

30th July 2026

undefined
ಕೊಪ್ಪಳ. (ಸಮರ್ಥವಾಣಿ ನ್ಯೂಜ್
ತುಂಗಭದ್ರಾ ಜಲಾಶಯದ ಹಿಂಬಾಗದಲ್ಲಿರುವ ಹೂಳಿನ ಮಣ್ಣನ್ನು ಕೊಪ್ಪಳ ಪಿಎಎಸ್ ಐ ಅವರು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣವನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಬಯಲು ಮಾಡಿದ್ದು, ತಕ್ಷಣ ಪಿಎಸ್ ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ದಿನ ರಾತ್ರಿ ಸಮಯದಲ್ಲಿ ಕಾತರಕಿ ಗ್ರಾಮದ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿರುವಾಗ ಗ್ರಾಮಸ್ಥರೊಂದಿಗೆ ಧಾವಿಸಿದ ಹೇಮಲತಾ ನಾಯಕ ಅವರು ಮಣ್ಣು ತುಂಬಿದ ಲಾರಿಯನ್ನು ತಡೆ ಹಿಡಿದು ನಿಲ್ಲಿಸಿದ್ದಾರೆ. ತುಂಗಭದ್ರಾ ಜಲಾಶಯದಿಂದ ಪ್ರತಿ ನಿತ್ಯ ರಾತ್ರಿ ಟಿಪ್ಪರ್ ಗಳಲ್ಲಿ ಮಣ್ಣು ಸಾಗಟ ಮಾಡುತ್ತಿರುವುದಕ್ಕೆ ರೋಷಿ ಹೋಗಿರುವ ಗ್ರಾಮಸ್ಥರು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಂದಿದ್ದಾರೆ. ರಾತ್ರಿ ಎಗ್ಗಲ್ಲದೇ ಟಿಪ್ಪರ್ ಓಡಾಡುತ್ತಿರುವುದರಿಂದ ಗ್ರಾಮದ ರಸ್ತೆ ಸಂಪೂರ್ಣ ಹದೆಗೆಟ್ಟಿದೆ ಎಂದು ಗ್ರಾಮಸ್ಥರ ದೂರನ್ನು ಆಲಿಸಿದ ಹೇಮಲತಾ ನಾಯಕ ಅವರು ಕಳೆದ ರಾತ್ರಿ ಮಣ್ಣು ತುಂಬಿದ ಟಿಪ್ಪರ್ ನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಗ್ರಾಮೀಣ ಠಾಣೆ ಪಿಎಸ್ ಐ ಜಯಪ್ರಕಾಶ ಅವರಿಗೆ ಪೋನ್ ಮಾಡಿ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡುತ್ತಿದ್ದಂತೆ ಪ್ರತಿಕ್ರೀಯಿಸಿದ ಪಿಎಸ್ ಐ ಅವರು ನನ್ನ ಹೊಲಕ್ಕೆ ನಾನೆ ಮಣ್ಣನ್ನು ಹಾಕಿಸುತ್ತಿದ್ದೇನೆ ಎಂದು ಸಬೂಬ ನೀಡಿದ್ದಾರೆ. ಇದಕ್ಕೆ ಗರ್ಂ ಆದ ಹೇಮಲತಾ ನಾಯಕ ಅವರು ಮಣ್ಣನ್ನು ಡ್ಯಾಂನಿಂದ ಅಕ್ರಮವಾಗಿ ಹೇಗೆ ಸಾಹಿಸುತ್ತಿದ್ದೀರಿ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯದಿರುವುದು ಕಾನೂನು ವಿರೋಧಿ ಕೆಲಸವಲ್ಲವೇ ಎಂದು ಪ್ರಶ್ನಿಸಿದಾಗ ದಂಡ ಕಟ್ಟುತ್ತೇನೆ ಬಿಡಿ ಮೇಡಂ ಎಂದು ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ. ನಂತರ ತಕ್ಷಣ ಎಸ್ ಪಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ನನ್ನ ಕಣ್ಣೆದುರುಗೆ ಮೂರು ಟಿಪ್ಪರ್ ಹೋಗಿದ್ದು, ಈಗ ಒಂದು ಮಾತ್ರ ನಿಲ್ಲಿಸಿ ವಿಚಾರಿಸುತ್ತಿದ್ದೇವೆ. ತಕ್ಣಣ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಸ್ಥಳಕ್ಕೆ 112 ಪೊಲೀಸರು ಆಗಮಿಸಿ ಮಣ್ಣು ತುಂಬಿದ ಟಿಪ್ಪರ್ ನ್ನು ವಶಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್