

27th May 2026

ಕೊಪ್ಪಳ.
ಚುನಾವಣಾ ಆಯೋಗ ರಾಜ್ಯದಲ್ಲಿ ಕೈಗೊಂಡಿರುವ ಮತದಾರ ಪಟ್ಟಿ ಪರಿಸ್ಕರಣೆ ಕುರಿತು ಮಾಹಿತಿ ರವಾನಿಸಲು ಕರೆಯಲಾಗಿದ್ದ ಸಭೆಗೆ ಗೈರಾಗಿರುವ ರಾಜ್ಯದ ಕೆಪಿಸಿಸಿಯ 3 ಜನ ಉಪಾಧ್ಯಕ್ಷರನ್ನು ಮತ್ತು 29 ಜನ ಪ್ರಧಾನ ಕಾರ್ಯಗಳಿಗೆ ಕಾಂಗ್ರೆಸ್ ಕೋಕ್ ನೀಡಿದೆ. ಈ ಪಟ್ಟಿಯಲ್ಲಿ ಗಂಗಾವತಿಯ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಆರ್.ಶ್ರೀನಾಥ ಅವರನ್ನು ಸಹ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಎಐಸಿಸಿ ಸೂಚನೆ ಮೆರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶ ಮಾಡಿ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಎಸ್ಐಆರ್ ಕುರಿತಂತೆ ಕಾಂಗ್ರೆಸ್ ನಡೆ ಮತ ರಕ್ಷಣೆ ಕಡೆ ಎಂಬ ತಿರ್ಮಾನವನ್ನು ಅನುಷ್ಟಾನಗೊಳಿಸಲು ಮೇ.25ರಂದು ಕೆಪಿಸಿಸಿ ಬೆಂಗಳೂರಿನಲ್ಲಿ ರಾಜ್ಯದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನೊಳಗಂಡಂತೆ ಇನ್ನಿತರ ಜವಬ್ದಾರಿ ಇರುವವರನ್ನು ಸಭೆಗೆ ಅಹ್ವಾನಿಸಲಾಗಿತ್ತು. ಈ ಸಭೆಗೆ ಬಹಳ ಜನ ಗೈರಾಗಿದ್ದರು. ಇದು ಎಐಸಿಸಿ ಕೆಂಗಣ್ಣಿಗೆ ಗುರಿಯಾಗಿತ್ತು. ಪಕ್ಷದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಿಕೇತ ರಾಜ, ಭಾವನಾ ರಾಮಣ್ಣ ಸೇರಿದಂತೆ ಮೂರು ಜನ ರಾಜ್ಯ ಉಪಾಧ್ಯಕ್ಷರು ಮತ್ತು ಹಲವು ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ವಜಾಗೊಂಡವರ ಪಟ್ಟಿಯನ್ನು ಕೆಪಿಸಿಸಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಹೆಚ್.ಆರ್.ಶ್ರೀನಾಥ ಅವರ ಹೆಸರು ಕೂಡಾ ಇದೆ.
ದೇಶದಾದ್ಯಂತ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರೀಯೆಯನ್ನು ನಡೆಸುತ್ತಿದೆ. ಈ ಪ್ರಕ್ರೀಯೆಯಿಂದಾಗಿ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಮತದಾರರನ್ನು ಕೈಬಿಡಲಾಗಿದೆ ಎಂದು ರಾಹುಲುಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈಗ ಎಸ್ಐಆರ್ ಪ್ರಕ್ರೀಯೆ ರಾಜ್ಯದಲ್ಲೂ ಪ್ರಾರಂಭಿಸುವ ಕುರಿತು ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಮತದಾರರನ್ನು ಕೈಬಿಡದಂತೆ ಕಾಂಗ್ರೆಸ್ ಎಚ್ಚರಿಕೆವಹಿಸಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದಿಂದ ಎಸ್ಐಆರ್ ಪ್ರಕ್ರೀಯೆಯಲ್ಲಿ ಕಣ್ಣಿಡುವಂತೆ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಒದಗಿಸಲು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಗೆ ಕೆಪಿಸಿಸಿ ಪ್ರಮುಖ ಹುದ್ದೆ ಹೊಂದಿದವರು ಸಹ ಗೈರಾಗಿರುವುದು ಪಕ್ಷಕ್ಕೆ ಮುಜಗರ ಉಂಟಾಗಿದೆ. ಈ ವಿಷಯವನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿ ಸಭೆಗೆ ಗೈರಾದವಿಗೆ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಭೆಗೆ ಗೈರಾದವವನ್ನು ಹುದ್ದೆಯಿಂದ ವಜಾಗೊಳಿಸಿದ್ದು, ಮುಂದೆ ಅವರಿಂದ ಸ್ಪಷ್ಟನೆ ಬಂದ ತಕ್ಷಣ ಮತ್ತೆ ಅವರಿಗೆ ಪ್ರಮುಖ ಹುದ್ದೆ ನೀಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಬಾಕ್ಸ್:
ಅನ್ಸಾರಿಗೆ ಕೊಕ್ ಬೆನ್ನಲ್ಲೆ ಹೆಚ್.ಆರ್.ಶ್ರೀನಾಥಗೂ ಕಾಂಗ್ರೆಸ್ ಕೋಕ್.!
ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆಯಲ್ಲಿ ಎಸ್ಐಆರ್ ಪ್ರಕ್ರೀಯೆಯಲ್ಲಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಕೋಕ್ ನೀಡಿದ್ದ ಕೆಪಿಸಿಸಿ ಬಿಎಲ್ಎ ಜವಬ್ದಾರಿಯನ್ನು ಸಂಸದ ರಾಜಶೇಖರ ಹಿಟ್ನಾಳ್ ಅವರಿಗೆ ನೀಡಿತ್ತು. ಈ ವಿಷಯ ಜಿಲ್ಲೆಯಲ್ಲಿ ಗಂಭೀರವಾಗಿ ಚರ್ಚೆಯಾಗಿತ್ತು. ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಹೆಚ್.ಆರ್.ಶ್ರೀನಾಥ ಇತ್ತಿಚೀಗೆ ಆರೋಪಿಸಿದ್ದರು. ಇದರ ಬೆನ್ನಲ್ಲೆ ಶ್ರೀನಾಥ ಅವರು ಎಸ್ಐಆರ್ ಕುರಿತ ಮಾಹಿತಿ ಒದಗಿಸಲು ಅಹ್ವಾನಿಸಿದ್ದ ಕೆಪಿಸಿಸಿ ಸಭೆಗೆ ಗೈರಾಗಿರುವ ಕಾರಣ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿರುವ ಆದೇಶ ಕೆಪಿಸಿಸಿಯಿಂದ ಹೊರ ಬಿದ್ದಿರುವುದು ಗಂಗಾವತಿ ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

*ಬಳ್ಳಾರಿಯಲ್ಲಿ ಓಬಿಸಿ ಘಟಕಕ್ಕೆ ಹೊಸ ಚೈತನ್ಯ ತುಂಬಿದ ಡಿ.ಟಿ. ಶ್ರೀನಿವಾಸ್ ಭೇಟಿ* *ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಒಗ್ಗಟ್ಟಾಗಲಿ: ಡಿ.ಟಿ. ಶ್ರೀನಿವಾಸ್*

ಎನ್.ಐ.ಎ.ಎಸ್. ಸಂಸ್ಥೆ ಸಹಕಾರದೊಂದಿಗೆ ಲಕ್ಕುಂಡಿಯ ನೂರೊಂದು ಬಾವಿ ದೇವಾಲಯಗಳನ್ನು ದೇಶಕ್ಕೆ ಅನಾವರಣಗೊಳಿಸಲಾಗುವುದು: ಸಚಿವ ಎಚ್.ಕೆ. ಪಾಟೀಲ