

12th June 2026

ಗಂಗಾವತಿ.
ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿಯಲ್ಲಿ ಮಾತನಾಡುತ್ತಿರುವಾಗ. ಕಾರಟಗಿ ತಾಲೂಕಿನ ಯರಡೊಣಾ ಗ್ರಾಮ ಪಂಚಾಯತ ಪಿಡಿಓ ಶಿವರಾಜ ಎಂಬುವವರು ಅವಾಚ್ಚ ಶಬ್ಧದಿಂದ ನಿಂದನೆ ಮಾಡಿ ನಾಲಿಗೆ ಹರಿಬಿಟ್ಟು ಮಾತನಾಡಿದ್ದು, ತಕ್ಷಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ವಕೀಲ ಮಲ್ಲೇಶಪ್ಪ ಅವರು ದೂರು ನೀಡಿದ್ದಾರೆ.
ಈ ಕುರಿತು ದೂರು ನೀಡಿರುವ ಪ್ರತಿಯನ್ನು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಕಾನೂನು ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ನಿಂದ ಪುಸ್ತಕಗಳನ್ನು ಖರೀದಿ ಮಾಡಿ ವಿತರಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ತಮ್ಮ ಪಂಚಾಯತಗೆ ಅರ್ಜಿ ಸಲ್ಲಿಸಿರವ ವಿದ್ಯಾರ್ಥಿಗಳಿಗೆ ಪುಸ್ತಕಗಳು ಖರೀದಿಸುವಲ್ಲಿ ಯಾಕೆ ವಿಳಂಬವಾಗಿದೆ ಎಂದು ಫೋನ್ ಮಾಡಿ ಚರ್ಚೆ ಮಾಡುವ ಸಂದರ್ಭದಲ್ಲಿ ಪಿಡಿಓ ಶಿವರಾಜ ಅವರು ತಮಗೆ ಕೆಟ್ಟ ಶಬ್ಧಗಳಿಂದ ಮಾತನಾಡಿ ಅವಮಾನ ಮಾಡಿದ್ದಾರೆ. ನಾನು ವಕೀಲನೆಂದು ಪರಿಚಯ ಮಾಡಿಕೊಂಡು ನಯವಾಗಿ ಮಾತನಾಡಿದರೂ ಇದಕ್ಕೆ ಅವರು ವ್ಯತಿರಿಕ್ತವಾಗಿ ಮಾತನಾಡಿ ಜವಬ್ದಾರಿಯುತ ಸ್ಥಾನದಲ್ಲಿರುವ ಪಿಡಿಓ ಎಂಬುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ವಕೀಲ ಮಲ್ಲೇಶಪ್ಪ ಅವರು ಮೋಬೈಲ್ ನಲ್ಲಿ ಮಾತನಾಡಿರುವ ಸಂಭಾಷಣೆ ಕ್ಲಿಪ್ ಸಮೇತ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿ ಪ್ರತಿಯನ್ನು ಕಲಬುರ್ಗಿ ಪ್ರಾದೇಶಿಕ ಆಯುಕ್ತರು, ಕೊಪ್ಪಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಮತ್ತು ಕಾರಟಗಿ ತಾಪಂ ಇಓ ಗೆ ರವಾನಿಸಿದ್ದಾರೆ.

ಗಾಲಿ ಲಕ್ಷ್ಮೀ ಅರುಣ ಜನ್ಮದಿನ: ಅನುಗ್ರಹ ಆಶ್ರಮದಲ್ಲಿ ಅನ್ನದಾನ, ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮ