ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ಪ್ರಧಾನ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ. ಸಿ ಅವರು ಮಂಡ್ಯಾ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ಇವರ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲತಾಕುಮಾರಿ.ಎಂ ಅವರು ಕೊಪ್ಪಳ ನಿಯೋಜನೆಗೊಂಡಿದ್ದಾರೆ.
ರಾಜ್ಯ ಹೈಕೋರ್ಟಿನ ರಜಿಸ್ಟರ್ ಆಫ್ ಜನರಲ್ ಎಂ.ಚಂದ್ರಶೇಖರ ಅವರು ಜು.೨೩ ರಂದು ಆದೇಶ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಪ್ಪಳದ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ.ಸಿ ಅವರು ವಿಶೇಷವಾಗಿ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತ ಸಮುದಾಯದವರ ಮೇಲಿನ ಹತ್ತು ವರ್ಷಗಳ ಹಿಂದೆ ನಡೆದ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ನೂರು ಆರೋಪಿಗಳಿಗೆ ಜೀವಾವಧಿ ಶಿPಯ ತೀರ್ಪು ನೀಡಿ ವಿಶೇಷ ಗಮನ ಸೇಳೆದಿದ್ದರು. ಮತ್ತು ಕೊಪ್ಪಳದಲ್ಲಿ ನೆನೆಗುದಿಗೆ ಬಿದ್ದಿದ್ದ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲು ಮತ್ತು ಗಂಗಾವತಿಯಲ್ಲಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಪ್ರಾರಂಭವಾಗಲು ವಿಶೇಷ ಮುತುವರ್ಜಿವಹಿಸಿರುವುದನ್ನು ಜನತೆ ಸ್ಮರಿಸುತ್ತಿದ್ದಾರೆ.






