


23rd June 2026
ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು,ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣಕ್ಕಾಗಿ ವಿದ್ಯಾರ್ಥಿಗಳು ನೀಟ್-ಯುಜಿ (NEET-UG) ಮರುಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು (ಆರ್.ಸಿ. ಕಾಲೇಜು) ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ; ಇವರಲ್ಲಿ ಇಬ್ಬರು ಕಾಂಗ್ರೆಸ್ ಸಮಾವೇಶದಿಂದ ಉಂಟಾದ ಭಾರಿ ಟ್ರಾಫಿಕ್ ಜಾಮ್ನಿಂದಾಗಿ ಮಧ್ಯಾಹ್ನ 1:30 ರ ಗೇಟ್ ಕ್ಲೋಸಿಂಗ್ ಸಮಯ ಮುಗಿದ ನಂತರ ಪರೀಕ್ಷೆ ಕೇಂದ್ರ ತಲುಪಿದರು.
ಮುಂಚಿತವಾಗಿಯೇ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮಾಹಿತಿ ಇದ್ದರೂ, ಹಠಕ್ಕೆ ಬಿದ್ದಂತೆ ಅದ್ದೂರಿ ರ್ಯಾಲಿ ಆಯೋಜಿಸಿ ರಸ್ತೆಗಳನ್ನೆಲ್ಲಾ ಬಂದ್ ಮಾಡಿದ ಕಾಂಗ್ರೆಸ್ ನಾಯಕರು ಯುವಜನರ ಕನಸನ್ನು ನಡುರಸ್ತೆಯಲ್ಲೇ ಕರಗಿಸಿದ್ದಾರೆ. ಒಂದೆಡೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋಲ್ಕತ್ತಾದಿಂದ ದೆಹಲಿಗೆ ಬಂದಿಳಿದಾಗ ತಮ್ಮ ವಿವಿಐಪಿ (VVIP) ಭದ್ರತಾ ಕಾನ್ವಾಯ್ ಚಲನೆಯಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ದಟ್ಟಣೆ ಉಂಟಾಗಬಾರದು ಎಂದು ಮಧ್ಯಾಹ್ನ 1:15 ರಿಂದ ಪರೀಕ್ಷೆ ಆರಂಭವಾಗುವವರೆಗೂ ಬರೋಬ್ಬರಿ 45 ನಿಮಿಷಗಳ ಕಾಲ ವಿಮಾನ ನಿಲ್ದಾಣದ ಲಾಂಜ್ನಲ್ಲೇ ಕಾಯುವ ಮೂಲಕ ಯುವಶಕ್ತಿಯ ಮೇಲಿರುವ ನೈಜ ಕಾಳಜಿಯನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಆದರೆ ಮತ್ತೊಂದೆಡೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಪರೀಕ್ಷೆಗಳ ಬಗ್ಗೆ ಕಸರತ್ತಿನ ಮೊಸಳೆ ಕಣ್ಣೀರು ಸುರಿಸುತ್ತಾ, ಅಧಿಕಾರದ ಹಪಾಹಪಿಗೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಬಲಿಪೀಠಕ್ಕಿಟ್ಟಿದ್ದಾರೆ.
ಟ್ರಾಫಿಕ್ನಿಂದಾಗಿ ತಡವಾಗಿ ಬಂದ ವಿದ್ಯಾರ್ಥಿನಿಯರನ್ನು ಕರುಣೆಯಿಲ್ಲದೆ ಗೇಟ್ನಿಂದ ಹೊರಗಟ್ಟಿದಾಗ ಪೋಷಕರು ಅನುಭವಿಸಿದ ಯಾತನೆಗೆ ಈ ಸರ್ಕಾರವೇ ನೇರ ಹೊಣೆಯಾಗಿದೆ. ಈ ಬೇಜವಾಬ್ದಾರಿ ಸರ್ಕಾರ ತಕ್ಷಣವೇ ನೊಂದ ವಿದ್ಯಾರ್ಥಿ ಸಮೂಹದ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಅವರಿಗೆ ನ್ಯಾಯ ಒದಗಿಸಬೇಕು. ಅಧಿಕಾರದ ಮದದಲ್ಲಿ ಯುವಶಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ರಾಜ್ಯದ ಯುವಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಫ್.ಎಸ್.ಸಿದ್ದನಗೌಡರ ಎಚ್ಚರಿಸಿದ್ದಾರೆ.

23rd June 2026
ಬೆಳಗಾವಿ :
ಯೋಗವು ದೈಹಿಕ ಸಾಮರ್ಥ್ಯ, ಮಾಂಸಖAಡ ಮತ್ತು ಮೂಳೆಗಳದೃಢತೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕಾರಿ ಎಂದು ಶಾಲೆಯ ಮುಖ್ಯ ಶಿಕ್ಷಕ ಎನ್.ಎನ್ ಜೋಳದ ಮಾತನಾಡಿದರು. ಅವರು ಭಾನುವಾರ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ನೇ ವಿಶ್ವ ಯೋಗ ದಿನಾವರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಪ್ರತಿಯೊಬ್ಬರು ಸದೃಡವಾದ ಮನಸ್ಸು ನಿಂದ ಬೆಳ್ಳಗೆ ಯೋಗಾಭ್ಯಾಸ ಮಾಡಿದ್ದಲ್ಲಿ ಸದೃಡವಾದ ದೇಹ ತಮ್ಮದಾಗುವುದೆಂದರು. ಈ ಸಂದರ್ಭದಲ್ಲಿ ಎ ಶಾಲಾ ಹಿರಿಯ ಶಿಕ್ಷಕ ಬಿ.ಎಮ್.ಕಡೋಲಕರ ಮಾತನಾಡಿ, ವಿದ್ಯಾರ್ಥಿ ಹಂತದಿAದ ಬದುಕಿನ ಕೊನಯ ಹಂತದವರೆಗೂ ಯೋಗವನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಯೋಗದಿನದ ಆಚರಣೆಗೆ ಮಹತ್ವ ಬರುತ್ತದೆ ಎಂದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು, 7 ನೇ ವಿದ್ಯಾರ್ಥಿಗಳಿಂದ ಯೋಗದ ಮಹತ್ವ ಸಾರುವ ಗೀತೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.ಶಾಲೆಯ ಶಿಕ್ಷಕಿ ಶ್ರೀಮತಿ ವಿ.ಎನ್.ಯಲಿಗಾರ. ಶ್ರೀಮತಿ ಸುನಿತಾ ದಳವಾಯಿ. ಹಾಲಮ್ಮ ಹೆಚ್. ಮತ್ತು ಸರೋಜನಿ ಮಾಳವನ್ನವರ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಬಿ.ಎಮ್. ಕಡೋಲಕರ ಅವರÀ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ಶಾಲಾ ಆವರಣದಲ್ಲಿ ಶಾಲಾ ಮಕ್ಕಳು ಸಾಮುಹಿಕ ಸೂರ್ಯ ನಮಸ್ಕಾರ ಹಾಗೂ 30 ಕ್ಕು ಹೆಚ್ಚು ನಿಂತು,ಕುಳಿತು, ಬೇನಿನಮೇಲೆ, ಧ್ಯಾನ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡುವುದರ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಸರಳವಾಗಿ ಸಂಭ್ರಮದಿAದ ಆಚರಿಸಲಾಯಿತು.
ಫೋಟೋ ಶಿರ್ಷಕೆ :
ಹಣ್ಣಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರರ ವಿಶ್ವ ಯೋಗ ದಿನಾವರಣೆ ಅಂಗವಾಗಿ ಮಕ್ಕಳು ವಿವಿಧ ಯೋಗಾಸನಗಳನ್ನು ಮಾಡಿದರು.