


11th June 2026
ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ ಬೈಲಹೊಂಗಲ ವಲಯ ಮೇಕಲ ಮರಡಿ ಕಾರ್ಯಕ್ಷೇತ್ರದ ಶ್ರೀ ಬನಶಂಕರಿ ಜ್ಞಾನವಿಕಾಸ ಕೇಂದ್ರದಲ್ಲಿ ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಎಸ್ ಡಿ ಎಂ ನಾರಾಯಣ ಹೃದಯಾಲಯ ಆಸ್ಪತ್ರೆ ಧಾರವಾಡ ಶ್ರೀ ಸಾಯಿ ದೀಪ ಕಣ್ಣಿನ ಆಸ್ಪತ್ರೆ ಶ್ರೀ ಆರ್ತೋ ಆಸ್ಪತ್ರೆ ಬೆಳಗಾವಿ ಈವರ ಸಹಯೋಗದಲ್ಲಿ ಉಚಿತ ಹೃದಯ ತಪಾಸಣೆ ,ಕಣ್ಣಿನ ತಪಾಸಣೆ ಮತ್ತು ಎಲಬು ಕೀಲು . ಬಿಪಿ ಶುಗರ್ ತಪಾಸಣೆ ಶಿಬಿರವನ್ನು ಶ್ರೀ ಮೂಗ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ನಿಂಗಪ್ಪ ಅರಿಕೇರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗೌಡಪ್ಪ ಯರಡಾಲ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಯ್ಯ ಹಿರೇಮಠ, ನಿಂಗಪ್ಪ ಕುರುಗುಂದ ಪಿ ಕೆ ಪಿ ಎಸ್ ಸದಸ್ಯರು, ತಾಲೂಕಿನ ಜ್ಞಾನವಿಕಾಸ ಸಮನ್ವೇಧಿಕಾರಿ ಶೈಲಾ , ಡಾ. ಪ್ರಕಾಶ್ ವೈದ್ಯರು, ಎಸ್ ಡಿ ಎಂ ನಾರಾಯಣ ಹೃದಯಾಲಯ ,ಧಾರವಾಡ, ಶ್ರೀ ಸಾಯಿ ದೀಪ ಕಣ್ಣಿನ ಅಸ್ಪತ್ರೆ ಬೆಳಗಾವಿ ,ಶ್ರೀ ಆರ್ತೋ ಆಸ್ಪತ್ರೆ ಬೆಳಗಾವಿ ಸಿಬ್ಬಂದಿಗಳು ಇವರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾದ ನಿಂಗಪ್ಪ ಅರಿಕೇರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡದಿರುವ ಕಾರ್ಯಗಳ ಬಗ್ಗೆ ಹಾಗೂ ಅದರ ಸದುಪಯೋಗ ಬಗ್ಗೆ, ಆರೋಗ್ಯ ತಪಾಸಣೆ ಶಿಬಿರಗಳು ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಬಡವರಿಗೆಂದೇ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುದರೊಂದಿಗೆ ಕುಟುಂಬ ನಿರ್ವಹಣೆಯನ್ನು ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ. ಹಾಗೂ ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ಕರ್ನಾಟಕದಾದ್ಯಂತ ವ್ಯಾಪಿಸಿದ್ದು ಅದೆಷ್ಟೋ ಕುಟುಂಗಳಿಗೆ ದಾರಿದೀಪವಾಗಿದೆ.ತಮ್ಮ ಅವಶ್ಯಕತೆಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಮಾತನಾಡಿ,ಧರ್ಮಸ್ಥಳ ಯೋಜನೆ ಕಾರ್ಯಕ್ರಮಗಳ ಬಗ್ಗೆ ಸಮುದಾಯ ಅಭಿವೃದ್ಧಿ ಮಾಶಾಸನ ವಾತ್ಸಲ್ಯ, ಸುಜ್ಞಾನಿಧಿ ಶಿಷ್ಯವೇತನ ಜಲಮಂಗಳ ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಬಗ್ಗೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 200 ಗ್ರಾಮದ ಜನರು ಬಂದು ಈ ಉಚಿತ ತಪಾಸಣೆಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಪರೀಕ್ಷೆ ಮತ್ತು ಕಣ್ಣಿನ ತಪಾಸಣೆ , ಬಿ ಪಿ ಶುಗರ್ ಮತ್ತು ಎಲಬು ಕೀಲು ತಪಾಸಣೆ ಮಾಡಿಸಲಾಯಿತು. ಜ್ಞಾನವಿಕಾಸ ಸಮನ್ವಯಾಧಿಕಾರಿ,ಶೈಲಾ ನಿರೂಪಿಸಿದರು. ಪದ್ಮ ಕಡಟ್ಟಿ ಸ್ವಾಗತಿಸಿದರು. ಪ್ರತಿನಿಧಿ ಶೀಲಾ ಕಡಟ್ಟಿ ವಂದಿಸಿದರು.,ಒಕ್ಕೂಟ ಅಧ್ಯಕ್ಷರು ,ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರು ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

6th June 2026
ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು
ಉದ್ಯೋಗಕ್ಕಾಗಿ ಅಲೆದಾಡಿ ಸಮಯ ವ್ಯರ್ಥ ಮಾಡದೇ, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಪಡೆದ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಹಾಗೂ ಹೊಸ ಆವಿಷ್ಕಾರಗಳತ್ತ ಗಮನಹರಿಸಬೇಕು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ವಾಹಿನಿಯ ಮುಖ್ಯ ಸಂಪಾದಕರಾದ ಅಜಿತ್ ಹನಮಕ್ಕನವರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಳಗಾವಿಯ ಉದ್ಯಮಬಾಗದಲ್ಲಿರುವ ಪ್ರಸಿದ್ಧ ತಾಂತ್ರಿಕ ಸಂಸ್ಥೆಯಾದ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್ (JCER) ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಘಟೀಕೋತ್ಸವ ಮತ್ತು ಪದವಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಉದ್ಯೋಗ ಆಕಾಂಕ್ಷಿಗಳಾಗಬೇಡಿ, ಉದ್ಯೋಗದಾತರಾಗಿ:"ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಯಂತಹ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ಪ್ರಸ್ತುತ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಸದಾ ಅಪ್ಡೇಟ್ ಮಾಡಿಕೊಳ್ಳುತ್ತಿರಬೇಕು. ಕೇವಲ ಪದವಿ ಪ್ರಮಾಣಪತ್ರಗಳನ್ನು ಕೈಯಲ್ಲಿ ಹಿಡಿದು ಉದ್ಯೋಗಕ್ಕಾಗಿ ಅಲೆಯುವ ಆಕಾಂಕ್ಷಿಗಳಾಗುವ ಬದಲು, ನೀವೇ ನಾಲ್ಕು ಜನರಿಗೆ ಕೆಲಸ ಕೊಡುವ ಉದ್ಯೋಗದಾತರಾಗಿ ಬೆಳೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು" ಎಂದು ಕಿವಿಮಾತು ಹೇಳಿದರು.
ಈ ಕಾಲೇಜಿನಲ್ಲಿ ಮದ್ಯಮ ವರ್ಗದ ಮಕ್ಕಳು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವುದು ಅತೀವ ಸಂತೋಷವಾಗಿದೆ. ಮನುಷ್ಯನಿಗೆ ಸಮಯ ಮುಖ್ಯ. ಸಮಯ ತಕ್ಕಂತೆ ನಾವು ಸಾಗಿದಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
ಪೋಷಕರ ಕನಸಿನಂತೆ ಯುವಕರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಕಾಲೇಜಿನಲ್ಲಿ ಪಡೆದ ಶಿಕ್ಷಣದೊಂದಿಗೆ ಜೀವನದಲ್ಲಿ ಸಿಗುವ ಪಾಠ ನಮ್ಮನ್ನು ಉನ್ನತ ಮಟ್ಟದಲ್ಲಿ ಬೆಳೆಸುತ್ತದೆ. ಪೋಷಕರು ಸಹ ಮಕ್ಕಳಿಗೆ ಒತ್ತಡ ಹೆರದೆ ಅವರ ಬುದ್ದಿವಂತಿಕೆ ತಕ್ಕಂತೆ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದರು.
ನಾವು ಎಷ್ಟೆ ಎತ್ತರಕ್ಕೆ ಬೆಳೆದರು ತವರೂರಿನ ಸಂಬಂಧಗಳಿಗೆ ಅಂಟಿಕೊಂಡು ಇರಬೇಕು. ಅಂದಾಗ ಮಾತ್ರ ಕಲಿಸಿದ ಗುರುಗಳಿಗೆ ಹಾಗೂ ಪೋಷಕರಿಗೆ ಹೆಮ್ಮೆಯ ಆಗಲಿದೆ ಎಂದರು.
ಹೆತ್ತವರ ಆಸೆ ಮತ್ತು ವೈಯಕ್ತಿಕ ಯಶಸ್ಸಿನ ಹಾದಿ: ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ಸ್ಮರಿಸಿದ ಅವರು, "ನಮ್ಮ ತಾಯಿಗೆ ನಾನು ಇಂಜಿನಿಯರ್ ಆಗಬೇಕೆಂಬ ಆಸೆ ಇತ್ತು, ಇತ್ತ ತಂದೆಗೆ ಮಗ ವೈದ್ಯನಾಗಬೇಕು ಎಂಬ ಕನಸಿತ್ತು. ಆದರೆ, ಆ ಎರಡೂ ಕ್ಷೇತ್ರಗಳ ಆಚೆಗೆ ನನ್ನ ಆಸಕ್ತಿ ಇದ್ದದ್ದು ಪತ್ರಿಕೋದ್ಯಮದಲ್ಲಿ. ಪೋಷಕರ ಸಾಂಪ್ರದಾಯಿಕ ನಿರೀಕ್ಷೆಗಳನ್ನು ಮೀರಿ ನನ್ನದೇ ಆದ ಸ್ವಂತ ಹಾದಿಯನ್ನು ಆಯ್ದುಕೊಂಡಿದ್ದರಿಂದಲೇ ಇಂದು ಮಾಧ್ಯಮ ರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು," ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪ್ರಸಾದ್ ರಾಂಪುರೆ ಅವರು ಮಾತನಾಡಿ, ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ತಾಂತ್ರಿಕ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನವೂ ಅತಿ ಮುಖ್ಯ ಎಂದರು.
ಬೃಹತ್ ವಾಗಿ ಬೆಳೆಯುತ್ತಿರುವ ಭಾರತಕ್ಕೆ ಯುವ ಇಂಜಿನಿಯರಿಂಗ್ ದಿಂದ ಹೊಸ ಸಂಶೋದನೆ ಅಗತ್ಯವಿದೆ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಅವಕಾಶ ಸಿಗುತ್ತದೆ. ಅದಕ್ಕೆ ಸಹನೆ ತಾಳ್ಮೆ , ಅಗತ್ಯ. ನಿರಂತರ ಪ್ರಯತ್ನ ದಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ. ಪ್ರಯತ್ನಗಳೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ನೀವು ಮುಂದೆ ಸಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಡಾ. ಎಸ್. ವಿ. ಗೊರಬಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ಸಾಧಿಸಿರುವ ಶೈಕ್ಷಣಿಕ ಪ್ರಗತಿಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಒಟ್ಟು 260 ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಭಾವನಾತ್ಮಕ ಕ್ಷಣಗಳು ಮತ್ತು ವಿದ್ಯಾರ್ಥಿಗಳ ಹರ್ಷ: ನಾಲ್ಕು ವರ್ಷಗಳ ಕಠಿಣ ಪರಿಶ್ರಮ ಮತ್ತು ಶೈಕ್ಷಣಿಕ ಸಾಧನೆಯ ಪ್ರತೀಕವಾಗಿ ಪದವಿ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದ ವಿದ್ಯಾರ್ಥಿಗಳ ಮುಖದಲ್ಲಿ ಅಪಾರ ಹೆಮ್ಮೆ ಮತ್ತು ಸಂತಸ ಎದ್ದು ಕಾಣುತ್ತಿತ್ತು. ತಮ್ಮ ಸಹಪಾಠಿಗಳೊಂದಿಗೆ ಗ್ರೂಪ್ ಫೋಟೋ ಹಾಗೂ ಸೆಲ್ಫಿಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಸಾಂಪ್ರದಾಯಿಕವಾಗಿ ಕ್ಯಾಪ್ಗಳನ್ನು ಗಾಳಿಯಲ್ಲಿ ತೂರಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದರು. ಮಕ್ಕಳ ಈ ಯಶಸ್ಸನ್ನು ಕಣ್ಣಾರೆ ಕಂಡು ಪೋಷಕರು ಕೂಡ ಭಾವುಕರಾಗಿ ಆನಂದಭಾಷ್ಪ ಸುರಿಸಿದರು.
ಸಮಾರಂಭದಲ್ಲಿ ಜೆಸಿಇಆರ್ನ ಪ್ರಾಚಾರ್ಯ ಮತ್ತು ನಿರ್ದೇಶಕರಾದ ಡಾ. ಎಸ್.ವ್ಹಿ. ಗೋರಬಾಳ , ಅಕಾಡೆಮಿಕ್ ಡೀನ್ ಡಾ. ವಿರೂಪಾಕ್ಷಿ ದಲಾಲ್, ಕಾರ್ಯಕ್ರಮದ ಸಂಯೋಜಕ ಪ್ರೊ. ಗೋವಿಂದ್ ಎಂ. ಆರ್., ಡಾ. ಪ್ರಕಾಶ ಸೋನವಾಲಕರ್, ನಿವೃತ್ತ ಕರ್ನಲ್ ಜಾನಿ ಹಾಗೂ ಡಾ. ಜ್ಯೋತಿ ಬಿ.ಆರ್, ಡಾ. ಪ್ರೀತಮ್ ದುಮಾಳೆ, ಪ್ರೊ. ತುಂಗೆಶ ನಾಯ್ಡು, ಪ್ರೊ . ಚೈತನ್ಯ ಜಂಬೋಟಕರ್, ಡಾ. ಕೆ ಬಿ. ಜಗದೀಶಗೌಡ, ಡಾ. ಪ್ರಸಾದ ಕುಲಕರ್ಣಿ, ಡಾ. ರಘು ಗುಣಗೋಳ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ ವರ್ಗ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿ
ನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

6th June 2026
ಬೆಳಗಾವಿ: ಇಲ್ಲಿನ ಉದ್ಯಮಬಾಗದಲ್ಲಿರುವ ಪ್ರಸಿದ್ಧ ತಾಂತ್ರಿಕ ಸಂಸ್ಥೆಯಾದ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್ (JCER) ಕಾಲೇಜಿನ ಘಟಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಸರ್ಟಿಫಿಕೇಟ್ ವಿತರಣೆ ಸಮಾರಂಭವನ್ನು ಜೂನ್ 06 ರ ಶನಿವಾರ ಆಯೋಜಿಸಲಾಗಿದೆ ಎಂದು ಜೆಸಿಇಆರ್ನ ಪ್ರಾಚಾರ್ಯ ಮತ್ತು ನಿರ್ದೇಶಕರಾದ ಡಾ. ಎಸ್.ವ್ಹಿ. ಗೋರಬಾಳ ಅವರು ತಿಳಿಸಿದರು.
ನಗರದ ಕಾಲೇಜು ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 06 ರಂದು ಬೆಳಗ್ಗೆ 10:00 ಗಂಟೆಗೆ ಈ ಪ್ರತಿಷ್ಠಿತ ಕಾರ್ಯಕ್ರಮವು ಆರಂಭವಾಗಲಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆದ ಡಾ. ಪ್ರಸಾದ್ ರಾಂಪುರೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ವಾಹಿನಿಯ ಮುಖ್ಯ ಸಂಪಾದಕರಾದ ಅಜಿತ್ ಹನಮಕ್ಕನವರ್ ಅವರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಈ ಕಾಲೇಜಿನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳು ಈಗಾಗಲೇ ಎನ್ಬಿಎ ಮಾನ್ಯತೆ ಪಡೆದುಕೊಂಡಿವೆ. ಪ್ರಸಕ್ತ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಿದ ಒಟ್ಟು 260 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಅಧಿಕೃತವಾಗಿ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಶನಿವಾರ ನಡೆಯಲಿರುವ ಈ ಘಟೀಕೋತ್ಸವ ಹಾಗೂ ಪದವಿ ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಾಂಶುಪಾಲರು ಕರೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಡಾ. ಪ್ರಕಾಶ ಸೋನವಾಲಕರ್, ನಿವೃತ್ತ ಕರ್ನಲ್ ಜಾನಿ ಹಾಗೂ ಡಾ. ಜ್ಯೋತಿ ಬಿ.ಆರ್ ಉಪಸ್ಥಿತರಿದ್ದರು.

8th June 2025
ಡಾ. ಟಿ. ತ್ಯಾಗರಾಜು ಅವರಿಗೆ "ಧ್ವನಿ ಕೊಟ್ಟ ಧಣಿ ಪ್ರಶಸ್ತಿ”
ಮೈಸೂರು- ಕನ್ನಡ ಕವಿ ರಕ್ತ ದಾನಿ ಅಭಿಯಂತರರು,
ಉಪಾಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮೈಸೂರು, ಅಧ್ಯಕ್ಷರು, ಕಲಾ ಸಂಗಮ ಮೈಸೂರು,
ಗಾಯಕ ಸಮಾಜ ಸೇವಕ, ಅಧ್ಯಕ್ಷರು, ಕನ್ನಡ ಭವನ
ಚುಟುಕು ಸಾಹಿತ್ಯ ಪರಿಷತ್ತು ಮೈಸೂರು, ಕರ್ನಾಟಕ
ರಾಜ್ಯ ಸಂಚಾಲಕರು ಗಡಿನಾಡು ಕಾಸರಗೋಡು..
ಮೈಸೂರಿನ ಡಾ. ಟಿ ತ್ಯಾಗರಾಜು ಇವರಿಗೆ ಆತ್ಮಶ್ರೀ
ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ವತಿಯಿಂದ 09-06-2025 ರಂದು
"ಧ್ವನಿ ಕೊಟ್ಟ ಧಣಿ ಪ್ರಶಸ್ತಿ" ಯನ್ನು ಅರಸು ಜಾಗೃತಿ ಟ್ರಸ್ಟ್ ಅಕಾಡೆಮಿ
ಮೈಸೂರುರವರು ನೀಡುತ್ತಿದ್ದು 'ಜನಮಿಡಿತ' ಬರಹಗಾರರಾದ ಇವರಿಗೆ
'ಜನಮಿಡಿತ' ಪತ್ರಿಕೆ ಬಳಗವು ಅಭಿನಂದನೆ ಕೋರುತ್ತದೆ.
-1749404993190.jpg)
8th June 2025
ಧಾರವಾಡ- ನಾಟ್ಯ ಸ್ಪೂರ್ತಿ ಆರ್ಟ್ ಮತ್ತು ಕಲ್ಚರ್ ಅಕಾಡೆಮಿ ಧಾರವಾಡ ಇವರು
ಕಳೆದ 15 ವರ್ಷಗಳಿಂದ ನಾಟ್ಯ ತರಬೇತಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿಯನ್ನ ಕೊಟ್ಟು ಸಂಸ್ಥೆಯನ್ನು ನಡೆಸುತ್ತಾ ಬಂದಿರುವ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದಾನಂದ ಸ್ ಬಂಗಣ್ಣವರ್ ಇದೇ ವರ್ಷ ರಾಜ್ಯಮಟ್ಟದ ಶ್ರೀ ಬಸವ ಶ್ರೀ ಸೇವಾ ರಾಜ್ಯಮಟ್ಟದ ಪ್ರಶಸ್ತಿ ಕಾರ್ಯಕ್ರಮವನ್ನು ರವಿವಾರ ದಿ.
15/06/2025 ರಂದು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮೊ. 9945752588 ಮೂಲಕ ಸಂಪರ್ಕಿಸಬಹುದು.