

18th May 2026

ಗಂಗಾವತಿ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹಿಟ್ನಾಳ್ ಕುಟುಂಬಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಾದ್ಯಂತ ತಕ್ಕ ಪಾಠ ಕಲಿಸಲಾಗುವುದು ಎಂದು ಮಾಜಿ ನಗರಸಭೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶೇಖ್ನಬಿಸಾಬ್ ಎಚ್ಚರಿಕೆ ನೀಡಿದ್ದಾರೆ.
ಬಿಎಲ್ಎ-೨ ನೇಮಕ ಪ್ರಕ್ರೀಯೆಯಲ್ಲಿ ಇಕ್ಬಾಲ್ ಅನ್ಸಾರಿಗೆ ಕೋಕ್, ಗಂಗಾವತಿ ಕ್ಷೇತ್ರದ ಉಸ್ತುವಾರಿ ಸಂಸದ ರಾಜಶೇಖರ ಹಿಟ್ನಾಳ್ ಹೆಗಲಿಗೆ ಎಂಬ ಸಮರ್ಥವಾಣಿ ವರದಿಯನ್ನು ಗಮನಿಸಿರುವ ಅವರು ಕೆಪಿಸಿಸಿ ಮತ್ತು ಹಿಟ್ನಾಳ್ ಸಹೋದರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪ್ರಮುಖ ಕಾರಣರಾಗಿದ್ದಾರೆ. ವಿಶೇಷವಾಗಿ ಹಿಟ್ನಾಳ್ ಸಹೋದರರು ಶಾಸಕರು, ಸಂಸದರಾಗಿ ಆಯ್ಕೆಯಾಗಲು ಇಕ್ಬಾಲ್ ಅನ್ಸಾರಿ ಬೆಂಬಲವಾಗಿ ನಿಂತಿದ್ದರು. ಅನ್ಸಾರಿಯಿಂದಾಗಿ ಜಿಲ್ಲೆಯ ಎಲ್ಲಾ ಮುಸ್ಲಿಂರು ಮತ್ತು ಅವರ ಅಭಿಮಾನಿ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಸಂಸದ ಹಿಟ್ನಾಳ್ ಅವರನ್ನು ಆಯ್ಕೆ ಮಾಡಲು ಕಾರಣರಾಗಿದ್ದಾರೆ. ಆದರೆ ಇಂತಹ ರಾಜಕೀಯ ಶಕ್ತಿ ತುಂಬಿರುವ ಅನ್ಸಾರಿಗೆ ಹಿಟ್ನಾಳ್ ಕುಟುಂಬ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ಇಕ್ಬಾಲ್ ಅನ್ಸಾರಿಗೆ ರಾಜಕೀಯವಾಗಿ ಸ್ವಂತ ಶಕ್ತಿ ಇದೆ ಎಂಬುದನ್ನು ಅವರು ಎರಡು ಭಾರಿ ಶಾಸಕರಾಗಿ ತೊರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅತ್ಯಂತ ನಿಷ್ಟೆ ಹೊಂದಿರುವ ಇಕ್ಬಾಲ್ ಅನ್ಸಾರಿ ಅವರು ಪ್ರತಿಯೊಂದು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತು ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುವಂತೆ ಪ್ರೇರೆಪಿಸುತ್ತಿದ್ದಾರೆ. ಆದರೆ ಕೆಪಿಸಿಸಿ ಮತ್ತು ಹಿಟ್ನಾಳ್ ಕುಟುಂಬ ಅನ್ಸಾರಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಈಗಲಾದರೂ ಕೆಪಿಸಿಸಿ ನಾಯಕರು ಮತ್ತು ಹಿಟ್ನಾಳ್ ಸಹೋದರರು ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಿಗೆ ಅನ್ಸಾರಿ ಅವರಿಗೆ ಜವಬ್ದಾರಿ ನೀಡಬೇಕು. ಇಲ್ಲದಿದ್ದರೆ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಪ್ರತ್ಯೇಕ ಕಾಂಗ್ರೆಸ್ ಬಣ ಮಾಡಿಕೊಂಡು ಜಿಲ್ಲೆಯಾದ್ಯಂತ ಹಿಟ್ನಾಳ್ ಕುಟುಂಬದ ವಿರುದ್ಧ ಕೆಲಸ ಮಾಡಲು ಸಜ್ಜಾಗಲಿದ್ದಾರೆ ಎಂದು ಶೇಖ್ ನಬಿಸಾಬ್ ಅವರು ಎಚ್ಚರಿಸಿದ್ದಾರೆ.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ