
20th June 2025
ಸವದತ್ತಿ- ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ ರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ಮಹೇಶ ಗಾಜಪ್ಪನವರ ಇವರ ಮಾರ್ಗದರ್ಶನ ದಲ್ಲಿ ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ ವಿಷಯವಾಗಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ.
ಶಿಕ್ಷಕ ಸಾಹಿತಿಗಳಾದ ಇವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗಳಾಗಿ 40 ಕೃತಿಗಳನ್ನು ಪ್ರಕಟಿಸಿದ್ದು. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ ವಿಷಯದಲ್ಲಿ ಎಂ. ಫಿಲ್ ಕೂಡ ಮಾಡಿರುವುದು ವಿಶೇಷ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಮೆಟಗುಡ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿ ಇವರು ಶಿಕ್ಷಕರಾದ ವೈ ಬಿ ಕಡಕೋಳ ಇವರ ಸಾಧನೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಭಾಶಯ ತಿಳಿಸಿರುವರು.
ಮಾದರಿಯಾದ ಚಡಚಣದ ಶತಮಾನ (೧೮೦ ವರ್ಷ) ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಾತ್ಮಕ ಶಿಕ್ಷಣ ಸರಕಾರಿ ಶಾಲೆಗೆ ತೋರಣ.
ಗಂಡುಮೆಟ್ಟಿನ ನಾಡಿನಲ್ಲಿ ಜಾನಪದ ಕಲೆಯ ಜೊತೆಗೆ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ- ಎನ್.ಎಚ್ ಕೊನರಡ್ಡಿ