17th May 2026

ಬಳ್ಳಾರಿ, ಮೇ.17: ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಆಲಾಪ್ ಸಂಗೀತ ಕಲಾಟ್ರಸ್ಟ್ ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ "ಸಾಂಸ್ಕೃತಿಕ ಕಲಾ ವೈಭವ" ಎನ್ನುವ ಕಾರ್ಯಕ್ರಮವನ್ನು ಬಳ್ಳಾರಿಯ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರ ಪಿ. ಗಾದೆಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇವತ್ತಿನ ದಿನಮಾನದಲ್ಲಿ ಕಲೆ,ಸಾಹಿತ್ಯ,ಸಂಸ್ಕೃತಿಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಅದಕ್ಕೆ ಕಾರಣ ಟಿವಿ ಮತ್ತು ಮೊಬೈಲ್ ಗಳ ಹಾವಳಿ ಆದರೂ ಕೂಡ ಈ ಕಾರ್ಯಕ್ರಮಕ್ಕೆ ಇಷ್ಟು ಜನ ಸೇರಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ತಿಳಿಸಿ ಆಲಾಪ್ ಸಂಗೀತ ಕಲಾಟ್ರಸ್ಟ್ ಹಾಗೂ ಕನ್ನಡ ಮತ್ತು ಇಲಾಖೆ ಅಡಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಧನ್ಯವಾದಗಳು ತಿಳಿಸಿದರು, ಮುಖ್ಯ ಅತಿಥಿಗಳಾಗಿ ಶಿವಲಿಂಗಪ್ಪ ಹಂದಿಹಾಳ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು,
ಬಿ.ಕುಬೇರಪ್ಪ,
ಲೇಖಕರು, ಅಧೀಕ್ಷಕರು ತಾರನಾಥ ಸರ್ಕಾರಿ ಆಯುರ್ವೇದ ಆಸ್ಪತ್ರೆ ಬಳ್ಳಾರಿ, ಡಾ. ಕೆ ಹನುಮಂತಪ್ಪ
ರಾಜ್ಯ ಗೌರವಾಧ್ಯಕ್ಷರು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಬೆಂಗಳೂರು ಸಿದ್ದರಾಮಕಲ್ಮಠ
ಮಾಜಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ, ಶ್ರೀಮತಿ ನೇತ್ರಾವತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ, ಮುದ್ದಟನೂರು ತಿಪ್ಪೇಸ್ವಾಮಿ ಕಾರ್ಯದರ್ಶಿಗಳು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಇನ್ನು ಮುಂತಾದವರು ಪಾಲ್ಗೊಂಡಿದ್ದರು. ಆಲಾಪ್ ಸಂಗೀತ ಕಲಾಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ರಮಣಪ್ಪ ಭಜಂತ್ರಿ ನವರು ವೇದಿಕೆ ಮೇಲಿರುವ ಗಣ್ಯರನ್ನು ಸ್ವಾಗತಿಸುತ್ತ ಸುಮಾರು ಹತ್ತು ವರ್ಷಗಳಿಂದ ನಮ್ಮ ಸಂಸ್ಥೆ ವತಿಯಿಂದ ಬಳ್ಳಾರಿ ನಗರವಲ್ಲದೇ ಅನೇಕ ಕಡೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದ್ದೇವೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ವೇದಿಕೆಯ ಕಾರ್ಯಕ್ರಮದ ನಂತರ ಸುಗಮ ಸಂಗೀತ-ಜಡೇಶ ಎಮ್ಮಿಗನೂರು
ಕಲಾತಂಡ, ಜಾನಪದ ನೃತ್ಯ-ಅಭಿನಯ ಮತ್ತು ತಂಡ
ತೊಗಲುಗೊಂಬೆ ಪ್ರದರ್ಶನ- ಶ್ರೀಮತಿ ಹುಲಿಗೆಮ್ಮ ಮತ್ತು ತಂಡ ಬಯಲಾಟ-ಭೀಮೇಶ್ ಸಿರಿಗೇರಿ ಇವರ ತಂಡದಿಂದ ಅದ್ಯುತವಾಗಿ ಸಾಂಸ್ಕೃತಿಕ ಕಾರ್ಯಕ್ರಗಳು ಮೂಡಿ ಬಂದವು.ಶ್ರೀ ಕೆ.ಜಿ. ಆಂಜನೇಯ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕೂಡ್ಲಿಗಿ ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

“ಎಂಜಿನಿಯರಿಂಗ್ ಕಾಲೇಜು ರಸಾಯನಶಾಸ್ತ್ರ ಶಿಕ್ಷಣ: ಶಿಕ್ಷಕರನ್ನು ಸಬಲೀಕರಣಗೊಳಿಸುವ ಕಾರ್ಯಕ್ರಮ

ಬಿಜೆಪಿ ಕೈಗೊಂಬೆಯಾಗಿರುವ ಸಿಬಿಐ, ಇಡಿ, ಐಟಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಳ್ಳಿ: ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ