

3rd June 2026

undefined
ಗಂಗಾವತಿ.
ಕಳೆದ ಎರಡು ವರ್ಷದಿಂದ ತಿಕ್ಕಾಟ ನಡೆದಿದ್ದ ಗಂಗಾವತಿ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್) ಆದ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಿರಿಯ ಮುಖಂಡರ ಸಂದಾನದ ಮೂಲಕ ನ್ಯಾಯವಾದಿ ಚನ್ನಪ್ಪ ಮಳಗಿ ಅವರು ಆಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕನಕಪ್ಪ ಮರಿಯಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣಾ ಪ್ರಕ್ರೀಯೆಯಲ್ಲಿ ಚುನಾವಣಾಧಿಕಾರಿ ಚಂದ್ರಶೇಖರ ಅವರು ಘೋಷಣೆ ಮಾಡಿದರು. ಆಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲೆ ಪೈಪೋಟಿ ನಡೆದಿದ್ದರಿಂದ ಕಳೆದ ಮೂರು ಭಾರಿ ಚುನಾವಣೆ ಮುಂದೂಡಲಾಗಿತ್ತು. ಕಳೆದ 19.7.25ರಲ್ಲಿ ನಾಮಪತ್ರ ಸಲ್ಲಿಕೆಯಾಗಿ ಸದಸ್ಯರ ಗೈರಿನಿಂದಾಗಿ ಆಯ್ಕೆ ಪ್ರಕ್ರಿಯೇ ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ಆದ್ಯಕ್ಷ ಸ್ಥಾನಕ್ಕೆ ಜೋಗದ ನಾರಾಯಣಪ್ಪ ನಾಯಕ ಮತ್ತು ಚನ್ನಪ್ಪ ಮಳಿಗಿ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ ಈ ಮತ್ತು ಕನಕಪ್ಪ ಅವರು ನಾಮಪತ್ರ ಸಲ್ಲಿಸಿದ್ದರು.
ಇಂದು ಮತ್ತೊಮ್ಮೆ ಚುನಾವಣೆ ಘೋಷಣೆಯಾಗಿದ್ದು, ಕಳೆದ ಜುಲೈ 19 ರಂದು ಸಲ್ಲಿಸಿದ್ದ ನಾಮಪತ್ರಗಳನ್ನು ಪರಿಗಣಿಸಲಾಗಿತ್ತು.
ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಕಚೇರಿಯಲ್ಲಿ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಜಿ.ವೀರಪ್ಪ, ಚನ್ನಪ್ಪ ಮಳಗಿ, ನಾರಾಯಣಪ್ಪ ನಾಯಕ ಸೇರಿದಂತೆ ಸಂಘದ ನಿರ್ದೇಶಕರೊಂದಿಗೆ ಚರ್ಚಿಸಿ ಸಂದಾನ ಮಾಡಲಾಯಿತು. ಹೀಗಾಗಿ ನಾಮಪತ್ರ ಸಲ್ಲಿಸಿದ್ದ ನಾರಾಯಣಪ್ಪ ನಾಯಕ ಮತ್ತು ಈ.ನಾಗರಾಜ ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಅಧ್ಯಕ್ಷರಾಗಿ ಚನ್ನಪ್ಪ ಮಳಿಗಿ, ಉಫಾಧ್ಯಕ್ಷರಾಗಿ ಕನಕಪ್ಪ ಮರಿಯಪ್ಪ ಅವರನ್ನು ಅವಿರೋಧವಾಗಿ ಘೊಷಣೆ ಮಾಡಲಾಯಿತು.
ನಂತರ ಎಲ್ಲಾ ನಿರ್ದೇಶಕರು ನೂತನ ಅಧ್ಯಕ್ಷ ಉಒಅಧಗಯಕ್ಷರಿಗೆ ಅಭಿನಂದಿಸಿದರು.

ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಲು ಸೈಯದ್ ಮೀರಾ ಅಗ್ರಹ- ಕಡೆಗಣಿಸಿದರೆ ಕಾಂಗ್ರೆಸ್ ಗೆ ದೊಡ್ಡ ನಷ್ಟ

ಎಸ್ಐಆರ್ ಸಭೆಗೆ ಗೈರಾದ ಪದಾಧಿಕಾರಿಗಳಿಗೆ ಕಾಂಗ್ರೆಸ್ ಕೊಕ್- ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ ವಜಾ: ಡಿಕೆಶಿ ಆದೇಶ- ಕೆಪಿಸಿಸಿ 3 ಉಪಾಧ್ಯಕ್ಷರು 29 ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಕ್ರಮ

*ಬಳ್ಳಾರಿಯಲ್ಲಿ ಓಬಿಸಿ ಘಟಕಕ್ಕೆ ಹೊಸ ಚೈತನ್ಯ ತುಂಬಿದ ಡಿ.ಟಿ. ಶ್ರೀನಿವಾಸ್ ಭೇಟಿ* *ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಒಗ್ಗಟ್ಟಾಗಲಿ: ಡಿ.ಟಿ. ಶ್ರೀನಿವಾಸ್*