

4th July 2026

ಗಂಗಾವತಿ.
ನಗರದ ನ್ಯೂ ಕಾಮಾಕ್ಷಿ ಜುರ್ವೆಲರ್ಸ್ ಮಾಲಿಕ ಪ್ರಕಾಶ ತನ್ನ ಪತ್ನಿ ಮಗನೊಂದಿ ಮನೆಯಲ್ಕಿ ನೆಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಸ.ಪಿ ಡಾ.ರಾಮ ಎಲ್ ಅರಸಿದ್ದಿ ಭೇಟಿ ನೀಡಿ ಪರಿಶೀಲಿಸಿದರು.
ಸಾಲ ಭಾಧೆ ತಾಳಲಾರದೆ ಕುಟುಂಬದ ಮೂರು ಜನ ಸಾವಿಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗಂಗಾವತಿ ನ್ಯೂ ಕಾಮಾಕ್ಷಿ ಜುವೆರ್ಸ್ ಮಾಲಿಕ ಪ್ರಕಾಶ ರಾಯ್ಕರ(55), ಹೆಂಡತಿ ಪ್ರಭಾರಾಯ್ಕರ(46),ಬೆಂಗಳೂರಿನಲ್ಲಿ ಇಂಜನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶಶಾಂಕ(19) ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿ ಡಾ.ರಾಮ ಎಲ್ ಅರಸಿದ್ದಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ನಗರದ ಪ್ರಶಾಂತನಗರದ ಬಂಗಾರ ಅಂಗಡಿ ವ್ಯಾಪಾರಿ ಸಾಲ ಮಾಡಿಕೊಂಡಿದ್ದು, ಮನೆ ಬ್ಯಾಂಕ್ ಸಾಲ ಪ್ರಕಾಶ ರಾಯ್ಕರ್ ಸಾಲ ಮಾಡಿದ್ದರಿಂದ ಪ್ರಶಾಂತನಗರದ ಮನೆಯನ್ನು ಬ್ಯಾಂಕ್ ಸೀಜ್ ಮಾಡಿತಗತು. ಬಾಡಿಗೆ ಮನೆಯಲ್ಲಿದ್ದ ಅವರು ಪ್ರಶಾಂತನಗರದ ಮನೆ ಹಿಂಬಾಗಿಲಿನ ಬೀಗ ಮುರಿದು ಒಳಗೆ ಹಿಗಿ ನೇಣು ಹಾಕಿಕೊಂಡಿದ್ದಾರೆ. ಪ್ರಕರಣದ ತನಿಖೆ ಕೈಗೊಳ್ಳಲಾಗುತ್ತದೆ ಎಂದರು.
ಡಿವೈಎಸ್ ಪಿ ಜೆ.ಎಸ್. ನ್ಯಾಮೆಗೌಡ, ನಗರ ಪೋಲಿಸಠಾಣೆ ಪಿಐ ಪ್ರಕಾಶ ಯಾತನೂರ, ಪಿಎಸ್ ಐ ನಾಗರಾಜ ಇದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ