

30th July 2026

ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ಮಳೆಯ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಕಷ್ಟು
ಕೊರತೆಯಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿದ್ದರೆ ಮುಂದಿನ ಮುಂಗಾರು
ಹಂಗಾಮಿಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಭತ್ತದ ಬೆಳೆಯುವಷ್ಟು
ನೀರು ಪೂರೈಸಲು ಸಂಕಷ್ಟ ಎದುರಾಗಲಿದೆ. ಕ್ರಸ್ಟ್ಗೇಟ್ ದುರಸ್ತಿಯಿಂದಾಗಿ ಬೇಸಿಗೆ
ಬೆಳೆಯನ್ನು ಸಹ ಬೆಳೆಯದೇ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಜಲಾಶಯಕ್ಕೆ
ಸಂಗ್ರಹವಾಗುವ ನೀರಿನ ಪ್ರಮಾಣ ಮತ್ತು ಲಭ್ಯತೆಗನುಗುಣವಾಗಿ ಎಷ್ಟು ಹೆಕ್ಟೇರ್
ಪ್ರದೇಶಕ್ಕೆ ನೀರು ಹರಿಸಲು ಸಾಧ್ಯವಿದೆ ಎಂಬ ಮಾಹಿತಿ ಪಡೆದು ಸಂಕಷ್ಟ ಸೂತ್ರವನ್ನು
ಅನುಸರಿಸಿ ನೀರು ಹರಿಸಬೇಕು ಎಂದು ಗಂಗಾವತಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಾಗೂ ರೈತ
ಮುಖಂಡ ದೊಡ್ಡಪ್ಪ ದೇಸಾಯಿ ಅವರು ಸರಕಾರಕ್ಕೆ ಮುತ್ತು ನೀರಾವರಿ ಸಲಹಾ ಸಮಿತಿ
ಸದಸ್ಯರಿಗೆ ಮನವಿ ಮಾಡಿದರು.
ಗುರುವಾರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ
ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಲಾಶಯ ನಿರ್ಮಾಣವಾಗಿ 75 ವರ್ಷಗಳ
ಇತಿಹಾಸದಲ್ಲಿ ತುಂಗಭದ್ರಾ ಜಲಾಶಯಕ್ಕೆ ಇಷ್ಟೊಂದು ಕಡಿಮೆ ಪ್ರಮಾಣದ ನೀರು ಇದೆ.
ಕ್ರಸ್ಟ್ಗೇಟ್ ದುರಸ್ತಿಯಿಂದಾಗಿ ಕಳೆದ ಬೆಳೆಗೆ ನೀರು ಹರಿಸಲಾಗಿಲ್ಲ. ಈ ವರ್ಷ
ಮುಂಗಾರು ಕ್ಷೀಣಿಸಿರುವುದರಿಂದ ಜಲಾಶಯದಲ್ಲಿ ಕೇವಲ ಸಧ್ಯ 25 ರಿಂದ 30 ಟಿಎಂಸಿ ಮಾತ್ರ
ನೀರು ಇದೆ. ಉನ್ನು ಒಂದುವಾರ ಮಳೆಯಾಗದಿದ್ದರೆ ಈಗ ಸಧ್ಯದ ಪರಿಸ್ಥಿತಿಯಲ್ಲಿ
ಸಂಪೂರ್ಣ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ ಬೆಳೆಯಲು ನೀರು ಹರಿಸುವುದು ಸುಲಭವಾಗಿಲ್ಲ.
ಜನ, ಜಾನುವಾರುಗಳಿಗೂ ನೀರು ಒದಗಿಸುವುದು ಸಮಸ್ಯೆಯಾಗುತ್ತದೆ. ಹೀಗಾಗಿ ಸರಕಾರ ಮತ್ತು
ಈ ಭಾಗದ ಜನಪ್ರತಿನಿಧಿಗಳು, ನೀರಾವರಿ ತಜ್ಞರು ಮತ್ತು ಜಲಾಶಯದ ಅಧಿಕಾರಿಗಳೊಂದಿಗೆ
ಚರ್ಚಿಸಿ ಸಂಕಷ್ಟ ಸೂತ್ರದ ಮೂಲಕ ಯಾವ ರೀತಿ ನೀರು ಹರಿಸಬೇಕೆಂಬುದನ್ನು
ನಿರ್ಧರಿಸಬೇಕು. ಮೂರು ಬೆಳೆಗೂ ಭತ್ತ ಬೆಳೆಯದಿದ್ದರೆ ಆಹಾರ ಕೊರತೆ ಎದುರಾಗಲಿದೆ.
ಮತ್ತು ಸರಕಾರಕ್ಕೂ ಆರ್ಥಿಕ ಸಮಸ್ಯೆ ಸೃಷ್ಟಿಯಾಗಲಿದೆ. ಈ ಹಿನ್ನೆಲೆಯಲ್ಲಿ
ಜಲಾಶಯಕ್ಕೆ ಸಂಗ್ರಹವಾಗುವ ನೀರಿನ ಲಭ್ಯತೆಯನ್ನು ಅರಿತುಕಕೊಂಡು ಎಷ್ಟು ಹೆಕ್ಟೇರ್ಗೆ
ನೀರು ಹರಿಸಲು ಸಾಧ್ಯವಿದೆಯೋ ಅಷ್ಟು ಪ್ರದೇಶಕ್ಕೆ ಮಾತ್ರ ನೀರು ಒದಗಿಸುವ ಯೋಚನೆ
ಮಾಡಬೇಕು. ಭತ್ತ ಬೆಳೆಯುವ ರೈತರು ಮತ್ತು ರೈತ ಮುಖಂಡರೊಂದಿಗೆ ಶೀಘ್ರ ಸಭೆ ನಡೆಸಿ
ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ ದೊಡ್ಡಪ್ಪ ದೇಸಾಯಿ ಅವರು ನೀರಾವರಿ
ಸಲಹಾ ಸಮಿತಿ ಸಭೆಯನ್ನು ಪದೇ ಪದೇ ಬೆಂಗಳೂರಿನಲ್ಲಿ ನಡೆಸದೇ ಕಾಡಾ ಕಚೇರಿಯಲ್ಲೇ ನಡೆಸಿ
ಇರುವ ಪರಸ್ಥಿತಿಯನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ರೈತರು ಮತ್ತು ರೈತ
ಮುಖಂಡರ ಬೇಡಿಕೆಗೆ ಸರಕಾರ ಸ್ಪಂದಿಸಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಪ್ರಸಾದ, ನಾಗಪ್ಪ ಸಿಂಗನಾಳ, ಚಂದ್ರಶೇಖರ್ ಗೋನಾಳ್
ಹೇರೂರು, ಪಂಪಾಪತಿ ಕಾರಟಗಿ ಇದ್ದರು.
ಬಾಕ್ಸ್:
ಎಡದಂಡೆ ಕಾಲುವೆ ೩೫ರವರೆಗೆ ನೀರು ಹರಿಸಬಹುದು
ತುಂಗಭದ್ರಾ ಜಲಾಶಯದಲ್ಲಿರುವ ಇಂದಿನ ನೀರಿನ ಲಭ್ಯತೆಯನ್ನು ಮತ್ತು ಮುಂದೆ ಮಳೆಯ
ಪ್ರಮಾಣವನ್ನು ಅರಿತುಕೊಂಡು ಎಡದಂಡೆ ಕಾಲುವೆಯ ೩೫ನೇ ಮೈಲಿನವರೆಗಿನ ಪ್ರದೇಶದ ಭೂಮಿಗೆ
ಭತ್ತ ಬೆಳೆಯಲು ನೀರು ಹರಿಸಬಹುದು. ಮತ್ತು ಮುಂದಿನ ಪ್ರದೇಶದ ಭೂಮಿಯಲ್ಲಿ ಭತ್ತಕ್ಕೆ
ಪರ್ಯಾಯ ಬೆಳೆಯ ಬೆಳೆಯುವ ಅವಕಾಶ ಕಲ್ಪಿಸಬಹುದು. ಈ ಕುರಿತು ಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ, ನೀರಾವರಿ ಸಚಿವರು ಮತ್ತು ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಈ
ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ
ಕೈಗೊಳ್ಳಬೇಕು. ಸಂಕಷ್ಟ ಸೂತ್ರದೊಂದಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು.
ದೊಡ್ಡಪ್ಪ ದೇಸಾಯಿ, ಅಧ್ಯಕ್ಷ ಪಿಕಾರ್ಡ್ ಬ್ಯಾಂಕ್, ಗಂಗಾವತಿ.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ