

7th July 2026

ಗಂಗಾವತಿ(ಸಮರ್ಥವಾಣಿ)
ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿನ ಶ್ರೀ ಆಂಜನೇಯ ದೇವಸ್ಥಾನ ಹುಂಡಿ ಏಣಿಕೆ ಮಾಡಿದ್ದು, 64 ದಿನದಲ್ಲಿ ರೂ.71,77,460 _ ಸಂಗ್ರಹವಾಗಿದ್ದು,
ನೇಪಾಳ,ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾ, ಥೈಲ್ಯಾಂಡ್, ಹಾಂಕಾಂಗ್ ದೇಶಗಳ ಭಕ್ತರು ದೇಣಿಗೆ ಸಮರ್ಪಿಸಿದ್ದಾರೆ.
ಮಂಗಳವಾರ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ ವಸಂತಕುಮಾರಿ ನಿರ್ದೇಶನದಂತೆ ಹುಂಡಿ ತೆರೆಯಲಾಗಿದೆ. ಕಳೆದ ದಿ.26/03/2026 ರಿಂದ 03/07/2026 ರವರೆಗೆ ಒಟ್ಟು 64 ದಿನಗಳ ಅವಧಿಯಲ್ಲಿ) ಒಟ್ಟು ರೂ.71,77,460.00 ಹಣ ಸಂಗ್ರಹವಾಗಿದೆ.
ಹಣ ಏಣಿಕೆ ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ ಪ್ರಕಾಶ್ ನಾಯಕ್, ಕ್ರಿಷ್ಣವೇಣಿ, ಸಿಬ್ಬಂಧಿಗಳಾದ ಪ್ರಭುಸ್ವಾಮಿ, ಸುಧಾ, ಸುಪ್ರಿಯ, ಪರಿಚಾರಕರಾದ ನವಾಜ್, ಯಶ್ವಂತ, ಶರಣಪ್ಪ, ರಾಜೇಶ್ ಸಣಾಪೂರ ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕ ನವೀನ್ ಕುಮಾರ, ಸಿಬ್ಬಂದಿ ಹನುಮೇಶ್, ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಸೇಇರುದಂತೆ ಪೋಲಿಸ್ ಸಿಬ್ಬಂದಿ, ದೇವಸ್ಥಾನದ ಸಿಬ್ಬಂದಿವರ್ಗ, ಮಹಿಳಾ ಸ್ವಯಂ ಸೇವಾ ಸಂಘದವರು ಇದ್ದರು.
ಪೊಲೀಸ್ ಬಂದೊಬಸ್ಥ್ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ಎಣಿಕೆ ನಡೆಸಲಾಗಿದೆ.
ಕಳೆದ ಬಾರಿ ದಿ .26/03/2026 ರಂದು ಹುಂಡಿ ತೆರೆದಾಗ ರೂ.31,30,730-00 ಸಂಗ್ರಹವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ