

24th July 2026

ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ರಾಹುಲ್ಗಾಂಧಿ ಮತ್ತಿತರ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿರುವುದು ಮತ್ತು ರಾಜ್ಯದ ಬಿಜೆಪಿ ಶಾಸಕ ಹರೀಶ್ ಅವರ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ದಾಂಧಲೆ ಎಬ್ಬಿಸಿ ಕಾಂಗ್ರೆಸ್ ನಾಯಕರಿಗೆ ಅವಾಚ್ಚ್ ಶಬ್ಧಗಳಿಂದ ನಿಂದಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿ ೧೬ ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಎಂಎಲ್ಸಿ ಹೇಮಲತಾ ನಾಯಕ ಮತ್ತಿತರ ಮುಖಂಡರು ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆಯೊಂದಿಗೆ ತೆರಳಿ ಜಿಲ್ಲಾಡಳಿತದ ಕಚೇರಿ ಎದುರಿಗೆ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದರು. ಮತ್ತು ಎಂಎಲ್ಸಿ ಹೇಮಲತಾ ನಾಯಕ ಅವರು ಇಟ್ಟಿಗೆಯನ್ನು ಕಾಂಗ್ರೆಸ್ ಕಚೇರಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಕೊಪ್ಪಳ ನಗರದ ಗುತ್ತೆದಾರ ಮಲ್ಲಿಕಾರ್ಜುನ ಪೂಜಾರ್ ಎಂಬ ಕಾಂಗ್ರೆಸ್ ಕಾರ್ಯಕರ್ತ ಲಿಖಿತ ದೂರು ನೀಡಿದ್ದರಿಂದ ನಗರ ಠಾಣೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಮುಖಂಡರಾದ ಜಯಶ್ರೀ ಆರೇರ್, ವಾಣಿಶ್ರೀ ಮಠದ, ಕೀರ್ತಿ ಪಾಟೀಲ್, ಶೋಭಾ ನಗರಿ, ಮಲ್ಲಮ್ಮ ಬೇವೂರು, ವೀಣಾ ಬನ್ನಿಗೋಳ,. ಮಧುಶ್ರೀ, ಪುಟ್ಟರಾಜ ಚೆಕ್ಕಿ, ಅಂದಪ್ಪ ಯಮ್ಮನವರ, ಚನ್ನಬಸವರಾಜ ಗಾಳಿ, ಪ್ರಭುರಾಜ್ ಪಾಟೀಲ್ ಹುಲಿಗಿ. ರವೀಚಂದ್ರ ಮಾಲಿಪಾಟೀಲ್, ಪ್ರಶಾಂತ ಕರುಗಲ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಗುಡದಳ್ಳಿ, ಅಲ್ಪಸಂಖ್ಯಾ ಮೊರ್ಚಾ ಜಿಲ್ಲಾಧ್ಯಕ್ಷ ದೀಪಕ್ ಬಾಂಠಿಯಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*

ಎಂಎಲ್ಸಿ ಹೇಮಲತಾ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ- ಕಾಂಗ್ರೆಸ್ ಕಚೇರಿಗೆ ಮುತ್ತಿಗೆ:ರಾಹುಲ್, ಡಿಕೆಶಿ ವಿರುದ್ಧ ಖಂಡನೆ