

24th July 2026

ಗಂಗಾವತಿ.(ಸಮರ್ಥವಾಣಿ ನ್ಯೂಜ್)
ನಾನು ಎರಡು ಭಾರಿ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರೂ ಎರಡು ಭಾರಿ ನನ್ನ ಸೋಲಿಗೆ ಕನಕಗಿರಿ, ಕೊಪ್ಪಳ ಮತ್ತು ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕರು ಪ್ರಮುಖ ಕಾರಣರಾಗಿದ್ದಾರೆ. ನಾನು ಮನಸ್ಸು ಮಾಡಿದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಇವರೆಲ್ಲರನ್ನು ಎರಡು ನಿಮಿಷ್ ಅಲ್ಲ. ಎರಡು ಸೆಕೆಂಡ್ನಲ್ಲಿ ಸೋಲಿಸಿಬಿಡುತ್ತಿದ್ದೆ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತಮ್ಮ ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ್ ಮತ್ತು ಬಸವರಾಜ ರಾಯರೆಡ್ಡಿ ಅವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ೨೦೨೩ರ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಕ್ಷೇತ್ರದಲ್ಲಿ ವಾಸ್ತವ್ಯ ಇರದೇ ಬೆಂಗಳೂರಿಗೆ ಸಿಮೀತರಾಗಿದ್ದರಿಂದ ಅವರನ್ನು ಮತ್ತೆ ಗಂಗಾವತಿ ಕ್ಷೇತ್ರಕ್ಕೆ ಕರೆ ತರಲು ನೂರಾರು ಜನ ಅನ್ಸಾರಿ ಬೆಂಬಲಿಗರು ಬೆಂಗಳೂರಿಗೆ ತೆರಳಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ ಅವರು ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದಿಂದ ತಮಗೆ ಆಗಿರುವ ಅನ್ಯಾಯದ ನೋವ್ವರನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ನಾನು ಸಿದ್ಧರಾಮಯ್ಯ ಅವರ ಆಶೀರ್ವಾದಿಂದ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಸ್ಪರ್ಧೆ ಮಾಡಿದ್ದೆ. ಆದರೆ ಎರಡು ಬಾರಿ ನಾನು ಸೋಲುವ ಪರಿಸ್ಥಿತಿ ಬಂತು. ನನ್ನ ಸೋಲಿಗೆ ವಿರೋಧ ಪಕ್ಷದವರಲ್ಲ. ಜಿಲ್ಲೆಯ ಕಾಂಗ್ರೆಸ್ನವರೆ ಕಾರಣರಾಗಿದ್ದಾರೆ. ನಾನು ಜಿಲ್ಲೆಯ ಎಲ್ಲಾ ಮಸೀದಿಗಳಿಗೆ ಪತ್ರ ಬರೆದುಬಿಟ್ಟರೆ ಇವರಿಗೆ ನಮ್ಮ ಮುಸ್ಲಿಂ ಸಮಾಜದವರು ಒಂದು ಓಟ್ ಹಾಕಲ್ಲ. ಆದರೆ ನಾನು ಅಂತಹ ಪಕ್ಷ ವಿರೋಧಿ ಕೆಲಸ ಮಾಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲೆ ಇರುತ್ತೇನೆ. ಬಿಜೆಪಿ, ಜೆಡಿಎಸ್ಗೆ ಹೋಗುತ್ತೇನೆ ಎಂದು ಕೆಲವರು ಸುಳ್ಳು ಸುದ್ದಿ ಎಬ್ಬಿಸುತ್ತಿದ್ದಾರೆ. ನಾನು ೨೦೦೪ರಲ್ಲಿ ಶಾಸಕನಾದ ನಂತರ ಗಂಗಾವತಿ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿಪಡಿಸಿದ್ದೇನೆ. ನಾನು ನಿಯತ್ತಿನಿಂದ ಮತ್ತು ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ನಿಯತ್ತು ಮತ್ತು ಸತ್ಯಕ್ಕೆ ಜನರು ಬೆಲೆ ಕೊಡಲ್ಲ. ಸುಳ್ಳು ಹೇಳುವವರನ್ನು ನಂಬುತ್ತಾರೆ. ಸುಳ್ಳು ಹೇಳುವವನೇ ರಾಜ, ದಳಪತಿ ಎಂದು ಜನರು ನಂಬುತ್ತಿದ್ದಾರೆ ಎಂದು ತಮ್ಮ ಬೆಂಬಲಿಗರ ಮುಂದೆ ನೋವು ತೊಡಿಕೊಂಡ ಇಕ್ಬಾಲ್ ಅನ್ಸಾರಿ ಕ್ಷೇತ್ರದ ಜನರ ಹೃದಯದಲ್ಲಿ ನಾನಿದ್ದೇನೆ. ಆದರೆ ಮಂತ್ರಿಯಾದವರು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಗಂಗಾವತಿ ಅತ್ಯಂತ ಪ್ರಶಸ್ತವಾದ ಸ್ಥಳ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಇಲ್ಲಿಗೆ ವರ್ಗವಾಗಲು ಬಯಸುತ್ತಾರೆ. ಆದರೆ ಮಂತ್ರಿಗಳು ಅವರನ್ನು ವರ್ಗಾವಣೆ ಮಾಡಲು ಕೋಟಿಗಟ್ಟಲೇ ಹಣ ಅವರಿಂದ ಲೂಟಿ ಮಾಡುತ್ತಾರೆ. ಡಿವೈಎಸ್ಪಿಯಂತವರು ಇಲ್ಲಿಗೆ ಬರಬೇಕೆಂದರೆ ಮಂತ್ರಿಗೆ ರೂ.೧.೫೦ ಕೋಟಿ ಹಣ ಕೊಡಬೇಕು. ಇಂತಹ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ ಎಂದು ತಮ್ಮ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರ ವಿರುದ್ಧವೇ ಅನ್ಸಾರಿ ಅಸಮಾಧಾನ ತೊಡಿಕೊಂಡರು.
ಈ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿ ಬೆಂಬಲಿಗರಾದ ಮಾಜಿ ನಗರಸಭೆ ಸದಸ್ಯ ಮನೋಹರಸ್ವಾಮಿ, ಎಫ್. ರಾಘವೇಂದ್ರ ಸೇರಿದಂತೆ ಮತ್ತಿತರರು ಇದ್ದರು.
ಬಾಕ್ಸ್:
ಮಂತ್ರಿಯಿಂದ ವರ್ಗಾವಣೆ ದಂಧೆ: ಅನ್ಸಾರಿ ಬಾಂಬ್
ಗಂಗಾವತಿ ತಾಲೂಕಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಬರಲು ಮಂತ್ರಿಯಿಂದ ದೊಡ್ಡಮಟ್ಟದ ದಂಧೆ ನಡೆಯುತ್ತಿದೆ. ಗಂಗಾವತಿ ಡಿವೈಎಸ್ಪಿಯನ್ನು ಇಲ್ಲಿಗೆ ವರ್ಗಾವಣೆ ಮಾಡಲು ರೂ.೧.೫೦ ಕೋಟಿ ಪಡೆಯುತ್ತಾರೆ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೆಸರು ಹೇಳದೇ ಕಾಂಗ್ರೆಸ್ ಸರಕಾರದ ಮಂತ್ರಿಯ ಭ್ರಷ್ಟಾಚಾರ ಮತ್ತು ಅಧಿಕಾರಿಗಳಿಂದ ನಡೆಸುತ್ತಿರುವ ಲೂಟಿಯನ್ನು ಬಹಿರಂಗಪಡಿಸಿದ್ದು, ಅನ್ಸಾರಿ ಅವರ ಒಂದೊಂದು ಹೇಳಿಕೆಯೂ ಜಿಲ್ಲೆಯಲ್ಲಿ ಬಾರಿ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*

ಎಂಎಲ್ಸಿ ಹೇಮಲತಾ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ- ಕಾಂಗ್ರೆಸ್ ಕಚೇರಿಗೆ ಮುತ್ತಿಗೆ:ರಾಹುಲ್, ಡಿಕೆಶಿ ವಿರುದ್ಧ ಖಂಡನೆ