17th May 2026

ಬಳ್ಳಾರಿ:ಮೇ,17- ಎನ್.ಡಿ.ಪಿ.ಎಸ್ ಪ್ರಕರಣಗಳ ಆರೋಪಿ ಡಿ.ದೌಲ ಅಲಿಯಾಸ್ ಎಸ್.ದೌಲನನ್ನು ಸೆರೆಮನೆಯಲ್ಲಿಡಲು ಆದೇಶಿಸಿದ ಆದೇಶಕ್ಕೆ ಸಲಹಾ ಸಮ್ಮತಿಯಿಂದ ಅನುಮೋದನೆ ದೊರೆತಿದೆಂದು ಎಸ್ಪಿ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಗರದ ರಾಣಿತೋಟದಡಿ. ದೌಲ ಅಲಿಯಾಸ್ ಎಸ್. ದೌಲಾ ಅಲಿಯಾಸ್ ಮೆಹಬೂಬ್ ದೌಲ (40) ಈತನು ಬಳ್ಳಾರಿ ಜಿಲ್ಲೆ ಒಳಗೊಂಡಂತೆ ರಾಜ್ಯದ್ಯಾಂತ ವಿವಿಧ ಜಿಲ್ಲೆಗಳಲ್ಲಿ ಮಾದಕ ಪದಾರ್ಥಗಳ ಸಂಗ್ರಹಣೆ, ಸಾಗಟ ಹಾಗೂ ಮಾರಟ ಕೆಲಸದಲ್ಲಿ ತೊಡಗಿಕೊಂಡಿದ್ದನು.
ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ನಿರಂತರವಾಗಿ ಈತನು ಮಾದಕ ದ್ರವ್ಯ ಸಾಗಣೆ ಮತ್ತು ಮಾರಟದಲ್ಲಿ ತೊಡಗುವ ಮೂಲಕ ಸಾಮಾಜದ ಸ್ವಾಸ್ಥ್ಯವನ್ನು ಹದಗಡೆಸುತ್ತಿದ್ದನು. ಅದಕ್ಕಾಗಿ ಸಮಾಜದ ಸ್ವಾಸ್ಥ್ಯ ಕಾಪಡುವ ಉದ್ದೇಶದಿಂದ ಕಾಯ್ದೆಯನ್ವಯ ಐಜಿಪಿ ಬಳ್ಳಾರಿರವರಿಗೆ ದೌಲನ ಬಂಧನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಐಜಿಪಿ ಹರ್ಷ ಅವರು . ದೌಲನನ್ನು ಒಂದು ವರ್ಷದವರೆಗೆ ಬಂಧನಲ್ಲಿರಿಸಲು ಆದೇಶಿಸಿದ್ದರು.
ಈ ಪ್ರಕರಣವು ಉಚ್ಚ ನ್ಯಾಯಾಲಯದ ನ್ಯಾಯಧೀಶರುಗಳನ್ನು ಒಳಗೊಂಡ ಸಲಹಾ ಸಮಿತಿ ಯಲ್ಲಿ ವಿಚಾರಣೆ ನಡೆದಿತ್ತು. ಎಸ್ಪಿ. ಡ. ಸುಮನ್ ಡಿ.ಪೆನ್ನೇಕರ್, ಹಾಗೂ ಟಿ.ಎಸ್ ಪಾಟೀಲ್, ಹಿರಿಯ ಕಾನೂನು ಸಲಹೆಗಾರರು ಸರ್ಕಾರದ ಪರವಾಗಿ ಸಮಿಯಲ್ಲಿ ವಾದಿಸಿದ್ದರು. ಸಮಿತಿಯ ದೌಲನನ್ನು 12.02.2027 ರ ವರೆಗೆ ಬಂಧನದಲ್ಲಿರಿಸಲು ಸಮ್ಮತಿಸಿದೆ. ಸಧ್ಯ ದೌಲ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿದ್ದಾನೆ.

ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾಗಿ ಚಲ್ಲಾ ಮಹೇಶ್ ಆಯ್ಕೆ ಡೀಸೆಲ್ ಬೆಲೆ ಏರಿಕೆ ವಿರುದ್ಧ ಲಾರಿ ಮಾಲೀಕರ ಹೋರಾಟಕ್ಕೆ ಭರವಸೆ ಲಾರಿ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಚಲ್ಲಾ ಮಹೇಶ್

ಜೀನ್ಸ್ ಪಾರ್ಕ್ ಭೂಸ್ವಾಧೀನದಲ್ಲಿ ರೈತರಿಗೆ ಅನ್ಯಾಯ: ಹೊನ್ನುರಸ್ವಾಮಿ ಕೆ.ಟಿ. ಆರೋಪ ನ್ಯಾಯಯುತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ