

16th July 2026

ಕೊಪ್ಪಳ.
ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ಈಶ್ವರ ಸವಡಿ ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(DHO)ಯನ್ನಾಗಿ ಮುಂಬಡ್ತಿ ನೀಡಿ ಸರಕಾರ ಆದೇಶಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪ್ರದೀಕುಮಾರ ಬಿ.ಎಸ್ ಅವರು ರಾಜ್ಯಾದ್ಯಂತ ವೈದ್ಯಾಧಿಕಾರಿಗಳನ್ನು ವಿವಿಧ ಹುದ್ದೆಗೆ ನಿಯೋಜಿಸಿದ್ದು, ಡಾ.ಸವಡಿಯವರಿಗೆ ಡಿಹೆಚ್ ಒ ಹುದ್ದೆಗೆ ಮುಂಬಡ್ತಿ ನೀಡಿ ಆದೇಶಿಸಿದ್ದಾರೆ.
ಗಂಗಾವತಿ ಸರ್ಕಾರಿ ಉಪ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಖಾಸಗಿ ಆಸ್ಪತ್ರೆಗಿಂತಲೂ ಹೆಚ್ಚಿನ ಆರೋಗ್ಯ ಸೌಲಭ್ಯ ಒದಗಿಸಿ ಗುಣಮಟ್ಟದ ಆಸ್ಪತ್ರೆಯನ್ನಾಗಿ ರಾಜ್ಯಕ್ಕೆ ಮಾದರಿಯಾಗಿದ್ದಾರಲ್ಲದೆ ಮೂರು ಬಾರಿ ರಾಜ್ಯ ಮತ್ತು ರಾಷ್ಟ್ರಮಟ್ಟದ “ಕಾಯಕ ಪ್ರಶಸ್ತಿ” ಪಡೆದುಕೊಂಡು ಉತ್ತಮ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ.
ಗಂಗಾವತಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಹ ಸುಸಜ್ಜಿತ ಆಸ್ಪತ್ರೆಯನ್ನಾಗಿ ಹೆಚ್ಚಿನ ಹೆರಿಗೆ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಮತ್ತು ಇಲಾಖೆಯ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾ ಉತ್ತಮ ಆರೋಗ್ಯ ಸೇವೆ ನೀಡಿದ್ದಾರೆ.
ಡಾ.ಸವಡಿಯವರಿಗೆ ಡಿಹೆಚ್ ಓ ಹುದ್ದೆ ನೀಡಿರುವುದಕ್ಕೆ ಸಾರ್ವಜನಿಕರು ಸ್ವಾಗತಿಸಿದ್ದು, ಜಿಲ್ಲೆಯಾದ್ಯಂತ ಡಾ.ಸವಡಿಯವರು ಆಸ್ಪತ್ರೆಗಳನ್ನು ಗುಣಮಟ್ಟದ ಆರೋಗ್ಯ ಸೇವೆ ನೀಡುವಂತೆ ಶ್ರಮಿಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ

ಅಂಜನಾದ್ರಿ ದೇವಸ್ಥಾನ: ಹುಂಡಿ ಎಣಿಕೆ- 64 ದಿನದಲ್ಲಿ ರೂ.71.77 ಲಕ್ಷ ಸಂಗ್ರಹ- ವಿದೇಶಿ ಕರೆನ್ಸಿ ದೇಣಿಗೆ