
6th June 2025
ಶುಭೋದಯ ವರ್ತೆ ಚಡಚಣ : ಇಂಡಿ ತಾಲೂಕಿನ ಕೊಳೂರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವಳಸಂಗ್ ಗ್ರಾಮದ ಅರಣ್ಯವಲಯದಲ್ಲಿ ಶ್ರೀ ಯಶವಂತರಾಯಗೌಡ ವಿ ಪಾಟೀಲ್ ಫೌಂಡೇಶನ್ ( ರಿ ) ಪಡನೂರ, ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಲಯ (ಅರಣ್ಯ ಇಲಾಖೆ) ಇಂಡಿ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವ್ರಕ್ಷೋಧ್ಯಾನ ಸಾವಳಸಂಗ ಉಸಿರಿಗಾಗಿ-- ಹಸಿರು ಅಭಿಯಾನ ಕರ್ಯಕ್ರಮಕ್ಕೆ ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ಚಾಲನೆ ನೀಡಿದರು.
ಮೊದಲಿಗೆ ಟಾಟಾ ಐಪಿಎಲ್ ನಲ್ಲಿ ಗೆದ್ದ ಆರ್ ಸಿ ಬಿ ಯ ವಿಜಯೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ಕರ್ಯಕ್ರಮದಲ್ಲಿ ನಿಧನ ಹೊಂದಿದ ಕ್ರೀಡಾ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ೨ ನಿಮಿಷ ಮೌನಾಚರಣೆ ಮಾಡಲಾಯಿತು. ನಾಡಗೀತೆ ಹಾಡುವುದರ ಮೂಲಕ ಕರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು ನಮಗೆ ಅನ್ನ ನೀಡುವುದೇ ಪರಿಸರ, ಪರಿಸರ ಬೆಳೆಸುವ ಜಾಗೃತಿ ಮೂಡಿಸಬೇಕಾಗಿದೆ. ಸಾಮಾಜಿಕ ಅರಣ್ಯ ವಲಯ ಹಾಗೂ ಪ್ರಾದೇಶಿಕ ಅರಣ್ಯವಲಯ ಅಧಿಕಾರಿಗಳ ಸೇವೆಗೆ ಅಭಿನಂದನೆ ವ್ಯಕ್ತಪಡಿಸಿದರು. ಭೂ ವಿಜ್ಞಾನ ಅಧಿಕಾರಿಗಳ ಜೊತೆ ಹೊಸ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಆಶರ್ವಾದದಿಂದ ಈ ಸಾವಲಸಂಗ ಗುಡ್ಡಕ್ಕೆ ನೀರು ಆಗಿದೆ. ನಮಗೆ ಬರುತ್ತಿರುವ ನೀರು ನಾವೆಲ್ಲ ಸರಿಯಾದ ರೀತಿ ಸದುಪಯೋಗ ಪಡಿಸಿಕೊಂಡಿದ್ದೆ ಆದ್ದಲಿ, ನಮ್ಮ ಇಡೀ ವಿಜಯಪುರ ಜಿಲ್ಲೆಯ ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಸಾಮಾಜಿಕ ಚಿಂತನೆ ಹಾಗೂ ನೈರ್ಗಿಕ ಚಿಂತನೆ ಎಲ್ಲರೂ ಇಟ್ಟುಕೊಳ್ಳಿ ಹಾಗೂ ನಾವೆಲ್ಲ ನಿರ್ಗವನ್ನು ಪ್ರೀತಿಸೋಣ ಎಂದು ತಿಳಿಸಿದರು. ಸಾಲು ಮರದ ತಿಮ್ಮಕ್ಕ ಜೀವನ ಶೈಲಿಯನ್ನು ಹಾಗೂ ಅವರಿಗೆ ಇರುವ ಪರಿಸರ ಪ್ರೇಮ ನಾವೆಲ್ಲರೂ ಬೆಳಿಸಿಕೊಳ್ಳೋಣ ಅವರ ನಿಟ್ಟಿನಲ್ಲಿ ನಾವು ಸಾಗೋಣೊ ಪರಿಸರ ಬೆಳಿಸೋಣೊ ಎಂದು ಹೇಳಿದರು.ಈ ಕರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಕಾತ್ರಾಳ - ಬಾಲಗಾಂವ ಗುರುದೇವ ಆಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಅವರು ತಮ್ಮ ಆಶರ್ವಚನದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರವರಿಗೆ ಇರುವ ಪರಿಸರ ಪ್ರೇಮದ ಕುರಿತು ಕೆಲವು ಸನ್ನಿವೇಶಗಳನ್ನು ಭೋದಿಸಿದರು.ಅರಣ್ಯ ಬೆಳಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಹಾಗೂ ರಕ್ಷಿಸೋಣ. ಯಥಾ ದೃಷ್ಟಿ, ತಥಾ ಸೃಷ್ಟಿ , ನಮ್ಮ ದೇಹ ಯಾವ ರೀತಿ ಇರುತ್ತೋ/ ನಾವು ನೋಡುವ ನೋಟ ಚೆನ್ನಾಗಿರುತ್ತೋ - ಅದೇ ರೀತಿ ಪರಿಸರ ಇರುತ್ತೆ. ಹಾಗಾಗಿ ನಮ್ಮ ದೇಹ ರಕ್ಷಿಸುವ ಹಾಗೆ ನಾವೆಲ್ಲ ಪರಿಸರವನ್ನು ರಕ್ಷಿಸಬೇಕು ಎಂದು ಸಂದೇಶ ನೀಡಿದರು. ಮೊದಲು ಗಿಡದ ಕೆಳಗೆ ಸ್ನಾನ ಮಾಡುವುದರ ಮೂಲಕ ಗಿಡಗಳನ್ನು ಬೆಳಿಸುತ್ತಿದ್ದರು. ಇಂತಹ ಅನೇಕ ಪ್ರೇರಣೆ ಮಾತುಗಳನ್ನು ಹೇಳಿ ಸರ್ವಜನಿಕರಲ್ಲಿ ಪರಿಸರ ಪ್ರೇಮವನ್ನು ಭೋದಿಸಿದರು.
ಸಮಾರಂಭದಲ್ಲಿ ಶಾಲಾ ಮಕ್ಕಳು ಹಾಗೂ ರೈತರಿಂದ ೩೩೦೦ ಸಸಿ ನೆಡುವುದು ಮತ್ತು ಬೀಜದ ಉಂಡೆ ಬಿತ್ತನೆ ಕರ್ಯಕ್ರಮ ಹಾಗೂ ಜಾಗೃತಿಗಾಗಿ -ಉಸಿರುಗಾಗಿ- ಹಸಿರು ಪರಿಸರ ಜಾಗೃತಿ ಅಭಿಯಾನ ಕರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡೋಮನಾಳದ ಶ್ರೀ ಎನ್.ಡಿ.ಪಾಟೀಲ, ಮುಖ್ಯ ಅತಿಥಿಗಳಾಗಿ ಬಾದಾಮಿಯ ಶ್ರೀ ಎಸ್.ಎಚ್.ವಾಸನ್, ಅರಣ್ಯ ಇಲಾಖೆಯ ಡಿಎಫ್ಒ ಶ್ರೀ ವನಿತಾ.ಆರ್, ವಿಜಯಪುರದ ಡಿಎಫ್ಒ ಶಿವಶರಣಯ್ಯ ಕೆ. ಹಾಗೂ ಜಿಲ್ಲಾ ಪಂಚಾಯಿತಿ ಉಪ ಕರ್ಯರ್ಶಿ ಶ್ರೀ ವಿಜಯಕುಮಾರ ಆಜೂರ, ಇಂಡಿಯ ಕಂದಾಯ ಉಪ ವಿಭಾಗಾಧಿಕಾರಿ ಶ್ರೀಮತಿ ಅನುರಾಧ ವಸ್ತ್ರದ, ಇಂಡಿ ತಹಶೀಲ್ದಾರ್ ಶ್ರೀ ಬಿ.ಎಸ್. ಕಡಕಭಾವಿ, ಚಡಚಣ ತಹಶೀಲ್ದಾರ್ ಶ್ರೀ ಎಸ್.ಬಿ. ಇಂಗಳೆ, ಇಂಡಿ ತಾಲೂಕು ಪಂಚಾಯಿತಿ ಕರ್ಯನರ್ವಾಹಕ ಅಧಿಕಾರಿ ನಂದೀಪ ರಾಠೋಡ, ಚಡಚಣ ತಾಲೂಕು ಪಂಚಾಯಿತಿ ಕರ್ಯನರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ವಿಜಯಪುರದ ಪ್ರವಾಸೋದ್ಯಮ ಇಲಾಖೆ ಉಪ ನರ್ದೇಶಕ ಮಲ್ಲಿಕರ್ಜುನ ಭಜಂತ್ರಿ, ಚಡಚಣ ಕ್ಷೇತ್ರ ಸಮನ್ವಯಾಧಿಕಾರಿ ಸುಜಾತಾ ಹುನ್ನೂರ, ಹಾಗೂ ಎಸ್. ಶ್ರೀ ಆರ್.ನಡುಗಡ್ಡಿ, ಇಂಡಿ ಕೃಷಿ ಇಲಾಖೆ ಸಾಹಯಕ ನರ್ದೇಶಕರಾದ ಮಹಾದೇವಪ್ಪ ಏವೂರ, ಇಂಡಿ ತೋಟಗಾರಿಕೆ ಇಲಾಖೆಯ ಸಹಾಯಕ ನರ್ದೇಶಕರಾದ ಎಚ್.ಎಸ್.ಪಾಟೀಲ,ಇಂಡಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನರ್ದೇಶಕಾದ ಉಮೇಶ ಲಮಾಣಿ , ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಂಯೋಜಕರು ಶ್ರೀ ಸಾಹೀಲ್ ದನಶೆಟ್ಟಿ, ಇಂಡಿ ಮತ್ತು ಚಡಚಣ ತಾಲೂಕಿನ ಶಾಲಾ ಶಿಕ್ಷಕರ ಮತ್ತು ವಿದ್ಯರ್ಥಿಗಳು ಹಾಗೂ ಇಂಡಿ-ಚಡಚಣ ತಾಲೂಕಿನ ಎಲ್ಲ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ,ತಾಲೂಕ ಪಂಚಾಯತ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಅರುಣಾಳನ್ನು ಅತ್ಯಾಚಾರ ಮಾಡಿ ಹತ್ಯೆ ಗೈದಿರುವ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸಿ- ಸುಬ್ಬಣ್ಣ
“ಗೃಹ ಆರೋಗ್ಯ ಯೋಜನೆಯ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಂಡ್ರಿಗಿ ನಾಗರಾಜ್