

17th May 2026
undefined
ಹರೀಶ ಕುಲಕರ್ಣಿ
ಗಂಗಾವತಿ.
ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡು ರಾಜ್ಯದಲ್ಲಿ ತಮ್ಮ ಪಕ್ಷದ ಸರಕಾರವಿದ್ದರೂ ಕ್ಷೇತ್ರದ ಆಗು ಹೋಗುಗಳ ಕಡೆ ಗಮನ ಕೊಡದೇ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಬಿಎಲ್ಎ-2 ನೇಮಕ ಪ್ರಕ್ರೀಯೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೋಕ್ ಕೊಟ್ಟಿದ್ದು, ಗಂಗಾವತಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ಸಂಸದ ರಾಜಶೇಖರ ಹಿಟ್ನಾಳ್ ಹೆಗಲಿಗೆ ಹಾಕಿ ಮಹತ್ವದ ನಿರ್ಧಾರ ಕೈಗೊಂಡಿರುವುದು ಆಶ್ಚರ್ಯ ಮೂಡಿದ್ದು, ಅನ್ಸಾರಿ ಬೆಂಬಲಿಗರಲ್ಲಿ ಭಾರಿ ನಿರಾಸೆ ಮೂಡಿದೆ.
ಚುನಾವಣಾ ಆಯೋಗ ಈಗಾಗಲೇ ರಾಜ್ಯದಲ್ಲೂ ಸಹ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ಹಲವು ಪ್ರಕ್ರೀಯೆಯನ್ನು ಪ್ರಾರಂಭಿಸಿದೆ. ಮತದಾರ ಪ್ರಕ್ರೀಯೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಪರಿಶೀಲಿಸಲು ರಾಜಕೀಯ ಪಕ್ಷಗಳಿಗೆ ಬಿಎಲ್ಎ-2 ನೇಮಕ ಮಾಡಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಜವಬ್ದಾರಿಯನ್ನು ಅಲ್ಲಿನ ನಾಯಕರಿಗೆ ನೀಡಿದ್ದು, ಗಂಗಾವತಿ ಕ್ಷೇತ್ರದ ಜವಬ್ದಾರಿ ಮಾತ್ರ ರಾಜಶೇಖರ ಹಿಟ್ನಾಳ್ಗೆ ನೀಡಿದೆ.
ಕೆಪಿಸಿಸಿಯಿಂದ ಚುನಾವಣಾ ಆಯೋಗಕ್ಕೆ ಅಧಿಕೃತ ಪತ್ರ ರವಾನಿಸಿರುವ ಕೆಪಿಸಿಸಿ ಮತದಾರ ಪ್ರಕ್ರೀಯೆಯ ಕಾರ್ಯ ಚಟುವಟಿಕೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಬಿಎಲ್ಎ 2 ಮತ್ತಿತರ ಜವಬ್ದಾರಿ ಹಂಚಿಕೆ ಮಾಡಲು ಕೊಪ್ಪಳ ಜಿಲ್ಲೆಯ ಕೊಪ್ಪಳ ವಿಧಾನಸಭೆ ಕ್ಷೇತ್ರಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಕ್ಷೇತ್ರಕ್ಕೆ ಶಾಸಕ ಬಸವರಾಜ ರಾಯರೆಡ್ಡಿ, ಕನಕಗಿರಿ ಕ್ಷೇತ್ರಕ್ಕೆ ಸಚಿವ ಶಿವರಾಜ ತಂಗಡಗಿಗೆ ಜವಬ್ದಾರಿ ನೀಡಲಾಗಿದೆ. ಅದೇ ರೀತಿ ಕುಷ್ಟಗಿ ಕ್ಷೇತ್ರಕ್ಕೆ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ನೀಡಿದ್ದು, ಗಂಗಾವತಿಯಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ನೀಡುವ ಬದಲು ಸಂಸದ ರಾಜಶೇಖರ ಹಿಟ್ನಾಳ್ಗೆ ವಹಿಸಿದೆ. ಕಳೆದ ಚುನಾವಣೆಯಲ್ಲಿ ಅನ್ಸಾರಿ ಪರಾಭವಗೊಂಡಿದ್ದರೂ ಕ್ಷೇತ್ರದ ಕಾರ್ಯಕರ್ತರಿಗೆ ನಾಮ ನಿರ್ದೇಶನ ಮಾಡುವಲ್ಲಿ ಮತ್ತು ಕೆಲವು ಆಯಾ ಕಟ್ಟಿನ ಅಧಿಕಾರಿಗಳನ್ನು ನಿಯೋಜಿಸುವಲ್ಲಿ ಇಂದಿಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯೇ ಸರಕಾರದ ಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. ಆದರೆ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಅಥವಾ ಕಾರ್ಯಕರ್ತರ ಸಭೆ, ಪ್ರತಿಭಟನೆ ಮತ್ತಿತರ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ದೂರ ಉಳಿದಿದ್ದು, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಎಸ್ಐಆರ್ ಪ್ರಕ್ರೀಯೆಯನ್ನು ರಾಜಶೇಖರ ಹಿಟ್ನಾಳ್ಗೆ ವಹಿಸಿ ಕೆಪಿಸಿಸಿ ಆದೇಶ ಮಾಡಿದೆ.
ಗಂಗಾವತಿ ಕ್ಷೇತ್ರದಲ್ಲಿ ಅನ್ಸಾರಿ, ಶ್ರೀನಾಥ ಮತ್ತು ಮಲ್ಲಿಕಾರ್ಜುನ ನಾಗಪ್ಪ ನಡುವೆ ಭಿನ್ನಮತ ಇರುವುದರಿಂದ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿದೆ. ಮತ್ತು ಇಕ್ಬಾಲ್ ಅನ್ಸಾರಿ ಸಹ ಹಿಟ್ನಾಳ್ ಕುಟುಂಬ, ಸಚಿವ ತಂಗಡಗಿ ಅವರು ಚುನಾವಣೆಯಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಹಲವು ಭಾರಿ ಆಡಿಯೋ ಸಂದೇಶ ರವಾನಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜಶೇಖರ ಹಿಟ್ನಾಳ್ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದು, ಕೆಪಿಸಿಸಿ ಬಿಎಲ್ಎ-೨ ನೇಮಕ ಪ್ರಕ್ರೀಯೆಯ ಹೊಣೆ ರಾಜಶೇಖರ ಹಿಟ್ನಾಳ್ಗೆ ವಹಿಸಿರುವುದು ಈಗ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.
ಕ್ಷೇತ್ರದ ರಾಜಕೀಯ ಚಟುವಟಿಕೆಯಿಂದ ಅನ್ಸಾರಿ ಸಂಪೂರ್ಣ ದೂರಾಗಿದ್ದು, ಇತ್ತೀಚಿಗೆ ಗಂಗಾವತಿ ನಗರ ಬ್ಲಾಕ್ ಅಧ್ಯಕ್ಷರ ನೇಮಕವನ್ನು ಅನ್ಸಾರಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ನಾಗರಾಜ ನಂದಾಪುರಗೆ ಮಾಡಿರುವುದು ಅನ್ಸಾರಿ ಪಾಳಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಈಗ ಬಿಎಲ್ಓ ನೇಮಕ ಪ್ರಕ್ರೀಯೆ ಅಧಿಕಾರ ಸಂಸದ ರಾಜಶೇಖರ ಹಿಟ್ನಾಳ್ಗೆ ವಹಿಸಿರುವ ಕೆಪಿಸಿಸಿ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ.
ಬಾಕ್ಸ್:
ಗಂಗಾವತಿ ಕ್ಷೇತ್ರದ ಜವಬ್ದಾರಿ ಹಿಟ್ನಾಳ್ಗೆ ಸ್ವಾಗತ
ರಾಜ್ಯಾದ್ಯಂತ ಚುನಾವಣೆ ಮತದಾರ ಪ್ರಕ್ರೀಯೆ ನಡೆಯುತ್ತಿದೆ. ಈ ಪ್ರಕ್ರೀಯೆಗೆ ಪ್ರತಿ ಕ್ಷೇತ್ರದಲ್ಲಿ ಬಿಎಲ್ಎ 2 ನೇಮಕ ಮಾಡಲು ಎಲ್ಲಾ ಕ್ಷೇತ್ರದಲ್ಲಿ ಮುಖಂಡರಿಗೆ ಕೆಪಿಸಿಸಿಯಿಂದ ಜವಬ್ದಾರಿ ನೀಡಲಾಗಿದೆ. ಅದೇ ರೀತಿ ಗಂಗಾವತಿ ಕ್ಷೇತ್ರದ ಜವಬ್ದಾರಿಯನ್ನು ಸಂಸದ ರಾಜಶೇಖರ ಹಿಟ್ನಾಳ್ ಅವರಿಗೆ ನೀಡಿರುವುದು ನಾನು ಸ್ವಾಗತಿಸುತ್ತೇನೆ., ಗಂಗಾವತಿಯಲ್ಲಿ ಪಕ್ಷವನ್ನು ಮುನ್ನಡೆಸುವುದು, ಸಂಘಟಿಸುವಲ್ಲಿ ಹಲವು ಮುಖಂಡರು ನಿಷ್ಕ್ರೀಯರಾಗಿದ್ದಾರೆ. ಬಿಎಲ್ಎ ನೇಮಕ ಪ್ರಕ್ರೀಯೆ ಹೊಣೆ ಸಂಸದರಿಗೆ ನೀಡಿರುವುದು ಅತ್ಯಂತ ಸಮಂಜಸವಾಗಿದೆ. ಇದರಿಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ಸಮಸ್ಯೆ ತಿಳಿಸಲು ಅನುಕೂಲವಾಗಲಿದೆ.
ಸೋಮನಾಥ ಪಟ್ಟಣಶೆಟ್ಟಿ, ವಕೀಲರು, ಕಾಂಗ್ರೆಸ್ ಮುಖಂಡರು, ಗಂಗಾವತಿ.

ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿಸಲು ಸಚಿವ ಎಚ್.ಕೆ. ಪಾಟೀಲ ಸೂಚನೆ

ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ- ರಾಜೀನಾಮೆ ನೀಡುವಂತೆ ಶಾಸಕ ರಾಯರೆಡ್ಡಿ ಅಗ್ರಹ

ಕುಡುತಿನಿಯಲ್ಲಿ ಉದ್ವಿಗ್ನತೆ ಜಮೀನಿಗೆ ತೆರಳುತ್ತಿದ್ದ ಭೂಸಂತ್ರಸ್ತ ರೈತರನ್ನು ವಶಕ್ಕೆ ಪಡೆದ ಪೊಲೀಸರು

ಸಿದ್ಧರಾಮಯ್ಯ ಬಿಟ್ಟರೆ ಸಿಎಂ ಸ್ಥಾನಕ್ಕೆ ಖರ್ಗೆ ಸೂಕ್ತ ವ್ಯಕ್ತಿ- ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ