
18th June 2025
ಶುಭೋದಯ ವಾರ್ತೆ ಚಿಟಗುಪ್ಪಾ ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿಮಠ ಸುಕ್ಷೇತ್ರ ಇಟಗಾ ಪೀಠಾಧಿಪತಿಗಳಾದ ಧರ್ಮಶ್ರೀ ತಪೋರತ್ನ ಷ ಬ್ರಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹಾಗೂ ಷ.ಬ್ರಶ್ರೀ ಶಂಭುಲಿಂಗ ಶಿವಾ ಚಾರ್ಯರು ಹಿರೇಮುನವಳ್ಳಿ ಇವರ ದಿವ್ಯ ನೇತೃತ್ವದಲ್ಲಿ ಲಿಂ ಪೂಜ್ಯ ದಾಸೋಹ ಮೂರ್ತಿ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳವರ ದ್ವಿತೀಯ ಪುಣ್ಯಾರಾಧನೆ ಕಾರ್ಯಕ್ರವನ್ನು ಶಾಸಕರಾದ ಸಿದ್ದಲಿಂಗಪ್ಪ ಪಾಟೀಲ ರವರು ಉದ್ಘಾಟಿಸಿದರು ಚನ್ನಮಲ್ಲೇಶ್ವರ ತ್ಯಾಗಿಗಳ ೨ನೇ ಪುಣ್ಯಾರಾಧನೆ ನಿಯಮಿತವಾಗಿ ಉಚಿತ ಆರೋಗ್ಯ ಶಿಭಿರವನ್ನು ಆಯೋಜಿಸಲಾಗಿತ್ತು. ಹಾಗೂ ಮನೆಗೊಂದು ಮರ ಉರಿಗೊಂದು ವನ ಸಸಿಗಳನ್ನು ನೀಡುವುದರ ಮೂಲಕವಾಗಿ ಪರಿಸರದ ಜಾಗೃತಿಯನ್ನು ಮುಡಿಸಲಾಯಿತ್ತು ಹಾಗೂ ಈಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿರುವ ಷ ಬ್ರ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳ ಜೀವನ ಆದರ್ಶಮಯವಾಗಿತ್ತು ಅವರ ದಾಸೋಹ ಸೇವೆ ಇಂದಿಗೂ ಚಿರಸ್ಮರಣೆ ವಾಗಿದೆ ಅವರ ತ್ಯಾಗದ ಜೀವನ ಸಮಾಜದ ಜನರರಿಗೆ ಆದರ್ಶಪ್ರಾಯವಾಗಿದೆ ಎಂದು ನುಡಿದ್ದರು. ಈ ಸಂದಂರ್ಭದಲ್ಲಿ ಹಿರೇಮುನವಳ್ಳಿಯ ಶಿವಾಚಾರ್ಯರು ಹಾಗೂ ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದ ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿ ಮಠದಲ್ಲಿ ಪೀರಾಧಿ ಪತಿಗಳಾದ ಧರ್ಮಾಶ್ರೀ ತಪೋರತ್ನ ಷ ಬ್ರ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹಾಗೂ ಅಂದೆ ಸಂದರ್ಭದಲ್ಲಿ ಭದ್ರೇಶ್ವರ ಜೊತೆಗೆ ವೀಣಾ ಇವರ ವಿವಾಹ ಸಮಾರಂಭವು ನೆರವೇರಿತ್ತು ಸಮಾರಂಭದಲ್ಲಿ ನಾಡಿನ ವಿವಿಧ ಪರಮ ಪೂಜ್ಯರು ಹಾಗೂ ಹರ ಗುರು ಚರ ಮೂರ್ತಿಗಳು ಮತ್ತು ಅನೇಕ ರಾಜಕೀಯ ಧುರೀಣರು ಗಣ್ಯ ಮಾನ್ಯರು ಸಂಗೀತದ ಕಲಾವಿದರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಂದ್ರಣ್ಣಾ ಮೈಲೂರು ಅಣ್ಣೆಪ್ಪ ಇಸ್ಲಾಂಪೂರ ರೇವಪ್ರಾ ಪಾಟೀಲ ವಿರಶೆಟ್ಟಿ ಪಾಟೀಲ ನೀಲಕಂಠ ಇಸ್ಲಾಂಪೂರ ಆನಂದ ಸಾಗರ ನಾರಾಯಣಪೂರ ಶ್ರೀನಿವಾಸ ರೆಡ್ಡಿ ಕಂಠಯ್ಯಾ ಸ್ವಾಮಿ ಮಲ್ಲುರೆಡ್ಡಿ ಅಶೋಕ ಚೌದ್ರಿ ಸಿದ್ದಪ್ಪ ವಾಲಿ ಕಲ್ಲಯ್ಯಾ ಸ್ವಾಮಿ ಅಪಾರ ಭಕ್ತ ಸಮೂಹ ಭಾಗವಹಿಸಿತ್ತು.
18th June 2025
ಜಿಲ್ಲಾ ಮಟ್ಟದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ "11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು "ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು. ಆ ದಿನ ಬೆಳಗ್ಗೆ 7:00 ಗಂಟೆಯಿಂದ 7:45 ಗಂಟೆಯ ವರೆಗೆ ಯೋಗಾಭ್ಯಾಸ ನಡೆಯಲಿದೆ.
ಶಿಷ್ಟಾಚಾರದಂತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುದ್ರಿಸಿ, ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಕ್ರೀಡಾಂಗಣದ ಸ್ವಚ್ಛತೆ,ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರನ್ನು ಒಳಗೊಂಡ ಯೋಗಾಭ್ಯಾಸ ನಡೆಯಲಿದೆ. ಜೊತೆಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲಾ-ಕಾಲೇಜುಗಳು, ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯಾ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಆಯೋಜಕರಿಗೆ ಸೂಚಿಸಿದರು.
ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು,ಸಂಘ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಶುಹಬುದ್ದೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಲಕ್ಕಾ ಕೃಷ್ಣಾ ರೆಡ್ಡಿ , ಅಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
18th June 2025
ಮುಧೋಳ : ನರ್ಸರಿ, ಎಲ್.ಕೆ.ಜಿ. ಮತ್ತು ಯುಕೆಜಿ ಮಕ್ಕಳ ದೈಹಿಕ ಚಟುವಳಿಕೆಗಳ ಜೊತೆಗೆ ಮಾನಸಿಕ ಚಟುವಟಿಕೆಗಳನ್ನು ಕಲಿಸುತ್ತ ಇನ್ನಿತರ ವಿದ್ಯಾಭ್ಯಾಸಗಳ ಶಿಕ್ಷಣ ಕಲಿಯುವಂತೆ ಮಾಡುವಲ್ಲಿ ಕ್ರೀಡೋ ಲ್ಯಾಬ್ ಹೆಚ್ಚು ಸಹಕಾರಿಯಾಗಲಿದೆ ಎಂದು ರಾಯಲ್ ಸ್ಕೂಲ್ನ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣಾ ಅರಳೀಕಟ್ಟಿ ತಿಳಿಸಿದರು.
ಮುಧೋಳ ರಾಯಲ್ ಸ್ಕೂಲಿನಲ್ಲಿ ಕ್ರೀಡೋ ಲ್ಯಾಗ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ 48 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಇಂದು 1250 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ. ಆದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಇದಕ್ಕೆಲ್ಲ ಹಿಂದಿನ ಹಾಗೂ ಈಗಿನ ಪಾಲಕರ ಸಹಾಯ, ಸಹಕಾರ ಬಹುಮುಖ್ಯವಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅತೀ ಸರಳವಾಗುವಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ರೀಡೋ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಪ್ರೊ.ಬಸವರಾಜ ಕೊಣ್ಣೂರ ಅವರು, ಡಾ.ತಿಮ್ಮಣ್ಣಾ ಅರಳೀಕಟ್ಟಿ ಅವರು ಓರ್ವ ಕನಸುಗಾರ, ಸದಾ ಹೊಸತನ್ನು ಬಯಸುವ ಹಾಗೂ ಅದನ್ನು ತಕ್ಷಣಕ್ಕೆ ಅನುಷ್ಠಾನಕ್ಕೆ ತರುವ ಅದಮ್ಯ ಬಯಕೆ ಹೊಂದಿರುವಂತಹ ವ್ಯಕ್ತಿ. ಅವರು ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ವಿನೂತನ ವಿಶೇಷತೆಗಳನ್ನು ಕಂಡ ತಕ್ಷಣ ಅವುಗಳನ್ನು ತಮ್ಮ ಸ್ಕೂಲಿನಲ್ಲಿ ಆಳವಡಿಸಿಕೊಂಡು ಈ ಭಾಗದ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ವಿನೂತನ ಮಾದರಿಯ ಕ್ರೀಡೋ ಲ್ಯಾಬ್ ನಲ್ಲಿ ಮಕ್ಕಳ ಮಾನಸಿಕ ಹಾಗೂ ಆಟಪಾಠಗಳ ಚಟುವಟಿಕೆಗಳ ಮೂಲಕ ಮಕ್ಕಳಿಗೆ ವಿನೂತನ ಜ್ಞಾನ ನೀಡಲಾಗುತ್ತಿದೆ ಎಂದು ಹೇಳಿದರು.
ಮುದೋಳ ರಾಯಲ್ ಸ್ಕೂಲಿನ ಅಧ್ಯಕ್ಷೆ ಸವಿತಾ ತಿಮ್ಮಣ್ಣಾ ಅರಳೀಕಟ್ಟಿ ಮಾತನಾಡಿ, ನರ್ಸರಿ, ಎಲ್ ಕೆಜಿ ಹಾಗೂ ಯುಕೆವಿ ಮಕ್ಕಳ ಕಲಿಕೆ, ಆಟದೊಂದಿಗೆ ಪಾಠ ಎಂಬ ವಿಶೇಷತೆಯೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಗಲಕೋಟೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕ್ರೀಡೋ ಲ್ಯಾಬ್ನ್ನು ಅರಳೀಕಟ್ಟಿ ಫೌಂಡೇಶನ್ನ ಮುಧೋಳ ರಾಯಲ್ ಸ್ಕೂಲಿನಲ್ಲಿ ಆಳವಡಿಸಲಾಗಿದೆ. ಕ್ರೀಡೋ ಲ್ಯಾಬ್ ನಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಕಲಿಯುವ ಹುಮ್ಮಸ್ಸು ದ್ವಿಗುಣಗೊಳ್ಳುತ್ತದೆ. ಸುಸಜ್ಜಿತವಾದ ಕ್ರೀಡೋ ಲ್ಯಾಬ್ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಕಲಿಕೆಯ ವಿಷಯವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸಲು ಈ ಕಲಿಕಾ ಸಾಧನಗಳು ಸಹಾಯ ಮಾಡಲಿದೆ ಎಂದು ತಿಳಿಸಿದರು.
ರಾಯಲ್ ಸ್ಕೂಲಿನ ಕಾರ್ಯದರ್ಶಿ ವಿನಾಯಕ ತಿಮ್ಮಣ್ಣಾ ಅರಳೀಕಣ್ಣ, ಪಿಎಸ್ಐ ಅಜೀತಕುಮಾರ ಹೊಸಮನಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಪ್ರಾಂಶುಪಾಲ ಚಂದ್ರಶೇಖರ, ಕ್ರೀಡೋ ಲ್ಯಾಬ್ ನ ಮುಖ್ಯಸ್ಥ ಕಿಶೋರ ವೇದಿಕೆ ಮೇಲೆ ಉಪಸ್ಥಿತರಿದ್ದರು.
18th June 2025
ರಾಯಚೂರು,ಜೂ ೧೫- ಜಿಲ್ಲೆಯ ದೇವದರ್ಗ ತಾಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಅಕ್ರಮ ಪ್ರಕರಣವನ್ನು ಸಿಬಿಐ ತನಿಖೆಗೆವಹಿಸಿ ತಪ್ಪಿತಸ್ಥ ಎಲ್ಲಾ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕರ್ಯರ್ತ ಶರಣಬಸವ ಹೂಗಾರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
೨೦೨೦-೨೧ ಮತ್ತು ೨೦೨೧-೨೨ ಸಾಲಿನಲ್ಲಿ ದೇವದರ್ಗ ತಾಲೂಕಿನ ೩೩ ಗ್ರಾಮಗಳ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ರಮವಾಗಿರುವ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಯ ತಂಡ ಪರಿಶೀಲನೆ ವರದಿ ನೀಡಿದೆ. ೧೪೦ ಕೋಟಿ ರೂ ಅಕ್ರಮವಾಗಿ ರುವ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಜಿಲ್ಲಾ ತಾಲೂಕ ಪಂಚಾಯ್ತಿ ಅಧಿಕಾರಿಗಳು ಸೇರಿ ಪಂಚಾಯ್ತಿ ಪಿಡಿಓಗಳು ಹಾಗೂ ಹೊರಗುತ್ತಿಗೆ ನೌಕರರ ಲೋಪವನ್ನು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿ ನೀಡಲಾಗಿ ದೆ. ಆದರೂ ಪಿಡಿಓಗಳ ಸಾಮೂಹಿಕ ರ್ಗಾವಣೆ ಹೊರತುಪಡಿಸಿದರೆ ತಾಲೂಕ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆ ಉಪನರ್ದೇಶಕರುಗಳು, ಜಿಲ್ಲಾ ಪಂಚಾಯ್ತಿ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ. ತನಿಖಾ ವರದಿಯಲ್ಲಿ ಹಣ ದುರುಪಯೋಗ ಪಡೆಸಿಕೊಂಡವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಹಣವಸೂಲಿ ಮಾಡು ಸೂಚಿಸಿದ್ದರೂ ಕ್ರಮವಾಗುತ್ತಿಲ್ಲ. ಪಂಚಾಯತ್ ರಾಜ ಇಲಾಖೆ ಅಪರ ಮುಖ್ಯ ಕರ್ಯರ್ಶಿ ಹಾಗೂ ಅಂದಿನ ಜಿಲ್ಲಾ ಪಂಚಾಯ್ತಿ ಮುಖ್ಯ ಕರ್ಯನರ್ವಾಹಕ ಅಧಿಕಾರಿ, ನೋಡೆಲ್ ಅಧಿಕಾರಿಗಳು ಸೇರಿದಂತೆ ಹಣ ವ್ಯವಹಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರ್ಕಾರ ಮುಂದಾಗುತ್ತಿಲ್ಲ. ತನಿಖೆ ಅಕ್ರಮ ಬಹಿರಂಗಗೊಂಡರೂ ರಕ್ಷಣೆ ಮಾಡಲಾಗುತ್ತಿದೆ. ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಶಿಫಾರಸ್ಸು ಮಾಡಬೇಕು, ಅಕ್ರಮಗಳು ನಡೆಯದಂತೆ ತಡೆಯಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.ಮತ್ತು ಸಾಮಾಜಿಕ ಪರಿಶೋಧನ ನರ್ದೇಶನಾಲಯದ ರಾಜ್ಯ ಕಚೇರಿಯಲ್ಲಿ ಕೆಲಸ ನರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಅಕ್ರಮ ದಲ್ಲಿ ಭಾಗಿಯಾಗಿ ತನಿಖೆ ನಡೆಸದಿರಲು ಹಣದ ಆಮಿಷ ಒಡ್ಡಿ ಕುಮ್ಮುಕ್ಕು ನೀಡುತ್ತಿರುವುದು ಕಂಡುಬಂದಿರುತ್ತದೆ ಆದ್ದರಿಂದ ಶೀಘ್ರವೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳದಿದ್ದರೆ ಉಗ್ರಾ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಮತ್ತು ಸಂಬಂದಿಸಿದ ಎಲ್ಲಾ ಧಾಖಲೆಗಳನ್ನು ಮುಖ್ಯ ಮಂತ್ರಿ ಹಾಗು ಸಚಿವರಿಗೆ ನೀಡುತ್ತೇವೆ ಎಂದು ತಿಳಿಸಿರುತ್ತಾರೆ
18th June 2025
ಬಳ್ಳಾರಿ ಜೂನ್ ೧೭. ಶ್ರೀ ನಂದ ವಸತಿ ಶಾಲೆಯ ಮುಖ್ಯೋಪಾದ್ಯಾಯರಾದ ಕೊಲ್ಮಿ
ಲಕ್ಷಿö್ಮಕಾಂತ್ ಅವರಿಗೆ “ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿ” ೧೫.೦೬.೨೦೨೫ ರಂದು
ಬೆAಗಳೂರಿನ ಕರುನಾಡ ಕನ್ನಡ ಕಲಾ ಸಿರಿ ಬಳಗ (ರಿ) ಬೆಂಗಳೂರು. ಇವರು
ಆಯೋಜಿಸಿದ್ದ ೨೦೨೫-೨೬ನೇ ಸಾಲಿನ “ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿ” ಗೆ
ಬಳ್ಳಾರಿಯ ಪ್ರತಿಷ್ಟಿತ ಶಾಲೆಯಾದ ಶ್ರೀ ನಂದ ವಸತಿ ಶಾಲೆ ವಿದ್ಯಾನಗರದ ಶಾಲೆಯ
ಮುಖ್ಯೋಪಾದ್ಯಾಯರಾದ ಕೊಲ್ಮಿ ಲಕ್ಷಿö್ಮಕಾಂತ್ ಅವರು ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ.
ಕಳೆದ ವರ್ಷದಲ್ಲಿ ರಾಜ್ಯ ಮಟ್ಟದ ಉತ್ತಮ ಮುಖ್ಯ ಶಿಕ್ಷಕ ‘ಶಿಕ್ಷಣ ಪ್ರಕಾಶ
ಪ್ರಶಸ್ತಿ’ಗೆ ಆಯ್ಕೆಯಾಗಿದ್ದರು. ತಾವು ಅತ್ಯಂತ ಪವಿತ್ರವಾದ ಬೋಧಕ
ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕಾಯಾ, ವಾಚಾ, ಮನಸ್ಸಿನಿಂದ ಕನ್ನಡ
ಭಾಷೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಮ್ಮ
ವಿದ್ಯಾರ್ಥಿಗಳು ಉತ್ತಮವಾದ ಹೆಚ್ಚಿನ ಅಂಕಗಳನ್ನು ಗಳಿಸಲು ಕಾರಣಕರ್ತರಾದ
ಇವರಿಗೆ ಶಾಲೆಯ ಆಡಳಿತಮಂಡಳಿವರಿAದ ಸನ್ಮಾನಿಸಲಾಯಿತು ಮತ್ತು ಶಾಲಾ ಕಾಲೇಜಿನ
ಅಡಳಿತ ಮಂಡಳಿಯವರು, ಸಿಬ್ಬಂಧಿ ವರ್ಗದವರು ಹಾಗು ವಿದ್ಯಾರ್ಥಿಗಳಿಂದ ಇವರಿಗೆ
ಶುಭಕೋರಲಾಗಿದೆ.
ಶ್ರೀ ನಂದ ವಸತಿ ಶಾಲೆಯ ಮುಖ್ಯೋಪಾದ್ಯಾಯಕೊಲ್ಮಿ ಲಕ್ಷಿö್ಮಕಾಂತ್ ಗೆ “ಉತ್ತಮ
ಸಾಧಕ ಶಿಕ್ಷಕ ಪ್ರಶಸ್ತಿ”ಕರುನಾಡ ಕನ್ನಡ ಕಲಾ ಸಿರಿ ಬಳಗ (ರಿ) ಬೆಂಗಳೂರು
ಇವರು ೧೫.೦೬.೨೦೨೫ ರಂದು ಬೆಂಗಳೂರಿನ ಸೂರ್ಯ ಫೌಂಡೇಶನ್(ರಿ) ಹಾಗೂ ಸ್ಪಾರ್ಕ್
ಅಕಾಡೆಮಿ ಬೆಂಗಳೂರು ಇವರು ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ರಾಜ್ಯ ಮಟ್ಟದ
ಉತ್ತಮ ಮುಖ್ಯ ಶಿಕ್ಷಕ ‘ಶಿಕ್ಷಣ ಪ್ರಕಾಶಪ್ರಶಸ್ತಿ’ಗೆ ಬಳ್ಳಾರಿಯ ಪ್ರತಿಷ್ಟಿತ
ಶಾಲೆಯಾದ ಶ್ರೀ ನಂದ ವಸತಿ ಶಾಲೆ ವಿದ್ಯಾನಗರದ ಶಾಲೆಯ
ಮುಖ್ಯೋಪಾದ್ಯಾಯರಾದ ಕೊಲ್ಮಿ ಲಕ್ಷಿö್ಮಕಾಂತ್ ಅವರು ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ. ಅವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾ, ವಿದ್ಯಾರ್ಥಿಗಳ
ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ, ಶಾಲೆಯ
ಅಭಿವೃದ್ಧಿಗೆ ಶ್ರಮಿಸುತ್ತಾ ಉತ್ತಮ ಸಾಧಕರಾಗಿ ವಿಶಿಷ್ಟ ಪ್ರಧಾನ ಗುರುಗಳಾಗಿ,
ಪ್ರಮಾಣಿಕ ಸೇವೆ ಸಲ್ಲಿಸುತ್ತಿರುವ ಇವರಿಗೆ ಶಾಲಾ ಕಾಲೇಜಿನ ಅಡಳಿತ
ಮಂಡಳಿಯವರು, ಸಿಬ್ಬಂಧಿ ವರ್ಗದವರು ಹಾಗು ವಿದ್ಯಾರ್ಥಿಗಳಿಂದ ಇವರಿಗೆ
ಶುಭಕೋರಲಾಗಿದೆ. ಇವರಿಗೆ ಸ್ಥಳ ದಿ:೧೫-೧೦-೨೦೨೪ ಬೆಳಗ್ಗೆ ೧೦:೦೦ ಗಂಟೆಗೆ Iಓಆಔಉಐಔಃಇ
ಉಖಔUP ಔಈ IಓSಖಿIಖಿUಖಿIಔಓS ಹುರಳಿಚಿಕ್ಕನಹಳ್ಳಿ –ಚಿಕ್ಕಬಾಣಾವಾರ(ಪೋಸ್ಟ್) ಹೆಸರಘÀಟ್ಟ
ಮುಖ್ಯರಸ್ತೆ - ಬೆಂಗಳೂರು-೯೦. ರಲ್ಲಿ ಇವರಿಗೆ ಪ್ರಶಸ್ತಿಪ್ರಧಾನ
ಮಾಡಲಾಗುವುದು.
18th June 2025
ಬಳ್ಳಾರಿ ಜೂನ್ ೧೭ : ಮೊರಾರ್ಜಿ ದೇಸಾಯಿ, ಗಾಂಧಿ ತತ್ವ, ನವೋದಯ ಸೇರಿದಂತೆ ಕೇಂದ್ರ
ಸರ್ಕಾರಿ ಸ್ವಾಮ್ಯದ ವಸತಿ ಶಾಲೆಗಳಿಗೆ ಪ್ರವೇಶವನ್ನು ಬಯಸಿ ನೂರಾರು
ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು, ಅಷ್ಟೇ ಅಲ್ಲದೆ ೬, ೭ ಮತ್ತು ೮ನೇ
ತರಗತಿಯ ವಿದ್ಯಾರ್ಥಿಗಳು ವರ್ಗಾವಣೆಯನ್ನು ಬಯಸಿ ಹಲವಾರು ಅರ್ಜಿಗಳನ್ನು
ಆಯಾ ಮುಖ್ಯ ಉಪಾಧ್ಯಾಯರಲ್ಲಿ ಸಲ್ಲಿಸಿಕೊಂಡಿದ್ದು ಅವುಗಳನ್ನು ಇಂದು ಸಹಾಯಕ
ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸುವ ಮೂಲಕ ಇತ್ಯರ್ಥಪಡಿಸಲಾಯಿತು.
ಆದರೆ ಈ ವಿದ್ಯಾರ್ಥಿಗಳ ಅರ್ಜಿಗಳನ್ನು ಇತ್ಯರ್ಥಪಡಿಸದೆ ಮತ್ತೆ ಮುಂದಿನ ವಾರಕ್ಕೆ
ಸಭೆಯನ್ನು ಮುಂದೂಡಿರುವುದಾಗಿ ಸಾಯಕ ಆಯುಕ್ತರು ಸಭೆಯನ್ನು
ಮುಕ್ತಾಯಗೊಳಿಸಿದರು. ಇದರಿಂದ ಸಹಾಯಕ ಆಯುಕ್ತರ ಕಚೇರಿಗೆ ಬಂದಿದ್ದ
ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗೊಂದಲದಿAದ ಮರಳಿದರು.
ಹೀಗೆ ಪದೇ ಪದೇ ಹಲವಾರು ಸಲ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಾಂಶುಪಾಲರು
ಮತ್ತು ಸಂಬAಧಿಸಿದ ಅಧಿಕಾರಿಗಳನ್ನು ಪೋಷಕರು ತರಾಟೆಗೆ
ತೆಗೆದುಕೊಂಡರು. ದಲಿತ ಮುಖಂಡರು ಮತ್ತು ಹಿರಿಯ ಪತ್ರಕರ್ತರಾದ
ಚಳ್ಳಗುರ್ಕಿ ಸೋಮಶೇಖರ್ ಅವರು ಹೀಗೆ ಪದೇ ಪದೇ ವಿದ್ಯಾರ್ಥಿಗಳನ್ನು ಮತ್ತು
ಪೋಷಕರ ಕಚೇರಿಗೆ ಅಲೆದಾಟ ತಪ್ಪಿಸುವಂತೆ ವಸತಿ ಶಾಲೆಗಳ
ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರನ್ನು ಹಿಗ್ಗಾಮುಗ್ಗ ತರಾಟೆಗೆ
ತೆಗೆದುಕೊಂಡು ಕೂಡಲೇ ಪ್ರವೇಶ ಮತ್ತು ವರ್ಗಾವಣೆಯ ಸಮಸ್ಯೆಯನ್ನು
ಪರಿಹರಿಸಬೇಕೆಂದು ಒತ್ತಾಯಿಸಿದರು.
18th June 2025
ಬಳ್ಳಾರಿ ಜೂನ್ ೧೭. ನೀಟ್-೨೦೨೫ ರ ರಾಷ್ಟç ಮಟ್ಟದ ದಂತ ವೈದ್ಯಕೀಯ ಪ್ರವೇಶ
ಪರೀಕ್ಷೆಯಲ್ಲಿ, ಬೆಸ್ಟ್ ಕಾಲೇಜಿನ (ಬಳ್ಳಾರಿ ಪದವಿ ಪೂರ್ವ ಕಾಲೇಜು) ವಿದ್ಯಾರ್ಥಿಗಳಾದ
ಸೈಯದ್ ಮಹಮದ್ ಅಶ್ಫಕ್ (೫೫೦-ಅಂಕ), ಕೆ.ಧೀರಜ್ ೪೫೩ ಅಂಕ, ಅಫಿಫಾ ಅಂಜುಮ್ (೪೪೫- ಅಂಕ), ೪೦೦ ಅಂಕಗಳಿಗಿAತಲು ಹೆಚ್ಚು ೧೦ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ವರರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ
ಕೋನಂಕಿ ರಾಮಪ್ಪ, ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್ಕುಮಾರ್,
ಕಾರ್ಯಧರ್ಶಿಗಳಾದ ಮನ್ನೆ ಶ್ರೀನಿವಾಸುಲು, ರಾಮರಾಯುಡು, ಉಪಪ್ರಾಚಾರ್ಯರಾದ
ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
13th June 2025
ಬೆಂಗಳೂರು ನಗರ ಜಿಲ್ಲೆ, ಜೂ.13 (ಕರ್ನಾಟಕ ವಾರ್ತೆ): ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಫಿರೋಜ್ ಖಾನ್ ಖಿಲ್ಲೇದಾರ್, ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಡಾ.ಕೆ.ಎಸ್.ಮುರಳಿ, ಉಪವಿಭಾಗ-05 ಅಬಕಾರಿ ಉಪ ಅಧೀಕ್ಷಕರಾದ ಸಿ.ಲಕ್ಷ್ಮೀಶ, ಕಂದಾಯ, ಕೆ.ಎಸ್.ಬಿ.ಸಿ.ಎಲ್ ಹಾಗೂ ಇಲಾಖಾ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಸಮಕ್ಷಮದಲ್ಲಿ ಜಪ್ತು ಪಡಿಸಿದ ಅಕ್ರಮ ವಿದೇಶಿ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು ಜೂನ್ 12 ರಂದು ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲರೀಸ್ ಪರಾಂಗಣದಲ್ಲಿ ಒಟ್ಟು 516 ಬಾಟಲ್ ಗಳಲ್ಲಿ ಇದ್ದಂತಹ 516 ಲೀಟರ್ ವಿದೇಶಿ ಮದ್ಯವನ್ನು, ಸಿಗರೇಟ್ ಜಪ್ತು ಪಡಿಸಿದ ಖಾಲಿ ಬಾಟಲ್ ಗಳನ್ನು ನಾಶ ಪಡಿಸಲಾಯಿತು, ನಾಶ ಪಡಿಸಿದ ವಸ್ತುಗಳ ಒಟ್ಟು ಮೌಲ್ಯ 39 ಲಕ್ಷ ರೂಗಳು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 30 ಲಕ್ಷ ನಷ್ಟ ಉಂಟಾಗುವುದನ್ನು ತಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಾನವನ ಸೇವನೆಗೆ ಯೋಗ್ಯವಲ್ಲದ 362.14 ಲೀಟರ್ ಮದ್ಯ, ವೈನ್ ಹಾಗೂ ಬಿಯರ್ ನ್ನು ನಾಶಪಡಿಸಲಾಗಯಿತು ಎಂದು ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
13th June 2025
ಜುಮಾಲಾಪುರ್ ತಾಂಡಾ : ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವೆಂಕಟೇಶ್ .ಎಂ. ರಾಠೋಡ
ಅಂತ್ಯಕ್ರಿಯೆ ಸಕಲ ರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಜುಮಾಲಾಪುರ್ ತಾಂಡದಲ್ಲಿ ಶುಕ್ರವಾರ ನೆರವೇರಿತು.
ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಬಿಳಿರಕ್ತ ಕಣಗಳು ಕಡಿಮೆ ಆಗಿರೋದರಿನ ಯೋಧ ಮೃತಪಟ್ಟಿದ್ದರು.
ಮೃತರ ಪರ್ಥಿವ ಶರೀರವು ಬಾಗಲಕೋಟ ಆಸ್ಪತ್ರೆಯಿಂದ ಗುರುವಾರ ಮದ್ಯರಾತ್ರಿ ಬಾಗಲಕೋಟದಿಂದ ಬಂದು ಶುಕ್ರವಾರ ಬೆಳಿಗ್ಗೆ ಜುಮಾಲಾಪುರ್ ತಾಂಡಕ್ಕೆ
ತರಲಾಯಿತು. ಅಲ್ಲಿಂದ ರಸ್ತೆ ಮೂಲಕ ಆಂಬುಲೆನ್ಸ್ ವಾಹನದ ಮೂಲಕ ತರಲಾಯಿತು.
ನಾರಾಯಣಪುರದಿಂದ ಸುಮಾರ ೧೫ ಕಿ.ಮೀ ದೂರವಿರುವ ಯೋಧನ ಸ್ವಗ್ರಾಮ. ಜುಮಾಲಾಪುರ್ ತಾಂಡವರೆಗೆ ಪರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ವೆಂಕಟೇಶ ಅಮರ ರಹೇ, ಬೋಲೊ ಭಾರತ್ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಮಾಜಿ ಸೈನಿಕರು, ಯುವಕರು, ಗ್ರಾಮಸ್ಥರು ಹಾಗೂ ಸರ್ವಜನಿಕರು ಪಾಲ್ಗೊಂಡಿದ್ದರು.
ಮೃತ ಯೋಧನ ಪರ್ಥಿವ ಶರೀರ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬಣಿ ಮಿಡಿದರು.
ಸ್ವಗ್ರಾಮದ ಹೊರವಲಯದಲ್ಲಿ ಸರ್ವಜನಿಕರಿಗೆ ಯೋಧನ ಪರ್ಥಿವ ಶರೀರದ ಅಂತಿಮ ರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಹುಣಸಗಿ ತಶೀಲದಾರರು ಹುಸೇನಾ.ಎ. ರ್ಕಾವಾಸ್, ಕೊಡೇಕಲ್ ಉಪ ತಶೀಲದಾರರು ಕಾಲಪ್ಪ ಜಂಜಿಗಡ್ಡಿ. ಗ್ರಾಮ ಆಡಳಿತ ಅಧಿಕಾರಿ ಪರಶುರಾಮ, ಹುಣಸಗಿ ಪೊಲೀಸ್ ಸಿ.ಪಿ.ಐ ರವಿಕುಮಾರ್ , ಕೊಡೇಕಲ್ ಪಿ.ಎಸ್.ಐ ಅಯ್ಯಣ್ಣ ನವರು ಪೊಲೀಸ್ ಬಂದೋಬಸ್ತಾ ನೀಡಿದರು ಜೊತೆಯಲ್ಲಿ
ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಸಕಲ ರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ಸಕಲ ರ್ಕಾರಿ ಗೌರವಗಳೊಂದಿಗೆ ಮೃತ ಯೋಧ ವೆಂಕಟೇಶ ಎಂ ರಾಠೋಡ ಅವರ ಅಂತ್ಯಕ್ರಿಯೆ ನೆರವೇರಿತು. ವರದಿಗಾರ : ಶಿವು ರಾಠೋಡ
10th June 2025
ಶುಭೋದಯ ವರ್ತೆ ಚಿಟಗುಪ್ಪಾ ಯುನಿರ್ಸೆಲಸ ನ್ಯಾನೊ ಸಾಫಟೆಕ ಕಂಪ್ಯೂಟರ ಎಜ್ಯುಕೆಶನ ಸೆಂಟರ್ ಹಾಗೂ ಗ್ರಾಮೀಣ ನಗರಾಭಿವೃದ್ಧಿ ಸಂಸ್ಥೆ ಬೀದರ ಇವರ ಆಯೋಜಿಸಿದ ಸ್ವಾಗತ ಹಾಗೂ ಬೀಳ್ಕೊಡುಗೆ ಕರ್ಯಕ್ರವನ್ನು ಯು ಎನ್ ಎಸ್ ಟಿ ಕಂಪ್ಯೂಟರನಲ್ಲಿ ಚಿಟಗುಪ್ಪಾನಲ್ಲಿ ಹಮ್ಮಿಕೊಳ್ಳಲಾಯಿತ್ತು ಗಣಕಯಂತ್ರ ಎಂಬುದು ಮಾಹಿತಿಯನ್ನು ಸಂಗ್ರಹಿಸುವು ಸಂಸ್ಕರಿಸುವುದು ಹಾಗೂ ಪ್ರರ್ಶಿಸುವುದು ಇತ್ಯಾದಿ ಕರ್ಯಗಳನ್ನು ವೇಗವಾಗಿ ಮತ್ತು ನಿಖರವಾಗಿ ನರ್ವಹಿಸುವ ಎಲೆಕ್ಟ್ರಾನಿಕ ಸಾಧನವಾಗಿದೆ ವೇಗ ಗಣಕಯಂತ್ರವು ಹೆಚ್ಚಿನ ವೇಗದಲ್ಲಿ ಗಣನೆ ಮತ್ತು ಡೇಟಾ ಸಂಸ್ಕರಣೆ ಮಾಡುತ್ತದೆಯೆಂದು ಕನ್ನಡ ಸಾಹಿತ್ಯ ಪರಿಪತ್ತಿನ ತಾಲ್ಲೂಕ ಅಧ್ಯಕ್ಷರಾದ ಅನೀಲ ಕುಮಾರ ಸಿಂಧೆ ಮಾತನಾಡಿದ್ದರು. ಮುಖ್ಯ ಅತಿಥಿಗಳಾಗಿ ಸಂಜೀವನ ಬೋಸ್ಲೆ ಮಾತನಾಡಿ ನಿಖರತೆ ದೋಷರಹಿತವಾಗಿ ಕೆಲಸ ನರ್ವಹಿಸುತ್ತದೆ ಬಹುಮುಖತೆ ಶಿಕ್ಷಣ ವ್ಯವಹಾರ ಆರೋಗ್ಯ ವಿಜ್ಞಾನ ಸಂಶೋಧನೆ ರ್ಥಿಕ ಕ್ಷೇತ್ರ ಉಪಯೋಗಿಸಬಹುದು ಮಾಹಿತಿ ಸಂಗ್ರಹಣೆ ಸಹಾಯಕಾರಿಯಾಗಿದ್ದೆ ಎಂದು ನುಡಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಗಣೇಶ ಎಸ್ ಮಡ್ಡೆ ಮಾತನಾಡಿ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಸಂಸ್ಕರಿಸುವುದು ಆಡಳಿತ ಲೆಕ್ಕ ಚುಕ್ಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣಾಮಕಾರಿತ್ವ ಹೆಚ್ಚಿಸುವುದು ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಶರಣಮ್ಮಾ ಎಸ್ ಮಡ್ಡೆ ರವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನೂತನ ಅವಿಷ್ಕಾರಗಳಿಗೆ ಪೂರಕವಾಗಿ ದೈನಂದಿನ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುವುದೆಂದು ಹೇಳಿದ್ದರು. ಈ ಕರ್ಯಕ್ರಮದಲ್ಲಿ ಮುನಿಶ ಶ್ರೀನಿವಾಸ ಶಿವಾನಂದ ಆನಂದ ಅವಿನಾಶ ಮನೋಹರ ಅರಣು ಕುಮಾರ ಸತೀಷ ರ್ಜುನ ಸಂಜೀವಕುಮಾರ ಮಮಿತಾ ಹಾಗೂ ವಿದ್ಯರ್ಥಿ ವಿದ್ಯರ್ಥಿನಿ ಭಾಗವಹಿಸಿದ್ದರು