

19th June 2026

ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೆರಮಕ ಮಾಡಲಾಗಿದ್ದು, ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಶುಕ್ರವಾರ ಪಟ್ಟಿ ಬಹಿರಂಗಗೊಳಿಸಿದ್ದು, ತಮ್ಮ ಜಿಲ್ಲಾಧ್ಯಕ್ಷತೆಯಲ್ಲಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕೆ. ಮಹೇಶ, ಮನೋಹರಗೌ ಹೇರೂರ, ಗೀತಾ ಮುತ್ತಾಳ, ಅರವಿಂದಗೌಡ ಪಾಟೀಲ್, ವಿರೂಪಾಕ್ಷ ದನಕನದೊಡ್ಡಿ, ಡಾ. ಕೊಟ್ರೇಶ ಶೆಡ್ಡಿ, ಮಹಾಂತೇಶ ಸಜ್ಜನ್, ಸ್ವರಾಜ ವಕೀಲರು ಅವರನ್ನು ನೇಮಕ ಮಾಡಿದ್ದು, ಜಿಲ್ಲಾ ಖಜಾಂಚಿಯಾಗಿ ವೆಂಕಟಪ್ಪಚಾರ ಗಂಗನಾಳ, ಜಿಲ್ಲಾ ಕಾರ್ಯದರ್ಶಿಗಳಾಗಿ ಜೆ.ಬಿ ಸೋಮಶೇಖರಗೌಡ, ಸಣ್ಣ ದುರಗಪ್ಪ ವಡಿಗೇರಿ, ಲಲಿತಾ ನಾಗರಾಜ, ವಿಶ್ವನಾಥ ಮರಿಬಸಪ್ಪನವರ, ವಿಜಯ ಪದ್ಮ ಜಿ, ಲಕ್ಷ್ಮೀದೇವಿ ಹಣವಾಳ, ಡಿ. ಮಲ್ಲಣ್ಣ, ಮಹೇಶ್ವರಿ ಸಾವಳಗಿಮಠ ಮತ್ತು ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾಗಿ ಶ್ರೀನಿವಾಸ ಧೂಳ, ಜಿಲ್ಲಾ ವಕ್ತಾರರಾಗಿ ಪ್ರದೀಪ ಪಲ್ಲೆದ ಹಿಟ್ನಾಳ, ಸಹ ವಕ್ತಾರರಾಗಿ ಮಧುರ ಕರ್ಣಂ, ಜಿಲ್ಲಾ ಮಾಧ್ಯಮ ಸಂಚಾಲಕರಾಗಿ ಚಂದ್ರಶೇಖರ ಅಕ್ಕಿ ಮತ್ತು ಮಾಧ್ಯಮ ಸಹ ವಕ್ತಾರರಾಗಿ ರಾಜು ವಸ್ತ್ರದ ಅವರನ್ನು ನೇಮಕ ಮಾಡಿದ್ದಾರೆ.
ಅದೇ ರೀತಿ ಜಿಲ್ಲೆಯ ಬಿಜೆಪಿ ವಿವಿಧ ಪ್ರಕೋಷ್ಟಗಳಿಗೂ ನೇಮಕ ಮಾಡಿದ್ದು,
ಮಂಜುನಾಥ ನಾಡಗೌಡ್ರು, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕರಾಗಿ ಅರ್ಜುನ ರಾಯ್ಕರ್ ರ್ಪ್ರಕೋಷ್ಠಗಳ ಜಿಲ್ಲಾ ಸಹ ಸಂಯೋಜಕರಾಗಿದ್ದು, ಚನ್ನಪ್ಪ ಮಳಗಿ ವಕೀಲರು ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿ, ನಾಗರಾಜ ಚಳಿಗೇರಿ ಅಸಂಘಟಿತ ಕಾರ್ಮಿಕರ ಪ್ರಕೋಷಕ್ಕೆ ಜಿಲ್ಲಾ ಸಂಚಾಲಕರು. ಸುಭಾಷಚಂದ್ರ ಸಂಗಪ್ಪ ತಿಪ್ಪಶೆಟ್ಟಿ ಹಾಲು ಉತ್ಪಾದಕರ ಪ್ರಕೋಷ್ಠ
ಜಿಲ್ಲಾ ಸಂಚಾಲಕ, ಶರಣಪ್ಪ ಮಡಿವಾಳರ ಫಲಾನುಭವಿಗಳ ಪ್ರಕೋಷ್ಠ ಜಿಲ್ಲಾ ಸಂಚಾಲಕ, ಸಿದ್ದಪ್ಪ ಕೌದಿ ಹಿರಿಯ ನಾಗರಿಕರ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಡಾ: ಎಸ್.ವೈ. ಚನ್ನಿ ಕಂದಕೂರು ನೇಕಾರರ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಪ್ರಭುರಾಜಗೌಡ ಪಾಟೀಲ್ ಹುಲಿಗಿ ಪಂಚಾಯತ್ ರಾಜ್ ಪ್ರಕೋಷ್ಠ, ಶಂಕರ ಸಿಂಗ್ರಿ ವಕೀಲರು ಕಾನೂನು ಪ್ರಕೋಷ್ಠ ಜಿಲ್ಲಾ ಸಂಚಾಲಕರು, ವೀರೇಶ ಬಂಗಾರಶೆಟ್ರು ವೃತ್ತಿಪರರ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಡಾ: ಸಿದ್ದಲಿಂಗಯ್ಯ ಸ್ವಾಮಿ ಅಳವಂಡಿ ವೈದ್ಯಕೀಯ ಪ್ರಕೋಷ್ಠ, ರಂಗನಾಥ ವಲಮಕೊಂಡಿ ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ದುರ್ಗಾರಾವ್ ಚಿಟ್ಟೂರಿ ವಿವಿಧ ಭಾಷಿಕರ ಪ್ರಕೋಷ್ಠ ಜಿಲ್ಲಾ ಸಂಚಾಲಕರು,
ವೆಂಕಟೇಶ ಹಾಲವರ್ತಿ ಕೈಗಾರಿಕಾ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಸಿದ್ದರಾಮೇಶ್ವರ ಹಳ್ಳಿ ಪೂರ್ವ ಸೈನಿಕರ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಅಮಿತ್ ಕಂಪ್ಲಿಕರ್ ಪ್ರಕಾಶನ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ವಾಸುದೇವ ನವಲಿ ನಗರಾಭಿವೃದ್ಧಿ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಮಂಜುನಾಥ ಯತ್ನಟ್ಟಿ ಸಾಮಾಜಿಕ ಜಾಲತಾಣ ಪ್ರಕೋಷ್ಠ ಜಿಲ್ಲಾ ಸಂಚಾಲಕರು ಮತ್ತು ಹನುಮಂತ ಶಿಲ್ಪಿ ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿದ್ದಾರೆ.
ಪಕ್ಷದ ವಿವಿಧ ಮೊರ್ಚಾಗಳಿಗೂ ನೇಮಕ ಮಾಡಿದ್ದು, ಮೌನೇಶ ದಡೇಸೂಗುರ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಮುಂದುವರೆದಿದ್ದು, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ದೊಡ್ಡಬಸಪ್ಪ ಸುಂಕದ ಮತ್ತು ದೀಪಕ ಹಿರೇಮಠ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ರತ್ನಾಕುಮಾರಿ ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿ ಪಾಟೀಲ್ ಮತ್ತು ಶೈಲಜಾ ಬಾಗಲಿಗೆ ಜವಬ್ದಾರಿ ನೀಡಲಾಗಿದೆ.
ಎಸ್ ಸಿ ಮೋರ್ಚಾ ಜಿಲ್ಲಾಧ್ಯರಾಗಿ ಗಣೇಶ ಹೊರತಟ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕನಕಮೂರ್ತಿ ಛಲವಾದಿ
ತಿರುಪತಿ ಆರ್ ರಾಥೋಡ್ ಅವರಿಗೆ ಅವಕಾಶ ನೀಡಲಾಗಿದೆ. ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೆ.ಎಸ್ ಹನುಮಂತಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಗವಿರಾಜ ಗೊರವರ್ ಮತ್ತು ಮದನ್ ಇಳಿಗೇಗೆ ಜವಬ್ದಾರಿ ನೀಡಿದೆ. ಅದೇ ರೀತಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ದೀಪಕ ಬಾಂಟಿಯಾ, ಪ್ರಧಾನ ಕಾರ್ಯದರ್ಶಿಯಾಗಿ ಮರ್ದಾನ ಅಲಿ ಮುಜಾವರ ಮತ್ತು ಹೈದರ ಅಲಿ ಬಸಾಪುರಗೆ ಜವಬ್ದಾರಿ ನೀಡಿದೆ. ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ವಿಜಯಕುಮಾರ ತಾಳಕೇರಿ, ಜಿಲ್ಲಾ ಪ್ರಧಾನ ಕಾರ್ದರ್ಶಿಯಾಗಿ ರಮೇಶ ಕೊಳ್ಳಿ ಮತ್ತು ವಸಂತ ನಾಯಕ. ಮತ್ತು ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ
ಅಶೋಕ ಹೆಚ್ ಗುಳದಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಕಲಾದಗಿ ಮತ್ತು ಶಿವನಗೌಡ ಪಾಟೀಲ್ ಟಕ್ಕಳಕಿ ಅವರನ್ನು ನೇಮಕ ಮಾಡಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರ ಸೂಚನೆ ಮಾರ್ಗದರ್ಶನದಂತೆ ಎಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಮುಂದಾಗುವಂತೆ ನವೀನಕುಮಾರ ಉಳಗಣ್ಣ ಅವರು ಸೂಚನೆ ನೀಡಿದ್ದಾರೆ.

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ