

4th August 2026

ಕೊಪ್ಪಳ. (ಸಮರ್ಥವಾಣು ನ್ಯೂಜ್)
ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದ್ದು, ಬರಗಾಲ ಪರಿಸ್ಥಿತಿಯ ಆಧ್ಯಯನ ಮಾಡಿ ವರದಿ ಸಲ್ಲಿಸಲು ಮುಖ್ಯಂಮತ್ರಿ ಡಿ.ಕೆ.ಶಿವುಕುಮಾರ ಸೂಚನೆ ನೀಡಿ ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಜಿಲ್ಲಾವಾರು ಉಸ್ತುವಾರಿ ಹಂಚಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆಯಷ್ಟೆ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿರುವ ಸಚಿವ ಶಿವರಾಜ ತಂಗಡಗಿ ಅವರಿಗೆ ಕೊಪ್ಪಳ ಜಿಲ್ಲೆ ಮತ್ತು ಸಚಿವ ಬಸವರಾಜ ರಾಯರೆಡ್ಡಿಗೆ ಗದಗ ಜಿಲ್ಲೆ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ.
ಇಂದು ಬೆಳೆಗ್ಗೆ ಮುಖ್ಯಂಮತ್ರಿಗಳು ಅಧಿಕೃತವಾಗಿ ಜಿಲ್ಲೆಯ ಉಸ್ತುವಾರಿ ಹಂಚಿಕೆ ಮಾಡಿ ಆದೇಶ ಮಾಡಿದ್ದು, ಎಲ್ಲಾ ಸಚಿವರು ತಕ್ಷಣ ಕಾರ್ಯ ಪ್ರವೃತ್ತರಾಗಿ ತಮಗೆ ವಹಿಸಿರುವ ಜಿಲ್ಲೆಗೆ ತಕ್ಷಣ ಭೇಟಿ ನೀಡಿ ಬರಗಾಲ ಪರಿಸ್ಥಿತಿ ಅಧ್ಯಯನ ಮಾಡಿ ಕಂದಾಯ ಸಚಿವ ಖಾತೆ ಹೊಂದಿರುವ ಪರಮೇಶ್ವರ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಪಕ್ಕದ ವಿಜಯನಗರ ಜಿಲ್ಲೆಗೆ ಮತ್ತೊಮ್ಮೆ ಜಮೀರ್ ಅಹ್ಮದ್ ಅವರಿಗೆ ಜವಬ್ದಾರಿ ನೀಡಿದ್ದು, ರಾಯಚೂರ ಜಿಲ್ಲೆಗೆ ಅಜಯಸಿಂಗ್, ಬಳ್ಳಾರಿ ಜಿಲ್ಲೆ ನಾಗೇಂದ್ರ ಅವರಿಗೆ ವಹಿಸಿದ್ದಾರೆ. ಉಳಿದಂತೆ ವಿವಿಧ ಜಿಲ್ಲೆಗಳಿಗೂ ಸಚಿವರನ್ನು ನಿಯುಕ್ತಿ ಮಾಡಲಾಗಿದೆ.

ಹಿಟ್ನಾಳ್ ಗೆ ಕೈತಪ್ಪಿದ ಸಚಿವ ಸ್ಥಾನ: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ರಾಜೀನಾಮೆ- ಕೆಲವು ಕಾಂಗ್ರೆಸ್ ಪದಾಧಿಕಾರಿಗಳು ರಾಜೀನಾಮೆ

ಮಹಿಳೆಯರ ಸಾಹಿತ್ಯ, ಸಾಂಸ್ಕೃತಿಕ, ಬೌದ್ಧಿಕ ಕೊಡುಗೆ ಗುರುತಿಸುವಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಮಹತ್ವದ್ದು*

ಪಿಎಸ್ ಐರಿಂದ ಡ್ಯಾಂನ ಮಣ್ಣು ಅಕ್ರಮ ಸಾಗಾಣೆ- ಎಂಎಲ್ ಸಿ ಹೇಮಲತಾ ನಾಯಕರಿಂದ ಅಕ್ರಮ ಬಯಲು-ಕ್ರಮಕ್ಕೆ ಎಸ್ ಪಿಗೆ ಸೂಚನೆ