

19th June 2026

ಕೊಪ್ಪಳ.
ಬಿಜೆಪಿ ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿಯಾಗಿ ಗಂಗಾವತಿಯ ಉತ್ಸಾಹಿ ಮತ್ತು ಬಿಜೆಪಿಯ ಕಟ್ಟಾಳು ಶ್ರೀನಿವಾಸ ಧೂಳ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರು ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದು, ಪಕ್ಷದ ಎಲ್ಲಾ ಆಗು ಹೀಗುಗಳನ್ನು ಅರಿತಿರುವ ಮತ್ತು ರಾಜ್ಯ ಘಟಕದ ಸೂಚನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಶ್ರೀನಿವಾಸ ಧೂಳ ಅವರನ್ನು ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ. ಗಂಗಾವತಿ ನಗರದ ನಿವಾದಿಯಾಗಿರುವ ಧೂಳ ಅವರು ಸಂಘ ಪರಿವಾರದಿಂದ ಬಂದಿದ್ದು, ಸಂಘದ ಪ್ರಾಥಮಿಕ ಶಿಕ್ಷ ವರ್ಗ ಮಾಡಿಕೊಂಡಿದ್ದು, ಸಂಘಟನೆಯನ್ನು ಕರಗತ ಮಾಡಿಕೊಂಡಿದ್ದಾರೆ. ಎರಡು ಮೂರು ಅವಧಿಯವರೆಗೆ ಗಂಗಾವತಿ ನಗರ ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಜವಬ್ದಾರಿ ನಿಭಾಯಿಸಿರುವ ಅವರು ಪಕ್ಷದ ಜಿಲ್ಲೆಯ ಎಲ್ಲಾ ನಾಯಕರೊಂದಿಗೆ ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದ್ದಾರೆ. ಈ ಎಲ್ಲಾ ಅನುಭವಗಳ ಮೂಲಕ ಪಕ್ಷದ ಕಾರ್ಯ ಚಟುವಟಿಕೆಯನ್ನು ನಿಭಾಯಿಸುವ ಉತ್ಸಾಹಿ ಕಾರ್ಯಕರ್ತರಾಗಿದ್ದಾರೆ.
ಶ್ರೀನಿವಾಸ ಧೂಳಗೆ ಉತ್ತವ ಜವಬ್ದಾರಿ ನೀಡಿದೆ ಎಂದು ಮುಖಂಡರು ಮತ್ತು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಶ್ರೀನಿವಾಸ ಧೂಳ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿದ್ದಾರೆ

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ