

7th June 2026

ಗಂಗಾವತಿ(ಸಮರ್ಥವಾಣಿ ನ್ಯೂಜ್)
ಕೌಟುಂಬಿಕ ಕಲಹದ ಉನ್ಮಾದದಲ್ಲಿ ಜನ್ಮ ನೀಡಿದ ತಂದೆ ಹಾಗೂ ಸ್ವಂತ ಅಕ್ಕನ ಮೇಲೆಯೇ ತಮ್ಮನೊಬ್ಬ ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿ, ಇಬ್ಬರನ್ನೂ ಹತ್ಯೆ ಮಾಡಿರುವ ಅತ್ಯಂತ ಕ್ರೂರ ಘಟನೆ ತಾಲೂಕಿ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ.
ದಾಳಿಯಲ್ಲಿ ಅಕ್ಕ ಸ್ಥಳದಲ್ಲೇ ಮೃತಪಟ್ಟರೆ, ತಂದೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆಯ ವಿವರ:
ಹೊಸ ಅಯೋಧ್ಯೆ ಗ್ರಾಮದ ವೆಂಕಟನಾಯ್ಡು ಅವರ ಕುಟುಂಬ ರಾತ್ರಿ ಅಂಗಳದಲ್ಲಿ ಕುಳಿತು ಮಾವಿನ ಹಣ್ಣು ಸವಿಯುತ್ತಿತ್ತು. ಮಳೆ ಬಂದ ಕಾರಣ ಎಲ್ಲರೂ ಮನೆಯ ಒಳಗಡೆ ಹೋದಾಗ, ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಆನ್ ಲೈನ್ ಗೇಮ್ ಆಡದಿದಂತೆ ಬುದ್ದಿವಾದ ಹೇಳಿದ್ದಕ್ಕೆ
ಕೋಪ ನೆತ್ತಿಗೇರಿಸಿಕೊಂಡ ಕಿರಿಯ ಮಗ (ತಮ್ಮ) ಸಾಯಿ ವೆಂಕಟ ಮಣಿ ದೀಪ (18), ಮನೆಯಲ್ಲಿದ್ದ ಚೂಪಾದ ಚಾಕು ಹಿಡಿದು ಸ್ವಂತ ಕುಟುಂಬದವರ ಮೇಲೆಯೇ ರಕ್ತಪಿಪಾಸುವಿನಂತೆ ಮುಗಿಬಿದ್ದಿದ್ದಾನೆ.
ಅಕ್ಕನ ಭೀಕರ ಹತ್ಯೆ:
ತನ್ನ ಸ್ವಂತ ಅಕ್ಕ ಪ್ರಗತಿ (19) ಅವರ ಕುತ್ತಿಗೆ ಸೀಳಿ ಮಂಚದ ಮೇಲೆಯೇ ಕೊಲೆ ಮಾಡಿದ್ದಾನೆ.
ತಂದೆಯ ಸಾವು:
ತಡೆಯಲು ಬಂದ ತಂದೆ ವೆಂಕಟನಾಯ್ಡು ಅವರಿಗೆ ಮನಬಂದಂತೆ ಇರಿದಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಂದೆಯೂ ಕೊನೆಯುಸಿರೆಳೆದಿದ್ದಾರೆ.
ತಾಯಿಗೆ ಗಂಭೀರ ಗಾಯ: ತಾಯಿ ಸೌಜನ್ಯ ಅವರಿಗೂ ತೀವ್ರವಾಗಿ ಇರಿಯಲಾಗಿದ್ದು, ಪ್ರಸ್ತುತ ಬಳ್ಳಾರಿ ವಿಮ್ಸ್ ತೀವ್ರ ನಿಗಾ ಘಟಕದಲ್ಲಿ (ICU) ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಬಾಗಿಲು ಮುರಿದಾಗ ಕಂಡಿತು ನರಕ:
ಒಳಗಿನಿಂದ ತಂದೆ ವೆಂಕಟನಾಯ್ಡು ಅವರು ತೆಲುಗಿನಲ್ಲಿ "ಸಾಯಿ... ತಲುವು ತೀ..." (ಸಾಯಿ ಬಾಗಿಲು ತೆಗಿ) ಎಂದು ಪ್ರಾಣಭಿಕ್ಷೆ ಬೇಡುತ್ತಾ ಚೀರಾಡುತ್ತಿದ್ದನ್ನು ಕೇಳಿ ವೃದ್ಧ ತಾತಾರಾವ್ ಹಾಗೂ ಪಕ್ಕದ ಮನೆಯ ಪ್ರಭಾಕರ ಹಾರೆಯಿಂದ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಆಗ ಇಡೀ ಕೋಣೆ ರಕ್ತದಿಂದ ಮಾರ್ಪಟ್ಟಿತ್ತು. ಅಕ್ಕ ಮತ್ತು ತಂದೆಯನ್ನು ಮುಗಿಸಿದ ಪಾಪಿ ತಮ್ಮ ಸಾಯಿ ವೆಂಕಟ ತಾನೂ ಕುತ್ತಿಗೆ ಕೊಯ್ದುಕೊಂಡು ನೆಲದ ಮೇಲೆ ಒದ್ದಾಡುತ್ತಿದ್ದನು.
ಆರೋಪಿ ಪೊಲೀಸ್ ವಶದಲ್ಲಿ ಚಿಕಿತ್ತೆ
ಗ್ರಾಮಸ್ಥರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ತಂದೆ ಮತ್ತು ಅಕ್ಕನನ್ನು ಕಟುಕನಂತೆ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ನರಹಂತಕ ಸದ್ಯ ಪೊಲೀಸರ ಕಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ