

24th July 2026

undefined
ಗಂಗಾವತಿ. (ಸಮರ್ಥವಾಣಿ ನ್ಯೂಜ್)
ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಗಳೂರಿನಲ್ಲಿ ನಡೆಸಿದ ತಮ್ಮ ಬೆಂಬಲಿಗ ಕಾಂಗ್ರೆಸ್ ಕಾರ್ಯಕರ್ತರ ರಾಜಕೀಯ ಸಭೆಯಲ್ಲಿ ನಗರದ ಜನತಾ ಸೇವಾ ಶಿಕ್ಷಣ ಸಂಸ್ಥೆಯ ಸರಕಾರದ ಅನುದಾನಿತ ಶಾಲೆಯ ಶಿಕ್ಷಕ, ಸಾಹಿತಿ ಅಜಮೀರ್ ನಂದಾಪುರ ಪಾಲ್ಗೊಂಡಿರುವುದು ಆಶ್ಚರ್ಯ ಮೂಡಿಸಿದೆ. ಮತ್ತು ವಿರೋಧ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದು, ಸರಕಾರದ ಅನುದಾನಿತ ಶಿಕ್ಷರಾಗಿ ರಾಜಕೀಯ ಸಭೆಯಲ್ಕಿ ಭಾಗವಹಿರುವ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೆಂಬಗಲಿಗರೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ರಾಜಕೀಯ ಸಭೆ ಇದಾಗಿದ್ದು, ಅದರಲ್ಲೂ ಮಾಜಿಯಾಗಿರುವ ಇಕ್ಬಾಲ್ ಅನ್ಸಾರಿ ಅವರು ತಮ್ಮ ರಾಜಕೀಯ ಮತ್ತು ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಿ ತಮ್ಮ ಎರಡು ಭಾರಿಯ ಚುನಾವಣೆ ಸೋಲಿಗೆ ಈಗ ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿರುವ ಯಲಬುರ್ಗಾ, ಕೊಪ್ಪಳ ಮತ್ತು ಕನಕಗಿರಿ ಕ್ಷೇತ್ರದ ಹಾಲಿ ಕಾಂಗ್ರೇಸ್ ಶಾಸಕರು ಕಾರಣಾಗಿದ್ದು, ನಾನು ಮನಸ್ಸು ಮಾಡಿದರೆ ಮಸೀದಿಗಳಿಗೆ ತಿಳಿಸಿ ಎರಡು ಸೆಕೆಂಡಿನಲ್ಲಿ ಅವರನ್ನು ಸೋಲಿಸಿಬಿಡುತ್ತಿದ್ದೆ ಎಂದು ಗುಡುಗಿದ್ದಾರೆ. ಮತ್ತು ಡಿವೈಎಸ್ ಪಿ ವರ್ಗಾವಣೆಗೆ ಮಂತ್ರಿ ಕೊಟಿ ಕೋಟಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರಲ್ಲದೆ ತಾನು ಕಾಂಗ್ರೆಸ್ ಪಕ್ಷದಲ್ಲೆ ಇದ್ದೇನೆ. ಜೆಡಿಎಸ್ ಬಿಜೆಪಿಗೆ ಹೊಗುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೆಂಬಲಿಗ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.
ಅನ್ಸಾರಿಯವರು ಕ್ಷೇತ್ರಕ್ಕೆ ಮರಳಿ ರಾಜಕಾರಣ ಪ್ರಾರಂಭಿಸುವಂತೆ ಮನವಿ ಮಾಡಲು ಗಂಗಾವತಿಯ ಅನ್ಸಾರಿ ಬೆಂಬಲಿತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದ ಸಮಯದಲ್ಲಿ ಅನ್ಸಾರಿಯವರು ಇವರೆಲ್ಲರೊಂದಿಗೆ ಸಭೆ ನಡೆಸಿ ಮಾತನಾಡಿದ್ದರು. ಈ ವಿಷಯ ಈಗ ಎಲ್ಲಾ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಬಹಿರಂಗವಾಗಿದೆ. ಆದರೆ ಇಂತಹ ರಾಜಕೀಯ ಸಭೆಯಲ್ಲಿ ಸರಕಾರದ ಅನುದಾನಿತ ಶಾಲೆಯ ಶಿಕ್ಷಕರಾಗಿರುವ ಮತ್ತು ಸರಕಾರದ ಸಾಹಿತ್ಯ ಅಕಾಡೆಮಿಯ ನಾಮನಿರ್ದೇಶಿತ ಸದಸ್ಯರಾಗಿರುವ ಅಜಮೀರ್ ನಂದಾಪುರ ಅವರು ಬಾಗವಹಿಸಿದ್ದು ಯಾಕೆ..? ಅವರೇನು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾ..? ಅನುದಾನಿತ ಸರಕಾರದ ಸಂಬಳ ಪಡೆಯುವ ಅನುದಾನಿತ ಶಾಲೆಯ ಶಿಕ್ಷಕರಾಗಿ ಇಂತಹ ಸಭೆಯಲ್ಲಿ ಭಾಗವಹಿಸಬಾರದು ಎಂಬ ಪ್ರಜ್ಞೆ ನಂದಾಪುರ ಅವರಿಗಿಲ್ಲವೆ. ಅನ್ಸಾರಿಯವರ ಮೇಲೆ ಅಭಿಮಾನವಿದ್ದರೆ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಬಹುದಿತ್ತು ಎಂದು ಪ್ರಶ್ನಿಸಿರುವ ಅನ್ಸಾರಿ ವಿರೋಧಿಗಳು ತಕ್ಷಣ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಆಡಳಿತ ಮಂಡಳಿಯವರು ಇವರ ವಿರುದ್ಧ ಕೆಸಿಎಸ್ ಆರ್ ನಿಯಮದಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*