
30th July 2025
ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುವ ಏಕದಿನ ಕನ್ನಡ ಸಾಹಿತ್ಯ ಅಭಿಯಾನವಾದ, 'ಕನ್ನಡದ ನಡಿಗೆ ಶಾಲೆಯ ಕಡೆಗೆ" ಶೈಕ್ಷಣಿಕ ಶಿಬಿರದ 4ನೇ ಕಾರ್ಯಕ್ರಮವು 2025 ಆಗಸ್ಟ್ 2ರಂದು ಬೆಳಗ್ಗೆ 10ರಿಂದ ಎಡನೀರಿನ ಸ್ವಾಮೀಜೀಸ್ ಪ್ರೌಢಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಎಡನೀರು ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯರು ಉದ್ಘಾಟಿಸುವರು. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಪ್ರೊ. ಅನಂತ ಪದ್ಮನಾಭ ರಾವ್ ಸಭೆಯ ಅಧ್ಯಕ್ಷತೆ ವಹಿಸುವರು. ಎಡನೀರು ಸ್ವಾಮೀಜೀಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ, ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಪಿಟಿಎ ಅಧ್ಯಕ್ಷ ನಾರಾಯಣನ್ ಶುಭ ಹಾರೈಸುವರು. ಕಾರ್ಯಕ್ರಮದಲ್ಲಿ ಅಕ್ಷರ ಲೋಕದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರಾದ ರಾಜೇಂದ್ರ ಕಲ್ಲೂರಾಯರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ-2025 ಪ್ರದಾನ ನಡೆಯಲಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಭಾಗವಹಿಸುವರು. ಸಂಘಟನೆಯ ಸ್ಥಾಪಕ ಸಂಚಾಲಕರಾದ ಡಾ ಕೆ ವಾಮನ್ ರಾವ್ ಬೇಕಲ್ ಹಾಗೂ ಸಂಘಟನೆಯ ಜಿಲ್ಲಾ ಖಜಾಂಜಿ ಸಂಧ್ಯಾರಾಣಿ ಟೀಚರ್ ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೆಂಕಟಕೃಷ್ಣ, ಸಂಘಟನೆಯ ಉಪಾಧ್ಯಕ್ಷ ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು, ಸಂಘಟನಾ ಕಾರ್ಯದರ್ಶಿ ಶಾರದಾ ಮೊಳೆಯಾರ್ ಎಡನೀರು, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಮೊದಲಾದವರು ಸಹಕರಿಸುವರು.
30th July 2025
ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯದ (ಐಸಿಪಿಎಸ್) ಬಾಲಕರ ಬಾಲಮಂದಿರ ಹಾಗೂ ಯಶೋದರಮ್ಮ ದಾಸಪ್ಪ ರಾಜ್ಯ ಮಹಿಳಾ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಳಗಾವಿ ಪ್ರವಾಸಿ ತಾಣಗಳು
ಬಾಲಕರ ಬಾಲ ಮಂದಿರದಲ್ಲಿ ವಿವಿಧ ರಾಜ್ಯಗಳಿಂದ 110 ಮಕ್ಕಳಿದ್ದು ಇಲಾಖೆ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿದರು. ಮಹಿಳಾ ನಿಲಯ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೂ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ, ಇಲಾಖೆಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
* *ಚಿಣ್ಣರನ್ನು ಮುದ್ದಾಡಿದ ಸಚಿವರು*
ಬಳಿಕ ಸರ್ಕಾರಿ ಶಿಶು ಮಂದಿರಕ್ಕೂ ಭೇಟಿ ನೀಡಿದ ಸಚಿವರು, ಶಿಶುಗಳ ಪಾಲನೆ, ಪೋಷಣೆ ಹಾಗೂ ಪುಟಾಣಿಗಳ ಆರೈಕೆ ಕುರಿತು ಪರಿಶೀಲನೆ ನಡೆಸಿದರು.
ಆರು ವರ್ಷದ ಒಳಗಿನ 46 ಮಕ್ಕಳು ಕೇಂದ್ರದಲ್ಲಿದ್ದಾರೆ. ಶಿಶುಗಳ ಉತ್ತಮ ಆರೈಕೆಯು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ಎಂದು ಸಚಿವರು ಹೇಳಿದರು.
ಮಕ್ಕಳ ಪಾಲನೆ ಮಾಡುತ್ತಿರುವ ಸಿಬ್ಬಂದಿ ವರ್ಗದವರ ಕಾರ್ಯವೈಖರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಚಿಣ್ಣರನ್ನು ಎತ್ತಿಕೊಂಡು ಮುದ್ದಾಡಿದರು.
ಈ ವೇಳೆ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಜಂಟಿ ನಿರ್ದೇಶಕರಾದ ಪುಷ್ಪ ರಾಯರ್, ಉಪ ನಿರ್ದೇಶಕರಾದ ಸುಮಂಗಲಾ ಮಳಾಪುರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
30th July 2025
ಬೆಂಗಳೂರು -03-08-2025 ರಂದು ವಿಶ್ವ ಕನ್ನಡ ಕಲಾ ಸಂಸ್ಥೆ. ಬೆಂಗಳೂರು ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ. ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದ ಡಾ.ರಾಜೇಂದ್ರ ಟಿ.ಎಲ್. ತಲ್ಲೂರು. ಇವರನ್ನು 2025 ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ. ಈ. ರವೀಶ್ ರವರು ತಿಳಿಸಿದ್ದಾರೆ ಇವರು ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ ಇವರು ಅನೇಕ ಕವಿಗೋಷ್ಠಿ ಉಪನ್ಯಾಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಕರ್ನಾಟಕ ನಕ್ಷತ್ರಗಳು ಪುಸ್ತಕದಲ್ಲಿ ಸಾಧಕರ ಸಂಕಲನದ ಪಟ್ಟಿಯಲ್ಲಿ ಇವರು ಕೂಡ ಗುರುತಿಸಿಕೊಂಡಿದ್ದಾರೆ. ಇವರು ಸದಾ ಕ್ರಿಯಶೀಲರಾಗಿದ್ದು ಇವರಿಗೆ ರಾಜ್ಯ. ರಾಷ್ಟ್ರ. ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಏಷಿಯನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಸಹ ಮಾಡಿದ್ದಾರೆ. ಇದರ ಜೊತೆಗೆ ಅನೇಕ ಸನ್ಮಾನಗಳು ಇವರನ್ನು ಅರಸಿ ಬಂದಿವೆ.
30th July 2025
ಬೈಲಹೊಂಗಲ- ಮತ ಕ್ಷೇತ್ರದ ಹಾರುಗೋಪ್ಪ ಗ್ರಾಮದ ಶ್ರೀ ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಲಾಯಿತು,
ಬುಧವಾರ ಹಾರುಗೋಪ್ಪ ಗ್ರಾಮದಲ್ಲಿ ಶ್ರೀ ಮಲ್ಲಯ್ಯ ಅಜ್ಜಾನ,ಸರಪಳಿ ಕಲ್ಲನೂ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು,
ಮೆರವಣಿಗೆ ಮುಂದೆ ಡೊಳ್ಳು ಹಾಗೂ ಭಜನಾ ಮಂಡಳಿ, ಹಾಗೂ ಹೆಣ್ಣು ಮಕ್ಕಳು ಆರುತಿ ಹಿಡಿದುಕೊಂಡು ಸಾಗಿದರು,
ಹಾಗೂ ಗ್ರಾಮದ ಶ್ರೀ ಮಲ್ಲಯ್ಯ ಅಜ್ಜ ದೇವರಿಗೆ ಬೆಳಿಗಿನ ಜವಾ ಮಹಾರುದ್ರಾ ಅಭಿಷೇಕ,ಮಾಡಲಾಯಿತು, ದೇವಸ್ಥಾನಕ್ಕೆ ಮಾವಿನ, ತೋರಣ, ಬಾಳೆ ಕಬ್ಬು,ಹಾಗೂ ಹೂವಿನ ಮಾಲೆ ಹಾಕಿ ಸಿoಗಾರ ಮಾಡಲಾಗಿತ್ತು,
ನಂತರ ಗ್ರಾಮದ ಶ್ರೀ ಮಲ್ಲಯ್ಯ ಅಜ್ಜಾರ ಪ್ರತಿ ವರ್ಷದ ಜಾತ್ರೆಯ ನಡೆಯುವ ಉದ್ದೇಶ ವಾಗಿ,ಗ್ರಾಮದಲ್ಲಿ ನಡೆಯುವ ಹಿರಿಯರ ಸಮ್ಮುಖದಲ್ಲಿ ಬಾಬದವರನ್ನು ಆಯ್ಕೆ ಮಾಡಲಾಯಿತು,
ಸರಪಳಿ ಕಟ್ಟೆಯ ಕಲ್ಲು ಪೂಜೆಯ ಕಾರ್ಯಕ್ರಮವನ್ನು ಪತ್ರ್ಯಯ್ಯ ಹಿರೇಮಠ ಸ್ವಾಮಿ ಗಳು ಪೂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಈ ಪೂಜೆ ಕಾರ್ಯಕ್ರಮದಲ್ಲಿ ಕರಿಬಸಯ್ಯ ಕಲ್ಮಠ ಭಾಗವಹಿಸಿದರು,
ಈ ಪೂಜೆ ಕಾರ್ಯಕ್ರಮದಲ್ಲಿ ಗ್ರಾಮದ ಮಲ್ಲಯ್ಯ ಅಜ್ಜಾನ ವಗ್ಗಯ್ಯಗಳು ಭಾಗವಹಿಸಿದರು,
ಗ್ರಾಮದ ಹಿರಿಯರು :- ಗೌಡಪ್ಪ ಪಾಟೀಲ,ಮಲ್ಲೇಶ ಮಲ್ಲೂರ, ಸಿ ಬಿ ಜಕನ್ನವರ, ಅಣ್ಣಪ್ಪ ದೇಶಾಯಿ, ಶಿವಾನಂದ ನಿಲ್ಲಪ್ಪನ್ನವರ, ಬಸನಗೌಡ ಪಾಟೀಲ, ಚಿದಾನಂದ ಪೂಜೇರಿ ರಾಚಯ್ಯ ಕಲ್ಲಯ್ಯನವರ,ನಾಗಪ್ಪ ಪೂಜೇರಿ ವೀರಭದ್ರ ತಳವಾರ, ನಾಗಪ್ಪ ನಾಯ್ಕರ,ಬಸವರಾಜ ದoಡಿನ, ಸಿದ್ದಪ್ಪ ಪೂಜೇರಿ, ರುದ್ರಗೌಡ ಪಾಟೀಲ,ಈರಪ್ಪ ಪೂಜೇರಿ,ಭೀಮಪ್ಪ ಕುರಿ, ದುoಡಪ್ಪ ಕಂಬಾರ, ಉದಪ್ಪ ಗೊಡಚಿ,ಹಾಗೂ ಸ್ವಸಹಾಯ ಸಂಘಗಳು ಶ್ರೀ ಮಹರ್ಷಿ ವಾಲ್ಮೀಕಿ ಗೆಳೆಯರ ಬಳಗ ಹಾಗೂ ಹಾರುಗೋಪ್ಪ ಗ್ರಾಮದ ಸಮಸ್ತ ಗುರು ಹಿರಿಯರು ಭಾಗವಹಿಸಿದರು, ನಂತರ ಶ್ರೀ ಮಲ್ಲಯ್ಯ ಅಜ್ಜನ ದೇವಸ್ಥಾನದಲ್ಲಿ ಮಹಾಪ್ರಸಾದ ನಡೆಸಲಾಯಿತು,
30th July 2025
ಬೆಳಗಾವಿ- ಹಿರಿಯ ಸಾಹಿತಿ ಶಿರಿಷ್ ಜೋಶಿ ಯವರ ಸಾಹಿತ್ಯ ಸೇವೆ ಬಹುಮುಖಿಯಾಗಿದ್ದು ರಂಗಭೂಮಿ ಚಲನಚಿತ್ರ, ಕ್ಷೇತ್ರ ದರ್ಶನ ಕಾದಂಬರಿಗಳು, ವ್ಯಕ್ತಿ ಚಿತ್ರಣಗಳು, ನಾಡು ನುಡಿ ಕುರಿತಾದ ಗ್ರಂಥಗಳು ವಿಶೇಷವಾಗಿ ಕರ್ನಾಟಕದ ಏಳು ಜನ ಸಂಗೀತ ಲೋಕದ ದಿಗ್ಗಜರ ಕುರಿತಾದ ಮಾಹಿತಿ ಪೂರ್ವಕ ಕೃತಿಗಳು ನಿಜಕ್ಕೂ ಅವರ ಅಧ್ಯಯನ ಶೀಲತೆ ಮತ್ತು ಸಾಹಿತ್ಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸೋಮವಾರ ದಿ. 28ರಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ 'ನುಡಿ ತೇರಿಗೆ ನೂರೊಂದು ನಮನ 'ಸರಣಿ ಕಾರ್ಯಕ್ರಮ ಮಾಲಿಕೆಯಲ್ಲಿ ಹಿರಿಯ ಸಾಹಿತಿಗಳಾದ 'ಶಿರಿಷ್ ಜೋಶಿ ಅವರ ಬದುಕು ಬರಹ' ಕುರಿತು ಹಿರಿಯ ಸಾಹಿತಿ ಡಾ ಗುರುದೇವಿ ಹುಲ್ಲೆಪ್ಪನವರಮಠ ರವರು ಮಾತನಾಡಿದರು.
ಬಶೀರಿಷ್ ಜೋಶಿ ಅವರ ಪ್ರತಿ ಕೃತಿಗಳು ಆಳವಾಗಿ ಅಧ್ಯಯನ ಮಾಡಿ ಸಂಶೋಧನಾತ್ಮಕ ರೀತಿಯಲ್ಲಿ ಅವನ್ನು ಅರಿತು ರಚಿಸಿದಂತವುಗಳಾಗಿವೆ.ಅವರ ನಡೆ ನುಡಿ,ಆದರ್ಶ ಎಲ್ಲರ ಕುರಿತಾದ ಗೌರವ ನಿಜಕ್ಕೂ ಅನುಕರನಣೀಯ. ಅವರ ವಿಶೇಷ ಕಲೆ ನಿರ್ದೇಶನ. ಅವರ ನಿರ್ದೇಶನದಲ್ಲಿ ಮೂಡಿಬಂದ ಅನೇಕ ನಾಟಕಗಳು ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಅವರು ಬರೆದ ಸಂಭಾಷಣೆಯಲ್ಲಿ ಮೂಡಿ ಬಂದ ಇಂಗಳೇಮಾರ್ಗ,ಸಾವಿತ್ರಿಬಾಯಿ ಪುಲೆ 1947 ಜುಲೈ 22 ಚಲನಚಿತ್ರಗಳು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿವೆ. ಅವರಿಂದ ಭಾಷಾಂತರವಾದ ಅನೇಕ ಕೃತಿಗಳು ಮೂಲ ಕೃತಿಯನ್ನೇ ಹೋಲುವಂತಹ ಉತ್ಕೃಷ್ಟತೆ ಹೊಂದಿವೆ. ಸೂಕ್ಷ್ಮ ಗುಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕುತೂಹಲ ಕೆರಳಿಸುವ ಅವರ ಕಾದಂಬರಿ ರಚನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ ಅಂತಹ ಮಹಾನ್ ಕೃತಿಗಳ ಅಧ್ಯಯನ ಈಗಿನ ಯುವ ಜನತೆ ಮಾಡಿದ್ದೇ ಆದರೆ ಯುವ ಜನರು ಸಹ ಈ ಸಾಹಿತ್ಯ ಅಭಿರುಚಿ ಯನ್ನು ಬೆಳೆಸಿಕೊಳ್ಳಬಹುದು.ಆ ನಿಟ್ಟಿನಲ್ಲಿ ಈ ದಿನ ಇಟ್ಟಿರುವ ಅವರ ಬದುಕು ಗುರಿತಾದ ಮೆಲಕು ಹಾಕುವ ಕಾರ್ಯಕ್ರಮ ನಿಜಕ್ಕೂ ಅವರ ಸಾಹಿತ್ಯ ಸೇವೆಗೆ ನಾವು ಕೊಟ್ಟಿರುವ ಗೌರವ ಎನ್ನಬಹುದು ಎಂದು ಅವರ ಬದುಕು ಬರಹವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಪಿ. ಬಿ. ಸ್ವಾಮಿ ಜೋಶಿಯವರ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್ ಇಂಚಲ್ ರವರು ಜೋಶಿಯವರ ಸಮಗ್ರ ಕೃತಿಗಳು ಅತ್ಯಂತ ಗುಣಮಟ್ಟ ಹೊಂದಿದವುಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ,ಪಿ ಜಿ ಕೆಂಪಣ್ಣವರ, ಎ. ಎ. ಸನದಿ, ಸುಭಾಷ ಏಣಗಿ, ಅರವಿಂದ ಹುನಗುಂದ,ಜ್ಯೋತಿ ಬದಾಮಿ, ಎಲ್ಎಸ್ ಶಾಸ್ತ್ರಿ ಮಧುಕರ ಗುಂಡೇನಟ್ಟಿ, ಶಾರದಾ ಭೋಜ, ಅನಂತ ಪಪ್ಪು, ಶ್ವೇತಾ ನರಗುಂದ, ಶೈಲಜಾ ಬಿಂಗೆ, ಭಾಗ್ಯಶ್ರೀ ಕುಲಕರ್ಣಿ, ಡಾ ಜಯಂತ ಕಿತ್ತೂರ,ಎಸ್. ಬಿ. ದಳವಾಯಿ,ಶ್ರೀನಿವಾಸ ಪಂಡಿತ, ಎಸ್. ಆರ್, ಕ್ಷಿರಸಾಗರ, ಇಂದಿರಾ ಮೂಟೆಬೆನ್ನೂರು, ಎ. ಆರ್. ಕುಲಕರ್ಣಿ, ಶ್ರೀರಂಗ ಜೋಶಿ ಬಿ ಬಿ ಮಠಪತಿ, ಎಂ. ಬಿ. ಮರಲಕ್ಕನವರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಆರ್. ಬಿ. ಬನಶಂಕರಿ ಪರಿಚಯಿಸಿದರು. ಡಾ.ಹೇಮಾವತಿ ಸೋನೋಳ್ಳಿ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು
30th July 2025
ಬೈಲಹೊಂಗಲ: ಸಮಾಜದಲ್ಲಿ ನಡೆಯುವ ಮೂಡನಂಬಿಕೆ, ಬಹುದೇವಪಾಸನೆ, ಡಾಂಬಿಕತೆ, ಹುಸಿ ಗುರು ಶಿಷ್ಯರ, ವೇಶದಾರಿಗಳ, ಅತ್ಯಾಚಾರ ಅನಾಚಾರಿಗಳ ಬಗ್ಗೆ ನೇರ ದಿಟ್ಟ ನಿಷ್ಠೂರವಾಗಿ ವಚನಗಳ ಮೂಲಕ ಖಂಡಿಸಿ ಅಖಂಡ ಸಮಾಜ ನಿರ್ಮಾಣದ ನಿಲುವು ಹೊಂದಿದ ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸರ್ವಕಾಲಿಕ ಸತ್ಯದ ಮೌಲ್ಯಗಳನ್ನು ನೀಡಿದ್ದಾರೆ. ಎಂದು ಚಿಕ್ಕೊಪ್ಪದ ಬಸವಾನುಭವ ಮಂಟಪದ ನಿರ್ಮಾರ್ಥ ಚೆನ್ನಪ್ಪ ನರಸನ್ನವರ್ ನುಡಿದರು.
ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ಯ ಪತ್ರಿ ಬಸವನಗರ ಅಭಿವೃದ್ಧಿ ಸಂಘ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಜಾಗತಿಕ ಲಿಂಗಾಯತ ಮಹಾಸಭಾ ಹಿರಿಯ ನಾಗರಿಕರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಪ್ರವಚನ, ಶ್ರಾವಣ ಮೊದಲು ಸೋಮವಾರ, 32ನೇ ಮಾಸಿಕ ಅನುಭಾವ ಗೋಷ್ಠಿ ಹಾಗೂ ಚೌಡಯ್ಯನವರ ನಾಮಕರಣೋತ್ಸವ ವಿಶೇಷ ಕಾರ್ಯಕ್ರಮದ ವಚನ ಚಿಂತಕರಾಗಿ ಆಗಮಿಸಿದ ಚೆನ್ನಪ್ಪ ನರಸನ್ನವರ್ ಅಂಬಿಗರ ಚೌಡಯ್ಯನವರ ವಚನಗಳಲ್ಲಿಯ ನೇರ ದಿಟ್ಟ ನಿಷ್ಟೂರದ ನುಡಿಗಳು ಸುಂದರ ಸಮಾಜದ ನಿರ್ಮಾಣದ ದಾರಿದೀಪವಾಗಿವೆ ಎಂದರು.
ನಗರದ ಶಾಂತಮ್ಮ ಬಸಪ್ಪ ಗೋಣಿ ದಂಪತಿಗಳು ತೊಟ್ಟಿಲೋತ್ಸವ ಕಾರ್ಯಕ್ರಮ ನೆರವೇರಿಸಿದರು. ಪ್ರೇಮಕ್ಕ ಅಂಗಡಿ ಪ್ರವಚನ ನುಡಿದರು. ಪತ್ರಯ್ಯ ಕುಲಕರ್ಣಿ ವಚನ ಗಾಯನ ಮಾಡಿದರು. ಗಿರಿಜಕ್ಕ ಪಾಟೀಲ್ ಶಕುಂತಲಾ ನರಸನ್ನವರ್ ಗೀತಾದೇವಿ ಬೇವಿನ ಗೀತಾ ಆರಳಿಕಟ್ಟಿ ಸುವರ್ಣ ಬಿಜುಗುಪ್ಪಿ ದುಂಡಯ್ಯ ಕುಲಕರ್ಣಿ ವೀರಣ್ಣ ಹವಳಪ್ಪನವರ ಸಂತೋಷ್ ಕೊಳವಿ ಗಂಗಣ್ಣ ಅಂಗಡಿ ಗೌರದೇವಿ ತಾಳಿಕೋಟಿ ಮಠ ಅನ್ನಪೂರ್ಣ ಕನೋಜ್ ಮಹಾದೇವಿ ಗಣಾಚಾರಿ ಪಾರ್ವತಿ ಎತ್ತಿನಗುಡ್ಡ ಚಿಕ್ಕೊಪ್ಪ ಅಕ್ಕನಾಗ ಲಾಂಬಿಕಾ ಅಕ್ಕನ ಬಳಗ ಸರ್ವ ಸಂಘಟನೆಗಳ ಸದಸ್ಯರು ಹಾಗೂ ನಗರದ ಹಿರಿಯರು ನೂರಾರು ಭಕ್ತರು ಉಪಸ್ಥಿತರಿದ್ದರು.
ಮುಕ್ತಾಯಕ್ಕ ಬಳಗ ಪ್ರಾರ್ಥಿಸಿತು. ವೀರಭದ್ರ ಕಾಪಸೆ ಸ್ವಾಗತಿಸಿದರು. ಅಶೋಕ ಸಾಲಿ ವಂದಿಸಿದರು ಕಾಡಪ್ಪ ರಾಮಗುಂಡಿ ನಿರೂಪಿಸಿದರು
29th July 2025
ಬಳ್ಳಾರಿ,-: ನಗರದ ರಾಜ್ ಕುಮಾರ್ ರಸ್ತೆಯಲ್ಲಿ ಬರುವ ಸಾಂಸ್ಕೃತಿಕ ಸಮುಚ್ಚಯ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವನ್ನು ಜಿಲ್ಲಾಧ್ಯಕ್ಷ ಎನ್. ಕ್ರಿಷ್ಣ ಮೋಹನ್ ಶೆಟ್ಟಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸಮಾರಂಭವನ್ನು ಜಿ.ಕೆ.ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ ಹಾಗೂ ತುಂಗಭದ್ರ ರೈತ ಸಂಘದ ಅಧ್ಯಕ್ಷರಾದ ದರೂರು ಪುರುಷೋತ್ತಮ ಗೌಡ ಅವರು ಉದ್ಘಾಟಿಸಿದರು.
ನಂತರ ಉದ್ಘಾಟಿಸಿ ಮಾತನಾಡಿದ ಜಿ.ಕೆ ಸ್ವಾಮಿ ಅವರು ನಾನು ಒಂದು ಜಿ.ಕೆ.ಫೌಂಡೇಶನ್ ಸ್ಥಾಪಿಸಿರುವ ಉದ್ದೇಶ, ಮಕ್ಕಳ ವಿದ್ಯಾಭ್ಯಾಸದ ಹಾದಿ ಹಿಡಿದು ಬಡವರಿಗೆ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಹಾಯ ಸಹಕಾರ ಮಾಡಲು ಸಾಗುತ್ತಿದೆ, ಅದಕ್ಕಾಗಿ ನಮ್ಮ ಜಿ.ಕೆ
ಫೌಂಡೇಶನ್ ಕಡೆಯಿಂದ ಮಕ್ಕಳ ಸಾಹಿತ್ಯ ಪರಿಷತ್ತಿಗೆ ಮತ್ತು ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಹಾಯ ಸಹಕಾರ ಬೇಕಾದರೂ ನಾವು ಸದಾ ಬೆಂಬಲವಾಗಿ ಇರುತ್ತೇನೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಕ್ರಿಷ್ಣ ಮೋಹನ್ ಶೆಟ್ಟಿ ಮಾತನಾಡಿ ನಾನು ಮಕ್ಕಳಿಗೆ ಏನಾದರೂ ಒಂದು ಸಹಾಯ ಮಾಡಬೇಕೆಂಬ ಛಲದಿಂದ ಇಂದು ಚಲನ ಚಿತ್ರ ಸಿನಿಮಾ ನಿರ್ದೇಶನದ ಜೊತೆಗೆ ಶಾಲಾ ಮಕ್ಕಳಿಗೆ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದುಡಿಯೋದಕ್ಕೆ ರಾಜ್ಯಾಧ್ಯಕ್ಷರಾದ ಸಿ.ಎನ್.ಅಶೋಕ್ ಅವರ ನೇತೃತ್ವದಲ್ಲಿ ನಾನು ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಘಟಕವನ್ನು ಪ್ರಾರಂಭಿಸಲು ಮುಂದಾಗಿರುವೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯನಗರ ಜಿಲ್ಲಾದ್ಯಕ್ಷರು ಹಾಗೂ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀವೆಂಕಟೇಶ್ ಬಡಿಗೇರ್ ಅವರು ಮಾತನಾಡಿ ಮಕ್ಕಳಲ್ಲಿ ಮೌಲ್ಯ ಶಿಕ್ಷಣ ಜೊತೆಗೆ ಕನ್ನಡದ ಅಕ್ಷರದ ಬೀಜವ ಬಿತ್ತುವುದರ ಮೂಲಕ ಮೊಳಕೆ ಒಡೆದು ಭಾಷೆ ಹೆಮ್ಮರವಾಗಬೇಕಾಗಿದೆ ಎಂದು ಹೇಳುತ್ತಾ ಕೇವರು ಶೂಕಿ ಮಾಡೋದಕ್ಕೆ ಸಂಘಟನೆ ಸಂಸ್ಥೆಗಳನ್ನು ಮಾಡುತ್ತಾ ಹುದ್ದೆಯನ್ನು ಪಡಿತಾರೆ , ಆದರೆ ನಮ್ಮ ಬಳ್ಳಾರಿ ಕ್ರಿಷ್ಣ ಮೋಹನ್ ಶೆಟ್ಟಿ ಅವರು ಸಮಾಜಕ್ಕಾಗಿ ದುಡಿಯಲಿಕ್ಕೆ ಬಂದಿದ್ದಾರೆ, ಇದೇ ಹುಮ್ಮಸ್ಸು ಉತ್ಸಾಹ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆಗಳ ಅಭಿವೃದ್ಧಿಗಾಗಿ ಮುಂದುವರಿಯಲಿ ಅವರು ನಮ್ಮ ಎಲ್ಲಾ ಜಿಲ್ಲಾ ಅಧ್ಯಕ್ಷರು ಬೆಂಬಲ ಇರುತ್ತದೆ ಎಂದು ತಿಳಿಸಿದರು. ಅಲ್ಲದೆ ಮಕ್ಕಳಿಗೆ ಏನಾದರೂ ಒಂದು ವಿಷಯಗಳನ್ನು ತಿಳಿಸಬೇಕಾದರೆ ನಾವು ಅವರಂತೆ ಮಗುವಾಗಿ ಅವರ ಮನೋಭಾವನೆಯನ್ನು ಗಮನಿಸಿ ತಿಳಿಸಿದಾಗ ಮಾತ್ರ ನಮ್ಮ ಕಡೆ ಗಮನ ಕೊಡುತ್ತಾರೆ. ನಾವು ತಿಳಿಸುವ ಒಳ್ಳೆ ಒಳ್ಳೆ ವಿಷಯಗಳನ್ನ ಮಕ್ಕಳು ಕಲಿಲಿಕ್ಕೆ ಸಾಧ್ಯ ಆಗುತ್ತೆ ಎಂದು ತಿಳಿಸಿದರು. ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ನಾಡು, ನುಡಿ, ಜಲ ಭಾಷೆ ಕನ್ನಡ ಉಳಿಸುವ ಪ್ರಯತ್ನವನ್ನು ನಾವು ನೀವೆಲ್ಲರೂ ಮಾಡೋಣ ಎಂದು ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ತಿಳಿಸಿ ಶುಭ ಹಾರೈಸಿದರು.
ನಂತರ ಸಾಹಿತ್ಯ ಪರಿಷತ್ ವತಿಯಿಂದ ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಮೆಡಲ್ ಗಳನ್ನು ಹಾಗೂ ಪೆನ್ನು ಮತ್ತು ನೋಟ್ ಪುಸ್ತಕ ಗಳನ್ನು ವಿತರಿಸನ್ಮಾನಿಸಿದರು.
ಕೊನೆಯಲ್ಲಿ ವೇದಿಕೆಯ ಮೇಲೆ 1ನೆ ತರಗತಿ ವಿದ್ಯಾರ್ಥಿನಿ ನಕ್ಷತ್ರ ಎಂಬ ಪುಟ್ಟ ಮಗು ಭರತ ನಾಟ್ಯವನ್ನು ಪ್ರದರ್ಶಿಸಿದರು. ಮತ್ತು ಕೊರಲಗುಂದಿ ಗ್ರಾಮದ ವಿದ್ಯಾರ್ಥಿ ಹಿಮಬಿಂದೂ ಹಾಗೂ ಸಾಯಿ ಸಗಾನ್ ಅವರು ಘಾಂದಾರಿ ಕಲೆಯನ್ನು ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿ ರಾಜ್ಯಾಧ್ಯಕ್ಷ ಡಾ.ಯು.ಉರುಕುಂದ ರೆಡ್ಡಿ, ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಶೇಖರ್, ಕನ್ನಡ ಕ್ರಾಂತಿ ದಳದ ಅಧ್ಯಕ್ಷರಾದ ದರೂರು ಶಾಂತನ ಗೌಡ, ಮಕ್ಕಳ ಸಾಹಿತ್ಯ ಪರಿಷತ್ ಹಾವೇರಿ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಈಡಿಗರ, ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎಸ್.ವೀರನ ಗೌಡ, ಶ್ರೀ ಮಹದೇವ ಎಜುಕೇಶನಲ್ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ಗೌರವಾಧ್ಯಕ್ಷ ಬಿಸಿಲಹಳ್ಳಿ ಬಸವರಾಜ್, ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ ಎಂ.ಜಿ.ಕನಕ, ಡಿ.ಎಸ್ಎಸ್ ಮಹಿಳಾ ಅಧ್ಯಕ್ಷೆ ಎಂ.ಶಾಂತಾ, ಪದ್ಮ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಅಧ್ಯಕ್ಷರಾದ ಡಾ.ಎಂ.ಧರ್ಮನ ಗೌಡ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಮಂಜುನಾಥ ಮಾಡ್ಲಿಗೇರಿ, ಬಳ್ಳಾರಿ ಜಿಲ್ಲಾ ಗೌರವಾದ್ಯಕ್ಷ ಉಪ್ಪಾರ ಮಲ್ಲಪ್ಪ, ಜಿಲ್ಲಾ ಉಪಾಧ್ಯಕ್ಷ ಕುಂದಾಪುರ ನಾಗರಾಜ, ಆಪ್ತ ಮಿತ್ರ ಭಾಷಾ, ಸುಮಾ ರೆಡ್ಡಿ, ಹೇಮಂತ್ ರಾಜ್, ಕೆ. ಪಾಂಡುರಂಗ, ಪಿ.ನಾಗೇಂದ್ರ, ಕುರುಗೋಡು ತಾಲೂಕು ಅಧ್ಯಕ್ಷ ಶಾಷಾವಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
28th July 2025
ನೇಸರಗಿ- ಸಮೀಪದ ನಾಗನೂರು ಕ್ರಾಸ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಬೆಳಗಾವಿ ಡಯಟ್ ನ ಶ್ರೀಮತಿ ಬಿ.ಬಿ.ದಾಸೋಗ ಬೇಟಿ ನೀಡಿ ಶಾಲೆಯ ಸಮಸ್ಯೆ ಕುರಿತು ಪರಿಶೀಲಿಸಿದರು.
ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಿದರು.
ಬಿಆರ್ ಪಿ ಎಸ್.ಎಸ್ ಶಿವನಾಯ್ಕರ, ಸಿಆರ್ ಪಿಗಳಾದ ಎ.ಡಿ.ಮರೆನ್ನವರ ಇದ್ದರು.
28th July 2025
ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತಂತೆ ಕ್ಷೇತ್ರದ ಶಾಸಕರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಸುದೀರ್ಘ ಚರ್ಚೆ ನಡೆಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ.ಕೆ, ನಿಲಜಿ, ದೇಸೂರ್, ಸಾಂಬ್ರಾ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರು, ವಿವಿಧ ದೇವಸ್ಥಾನಗಳ ಸಮಿತಿಯ ಸದಸ್ಯರು ಹಾಗೂ ವಾರ್ಕರಿ ಮಂಡಳಿಯವರ ಜೊತೆ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು.
ಆಯಾ ಗ್ರಾಮಗಳಲ್ಲಿ ಆಗಬೇಕಿರುವ ಕೆಲಸಗಳು, ಮುಂದಿನ ದಿನಗಳಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುಧೀರ್ಘ ಕಾಲ ಚರ್ಚೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲ ಮುಖಂಡರ, ದೇವಸ್ಥಾನಗಳ ಸಮಿತಿಯ ಸದಸ್ಯರ, ವಾರ್ಕರಿ ಮಂಡಳಿಯವರ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿದ ಸಚಿವರು, ಯಾವುದೇ ರಾತಿಯ ರಾಜಕಾರಣ, ಭೇದ ಭಾವವಿಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿರುವೆ. ಸಣ್ಣ ಸಮಸ್ಯೆ ಇದ್ದರೂ ತಕ್ಷಣ ಸ್ಪಂದಿಸುತ್ತಿದ್ದೇನೆ. ಕ್ಷೇತ್ರದ ಜನರ ಆಶಿರ್ವಾದ ನನ್ನ ಮೇಲಿರುವುದರಿಂದ ರಾಜ್ಯದ ಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಕೂಡ ನಿಮ್ಮ ಜೊತೆಗೆ, ನಿಮ್ಮ ಮನೆ ಮಗಳಾಗಿ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ ಹಾಗೂ ಕ್ಷೇತ್ರದ ಹಲವಾರು ಮುಖಂಡರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.
28th July 2025
ಕಾಸರಗೋಡು : ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ "ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ಪ್ರದಾನ ಉದ್ದೇಶ. ಕನ್ನಡ ಮನಸುಗಳು ಒಂದಾಗಬೇಕು. ಕನ್ನಡ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಬೆರೂರಿಸುವ ಪ್ರಯತ್ನಕ್ಕೆ, ಕವಿಗಳು, ಸಾಹಿತಿಗಳು, ಕಲಾವಿದರು, ಸಂಘಟಕರು ಒಂದಾಗಿ ಸೇರಿ ಚರ್ಚಿಸುವ ವೇದಿಕೆ ನಿರ್ಮಾಣವಾಗಬೇಕು. ಹೊಸ ಹೊಸ ಯೋಚನೆ -ಯೋಜನೆಗಳ ಮೂಲಕ ಒಟ್ಟಾಗಿ ಕನ್ನಡ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಪ್ರತಿಜ್ಞಾಬದ್ಧರಾಗಬೇಕು ಎಂದು ಕನ್ನಡ ಭವನ ಮತ್ತು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹೇಳಿದರು.
ಇವರು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ನಡೆದ "ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ದ್ವಿತೀಯ ಕಾರ್ಯಕ್ರಮ ದ. ಕ. ಜಿಲ್ಲಾ ಅಧ್ಯಕ್ಷರಾದ ಸಾಹಿತಿ ಡಾ. ಗೋವಿಂದ ಭಟ್ ಕೊಲಚಪ್ಪೆ ಇವರ ಮಂಗಳೂರಿನ ನಿವಾಸದಲ್ಲಿ 27.7.2025,ಭಾನುವಾರ ಅಪರಾಹ್ನ ನಡೆಯಿತು.
ಸಾಹಿತಿ ಪ್ರಕಾಶಕ ಕಲ್ಲಚ್ಚು ಮಹೇಶ್ ಆರ್ ನಾಯಕ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ, ಡಾ. ವಸಂತ್ ಕುಮಾರ್ ಪೆರ್ಲ, ಕಥಾಬಿಂದು ಪ್ರಕಾಶನದ ರೂವಾರಿ ಪಿ. ವಿ. ಪ್ರದೀಪ್ ಕುಮಾರ್, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆ, ಸಾಹಿತಿ ವೈದ್ಯ ಡಾ. ಸುರೇಶ್ ನೆಗಳಗುಳಿ ಸಮಾಯೋಚಿತವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಬಾಜನರಾದ ಶ್ರೀ ಬಿ. ಕೆ. ಮಾದವ ರಾವ್,"ಸೊಗಸು "ಪುಸ್ತಕ ಬಹುಮಾನಕ್ಕೆ ಭಾಜನರಾದ ಶ್ರೀ ಪಿ. ವಿ. ಪ್ರದೀಪ್ ಕುಮಾರ್ ಹಾಗೂ ಇತ್ತೀಚಿಗೆ ಆಕಾಶವಾಣಿ ಯಿಂದ ನಿವ್ರಿಟ್ಟಿ ಹೊಂದಿದ ಡೆಪ್ಯೂಟಿ ಡೈರೆಕ್ಟರ್ ಶ್ರೀ ಪಿ. ಸೂರ್ಯನಾರಾಯಣ್ ಭಟ್ ಇವರೀಗೆ ಪರಿಷತ್ತಿನ "ದಕ್ಷಿಣ ಕನ್ನಡ ಜಿಲ್ಲಾ ಸಾಧಕ ಶ್ರೀ ಪ್ರಶಸ್ತಿ 2025.ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಶ್ರೀಮತಿ ಬಿ. ಸತ್ಯವತಿ ಭಟ್ ಕೊಳಚಪ್ಪು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಂಗವಾಗಿ ಆಯೋಜಿಸಿದ್ದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ, ವೈದ್ಯ ಡಾ. ಸುರೇಶ್ ನೆಗಳಗುಳಿ ವಹಿಸಿದರು.ಕವಿಗೋಷ್ಠಿಯಲ್ಲಿ ಸತ್ಯವತಿ ಭಟ್ ಕೊಳಚಪ್ಪು, ಲಕ್ಷ್ಮೀ ವಿ. ಭಟ್, ಉಮೇಶ್ ಕಾರಂತ್, ಅಕೃತಿ ಭಟ್, ಅನಿತಾ ಶೆಣೈ, ಸೌಮ್ಯ ಅಂಗ್ರಾಜೆ, ಸುಲೋಚನಾ ನವೀನ್, ಪ್ರತಿಭಾ ಸಾಲಿಯಾನ್, ಮನ್ಸೂರ್ ಮೂಲ್ಕಿ, ಕಸ್ತೂರಿ ಜಯರಾಮ್, ಅಪೂರ್ವ ಕಾರಂತ್ ಪುತ್ತೂರು, ಡಾ. ಶಾಂತಾ ಪುತ್ತೂರು, ಜಯಾನಂದ ಪೆರಾಜೆ ಭಾಗವಹಿಸಿದರು. ಕವಿತೆ ವಾಚನ ಮಾಡಿದ ಕವಿಗಳಿಗೆ ಶಾಲು, ಸ್ಮರಣಿಕೆ, ಪುಸ್ತಕ, ಪ್ರಮಾಣಪತ್ರ ನೀಡಲಾಯಿತು.. ಅಧ್ಯಕ್ಷತೆ ವಹಿಸಿದ ಸಾಹಿತಿ, ಡಾ. ಸುರೇಶ್ ನೆಗಳಗುಳಿ ಯವರೀಗೆ ಕೇಂದ್ರ ಸಮಿತಿ ವತಿಯಿಂದ ಡಾ ವಾಮನ್ ರಾವ್ -ಸಂದ್ಯಾ ರಾಣಿ ದಂಪತಿ ವಿಶೇಷ ಗೌರವರ್ಪಣೆ ನೀಡಿ ಸನ್ಮಾನಿಸಿದರು.
ಶ್ರೀಮತಿ ಸುಲೋಚನಾ ನವೀನ್ ಪ್ರಾರ್ಥನೆ ಹಾಡಿದರು. ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಕು. ಅಪೂರ್ವ ಕಾರಂತ್ ಪುತ್ತೂರು ಮತ್ತು ಶೀಮತಿ ಕಸ್ತೂರಿ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಿದ್ಧ ಗಾಯಕಿ ಪ್ರತಿಭಾ ಸಾಲ್ಯಾನ್, ಅನಿತಾ ಶೆಣೈ, ಗ್ರೇಗೋರಿ ತಂಡ ಗಾಯನ ಮನರಂಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಇದೇ ವೇಳೆ ಮುಂದಿನ "ಮನೆ ಮನೆ ಕನ್ನಡ ಜಾಗೃತಿ ಅಭಿಯಾನ ಆಗಸ್ಟ್ 9ಕ್ಕೆ ಪರಿಷತ್ತು ಗೌರವ ಅಧ್ಯಕ್ಷೆ ಶ್ರಿಮತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಇವರ ನಿವಾಸದಲ್ಲಿ ಎಂದು ನಿಶ್ಚಯಿಸಲಾಯಿತು.