17th May 2026

ಸಿರುಗುಪ್ಪ: ಗ್ರಾಮೀಣ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಪ್ರೇಕ್ಷಕರನ್ನು ತಲುಪಿದಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹೇಳಿದರು.
ತಾಲೂಕಿನ ಬಲಕುಂದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ಬಳ್ಳಾರಿಯ ಅಭಿನಯ ಕಲಾ ಕೇಂದ್ರ ಆಯೋಜಿಸಿದ್ದ ‘ಗ್ರಾಮೀಣ ಕಲಾಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಶಿಸುತ್ತಿರುವ ಪುರಾತನ ಕಲೆಗಳಲ್ಲಿ ಒಂದಾದ ತೊಗಲುಗೊಂಬೆ ಆಟಕ್ಕೆ ಅವಕಾಶ ನೀಡಿರುವುದು ಶ್ಲಾಘನೀಯ. ಅಮಾವಾಸ್ಯೆಯ ರಾತ್ರಿ ಪುಣ್ಯಕ್ಷೇತ್ರದಲ್ಲಿ ಭಕ್ತರು ಸೇರುವ ಸಂದರ್ಭದಲ್ಲಿ ಗ್ರಾಮೀಣ ಕಲಾಸಂಗಮ ಆಯೋಜಿಸಿರುವುದು ಸ್ತುತ್ಯರ್ಹ ಎಂದು ಹೇಳಿದರು.
ವೇದಿಕೆಯಲ್ಲಿ ಹಿರಿಯ ಹಿಂದುಸ್ತಾನಿ ಗಾಯಕರಾದ ದೊಡ್ಡಬಸವ ಗವಾಯಿ, ಗುರುರಾಜರಾವ್ ಹಾಗೂ ಸಾಯಿಬಣ್ಣ ಉಪಸ್ಥಿತರಿದ್ದರು.
ಆರಂಭದಲ್ಲಿ ಕೆ. ದೊಡ್ಡಬಸಪ್ಪ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ವಿವಿಧ ಹಾಡುಗಳ ಮೂಲಕ ರಂಜಿಸಿದರು. ಹಾರ್ಮೋನಿಯಂನಲ್ಲಿ ಪುಟ್ಟರಾಜ ಹಾಗೂ ತಬಲಾದಲ್ಲಿ ವೀರಪಂಚಾಕ್ಷರ ಸಾಥ್ ನೀಡಿದರು.
ನಂತರ ಪ್ರದರ್ಶನಗೊಂಡ ‘ಹರಭಕ್ತ ಹರಳಯ್ಯ’ ನಾಟಕವು 12ನೇ ಶತಮಾನದ ಇತಿಹಾಸವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ನಾಟಕದಲ್ಲಿ ಎಸ್. ಓಂಕಾರೇಶ್ವರ, ವಸಂತಕುಮಾರ್, ಸಾಯಿಬಣ್ಣ ಸಂದೇಶ್ ಹಾಗೂ ಗುರುರಾಜರಾವ್ ಅಭಿನಯಿಸಿದರು.
ಕೊನೆಯಲ್ಲಿ ಪಿ. ರೇಖಾ ತಂಡದಿಂದ ಪ್ರದರ್ಶಿಸಲಾದ ‘ಶಿವನ ಆತ್ಮಲಿಂಗ’ ತೊಗಲುಗೊಂಬೆ ಆಟ ಜನಮನ ಸೆಳೆಯಿತು.
ಕಾರ್ಯಕ್ರಮದ ಬಳಿಕ ಅಭಿನಯ ಕಲಾ ಕೇಂದ್ರದ ಅಧ್ಯಕ್ಷ ಕೆ. ಜಗದೀಶ್ ಮಾತನಾಡಿ, ಸ್ಥಳಾವಕಾಶ ಕಲ್ಪಿಸಿದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಸೆಲ್ವಮಣಿ ಹಾಗೂ ಸಹಕರಿಸಿದ ಸ್ಥಳೀಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

“ಎಂಜಿನಿಯರಿಂಗ್ ಕಾಲೇಜು ರಸಾಯನಶಾಸ್ತ್ರ ಶಿಕ್ಷಣ: ಶಿಕ್ಷಕರನ್ನು ಸಬಲೀಕರಣಗೊಳಿಸುವ ಕಾರ್ಯಕ್ರಮ

ಬಿಜೆಪಿ ಕೈಗೊಂಬೆಯಾಗಿರುವ ಸಿಬಿಐ, ಇಡಿ, ಐಟಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಳ್ಳಿ: ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ