಡಿ ಸ್ಪಷ್ಟನೆ: ಅಗ್ರಿಮೆಂಟ್ ಮಾಡಬಾರದು