

1st June 2025

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳು ಗುರುವಾರ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಜರಗಿತು ಎರಡು ತಿಂಗಳಿಂದ ರಜೆಯ ಮಜವನ್ನು ಅನುಭವಿಸಿದ್ದ ವಿದ್ಯಾರ್ಥಿಗಳು ಗುರುವಾರ ಶಾಲೆಯತ್ತ ಮುಖ ಮಾಡಿದರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾವಿನ ತಳಿರು ತೋರಣ ಕಟ್ಟಿ ಶೃಂಗಾರ ಮಾಡಿ ಮಕ್ಕಳಿಗೆ ಸ್ವಾಗತ ಕೋರಿದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಶಿಕ್ಷಕ ವೃಂದ ಮಕ್ಕಳಿಗೆ ಹಬ್ಬದ ಸಡಗರ ಸಂಭ್ರಮದಿಂದ ಮಕ್ಕಳು ಸಹ ನೆರೆದಿದ್ದರೂ ಮಕ್ಕಳಿಗೆ ಸಿಹಿ ಊಟ ಬಾಳೆಹಣ್ಣು ನೀಡಿದರು ಈ ಸಂದರ್ಭದಲ್ಲಿ ಮಾತನಾಡಿ ಮುಖ್ಯ ಗುರುಗಳಾದ ಹೆಚ್ ಚೌಡಪ್ಪ ಇವರು ಪೋಷಕರಿಗೆ ನಮ್ಮ ಶಾಲೆಯಲ್ಲಿ ಎಲ್ ಕೆ ಜಿ ಯುಕೆಜಿ ಇದೆ ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ತರಹದ ಸೌಲಭ್ಯವಿದ್ದು ಮಕ್ಕಳಿಗೆ ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಮುಂದೆ ಇದ್ದೇವೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಸರಕಾರಿ ಶಾಲೆ ಉಳಿಸಿ ಬೆಳೆಸಬೇಕು ಎಂದರು ಊರೊಳಗೆ ಸಂಚರಿಸಿ ಪೋಷಕರಿಗೂ ಶಾಲೆಯಲ್ಲಿ ದೊರಕುವ ಸೌಲಭ್ಯದ ಬಗ್ಗೆ ಪೋಷಕರಿಗೆ ತಿಳಿಸಲಾಯಿತು ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಎಲ್ಲಾ ಶಿಕ್ಷಕ ವೃಂದದವರಿಂದ ಸರಕಾರಿ ಶಾಲೆ ಬಗ್ಗೆ ಜಾಗೃತಿ ನೀಡುತ್ತಾ ಎಲ್ಲಾ ಪೋಷಕ ಮಿತ್ರರಿಗೂ ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿಮಲಾಕ್ಷಿ ಪಂಪಣ್ಣ ಸದಸ್ಯರಾದ ಟಿ ಬಸವರಾಜ್ ಉಪಾಧ್ಯಕ್ಷರಾದ ಶ್ರೀನಿವಾಸ್ ಪೂಜಾರ ಅಶ್ವಿನಿ ಫಕೀರಪ್ಪ ಉಚ್ಚೆಂಗೆಮ್ಮ ಸೋಮಶೇಖರ ಶಾಲಾ ಸಿಬ್ಬಂದಿ ವರ್ಗದವರು ನಾಗರಾಜ್ ಬಿ ಶಿಕ್ಷಕರು ಸಿದ್ರಮೇಶ ಶಿಕ್ಷಕರು ಜಿಆರ್ ಶಾಂತಿ ಕೆ ಕರಿಷ್ಮಾ ಎಂ ಶಿವಕುಮಾರ್ ಗುರುಬಸವರಾಜ್ ಎಂ ಅಡುಗೆ ಸಿಬ್ಬಂದಿ ವರ್ಗದವರು ಸಹ ಇತರರು ಇದ್ದರು.

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ