

7th July 2026

ಗಂಗಾವತಿ(ಸಮರ್ಥವಾಣಿ ನ್ಯೂಜ್)
ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ಖರೀದಿಸಿದ್ದ ರೈತನ ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ವಿಳಂಬ ಮಾಡಿರುವುದಕ್ಕೆ ಜಿಲ್ಲಾ ಪಂಚಾಯತ ಗಂಗಾವತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಅವರ ಇಲಾಖೆಯ ಬ್ಯೂಲೇರಾ ವಾಹನವನ್ನು ಜಪ್ತಿ ಮಾಡಲಾಗಿದೆ.
ಮಂಗಳವಾರ ಕೋರ್ಟ್ ಆದೇಶ ಪ್ರಕಾರ ಕಕ್ಷಿದಾರಪರ ವಕೀಲರಾದ ಪಿ.ವಿ.ಪಾಟೀಲ್, ಹೊನ್ನೂರಪ್ಪ ಬೆನ್ನೂರ ಮತ್ತು ಕೋರ್ಟ್ ಬೇಲೀಫ್ ಸೇರಿ ನಗರದ ಜಿಪಂ ಉಪ ವಿಭಾಗ ಕಚೇರಿ ಆವರಣದಲ್ಲಿದ್ದ ಕುಡಿಯುವ ನೀರು ವಿಭಾಗದ ಎಇಇ ಅವರ ಬೂಲೇರೋ ವಾಹನವನ್ನು ಜಪ್ತಿ ಮಾಡಿದರು.
ನಂತರ ಪ್ರಕರಣ ಕುರಿತು ವಕೀಲರು ಮಾತನಾಡಿ, ಕಾರಟಗಿ ತಾಲೂಕಿನ ಬೆನ್ನೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂ.11 ರಲ್ಲಿರುವ ಕಂಠಯ್ಯ ತಂದೆ ಗೋವಿಂದಯ್ಯ ಅವರಿಗೆ ಸೇರಿದ್ದ ಒಂದು ಎಕರೆ ಭೂಮಿಯನ್ನು ಸರಕಾರ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಜಿಲ್ಲಾ ಪಂಚಾಯತ್ ರಾಜ್ ಇಂಜನಿಯಿರಿಂಗ್ ವಿಭಾಗದಿಂದ ಖರೀದಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನೀಡಿದ್ದ ಪರಿಹಾರ ಹಣ ಕಡಿಮೆಯಾಗಿದ್ದು ಹೆಚ್ಚಿನ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಧಾವೆ ಹೂಡಲಾಗಿತ್ತು. ಕೋರ್ಟ್ ನಮ್ಮ ಮನವಿಯನ್ನು ಕನ್ನಿಸಿ ನಿಧನ ಹೊಂದಿದ ರೈತ ಶ್ರೀಕಂಠಯ್ಯ ಅವರ ಪುತ್ರ ನಾಗರಾಜ ಬೆನ್ನೂರ ಅವರಿಗೆ ರೂ.3.79 ಲಕ್ಷ ಹೆಚ್ಚಿನ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಆದರೆ ಜಿಪಂ ಕುಡಿಯುವ ನೀರು ವಿಭಾಗದ ಇಲಾಖೆ ವಿಳಂಬ ಮಾಡಿತ್ತು. ವಿಳಂಬದಿಂದ ಪರಿಹಾರ ಹಣಕ್ಕೆ ಇಲಾಖೆಯ ವಾಹನ ಜಪ್ತಿ ಮಾಡುವಂತೆ ಸೂಚನೆ ನೀಡಿದೆ. ಹೀಗಾಗಿ ನಾವು ಇಂದು ವಾಹನ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಿದ್ದೇವೆ. ಇಲಾಖೆ ಪರಿಹಾರ ಹಣ ಕೋರ್ಟ್ ಕಟ್ಟಿದರೆ ವಾಹಿನ ಹಿಂದಿರುಗಿಸಲಾಗುವುದು ಎಂದರು.
ಬಾಕ್ಸ್
ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕೋರ್ಟ್ ಆದೇಶ ಪಾಲಿಸುತ್ತೇವೆ
ಜಿಪಂ ಪಿಆರ್ ಡಿ ಅಡಿಯಲ್ಲಿ ಯೋಜನೆಯ 2012 ರ ಯೋಜನೆಯಲ್ಲಿ ಇದ್ದ ವ್ಯಾಜ್ಯವಾಗಿದೆ. 2014 ರಲ್ಲಿ ಕುಡಿಯುವ ನೀರು ವಿಭಾಗ ಪ್ರತ್ಯೇಕವಾಗಿದೆ. ಇದರ ಬಗ್ಗೆ ನಮ್ಮ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುವುದು.
ನಾಗರಾಜ, ಎಇಇ, ಜಿಪಂ ಕುಡಿಯುವ ನೀರು ವಿಭಾಗ, ಗಂಗಾವತಿ.

ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ "ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು...

ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ