

18th July 2026

undefined
ಕೊಪ್ಪಳ (ಸಮರ್ಥವಾಣಿ ನ್ಯೂಜ್)
ಎರಡು ವರ್ಷಗಳ ಅವಧಿಯ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಷರ್ಧಿಯಾಗಿದ್ದ ಹನುಮೇಶ ಮುರಡಿ, ಓಂಕಾರಪ್ಪ ಕುಷ್ಟಗಿ ಪರಾಭವಗೊಂಡಿದ್ದಾರೆ. ಅದೇ ರೀತಿ ವಿಜೇತ ಪ್ರಕಾಶ ಆನಂದಳ್ಳಿ ಗುಂಪಿನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ. ಸಜ್ಜನ, ಖಜಾಂಚಿ ಸ್ಥಾನದಲ್ಲಿ ಪುಷ್ಪಾ ಬೇವೂರ ಗೆಲವು ಸಾಧಿಸಿದ್ದರೆ. ಪರಾಜಿತ ಅಭ್ಯರ್ಥಿ ಹೆಚ್.ಹೆಚ್.ಮುರಡಿ ಗುಂಪಿನಿಂದ ಸ್ಪರ್ದಿಸಿದ್ದ ಅಂದಾನಗೌಡ ಪಾಟೀಲ್ ಉಪಾಧ್ಯಕ್ಷ, ಬಸವರಾಜ ಮೇಲುಸಕ್ಕರಿ ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಜಯ ಗಳಿಸಿದ್ದಾರೆ.
ಶನಿವಾರ 4 ಗಂಟೆಯವರೆಗೆ ಚುನಾವಣೆ ನಡೆದು ನಂತರ ಮತ ಎಣಿಕೆ ಪ್ರಾರಂಭಗೊಂಡು ರಾತ್ರಿ 10 ಗಂಟೆ ನಂತರ ಫಲಿತಾಂಶ ಪೂರ್ಣಗೊಂಡಿತು. ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿದ್ದ ಪ್ರಕಾಶ ಆನಂದಳ್ಳಿ 321 ಮತ ಪಡೆದು 114 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹೆಚ್.ಹೆಚ್.ಮುರಡಿ 207, ಓಂಕಾರಪ್ಪ ಕುಷ್ಟಗಿ 05 ಮತ ಪಡೆದುಕೊಂಡು ಪರಾಭವಹೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಬಿ.ವಿ.ಸಜ್ಜನ 271ಮತ ಪಡೆದು 110 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ. ಇವರ ಪ್ರತಿಸ್ಪರ್ದಿಯಾಗಿದ್ದ ಜಿ.ಎಂ.ಶಿವಪೂರ 160, ಚಿದಾನಂದ ಪಾಟೀಲ್ 100 ಮತ ಪಡೆದು ಪರಾಭವಗೊಂಡಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನದಲ್ಲಿ ಮುರಡಿ ಗುಂಪಿನ ಅಂದಾನಗೌಡ 288 ಮತ ಪಡೆದು 43 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಆನಂದಳ್ಳಿ ಗುಂಪಿನ ಡಿ.ಎಂ.ಪೂಜಾರ 245 ಮತ ಪಡೆದು ಪರಾಭವಗೊಂಡಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಮೇಲುಸಕ್ಕರಿ 292 ಮತ ಪಡೆದು 42 ಮತಗಳ ಅಂತರದಲ್ಲಿ ಆಯ್ಜೆಯಾಗಿದ್ದರೆ ಇವರ ಎದುರಾಳಿ ಆನಂದಳ್ಳಿ ಗುಂಪಿನ ನೂರ್ ಅಹ್ಮದ್- 249 ಮತ ಪಡೆದು ಪರಾಭವಗೊಂಡಿದ್ದಾರೆ. ಖಜಾಂಚಿ ಸ್ಥಾನದಲ್ಲಿ ಆನಂದಳ್ಳಿ ಗುಂಪಿನ ಪುಷ್ಪಾ ಬೇವೂರು 240 ಮತ ಪಡೆದು 53 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರೆ, ಇವರ ಪ್ರತಿ ಸ್ಪರ್ಧಿಯಾಗಿದ್ದ ವೀಣಾ ವಾಲ್ಮಕಿ 187, ಕವಿತಾ ಎಂಟಿ 100 ಮತ ಪಡೆದು ಪರಾಭವಗೊಂಡಿದ್ದಾರೆ.
ಗ್ರಂಥಾಲಯ ಕಾರ್ಯದರ್ಶಿಯಾಗಿ ಮಂಜುನಾಥ ಗಡದ ಅವಿರೋಧವಾಗಿ ಆಯ್ಕೆಯಾಗಿದ್ದರು.

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ