
3rd July 2025
ವಿಜಯನಗರ- ಹೊಸಪೇಟೆ ತಾಲೂಕು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದ ಶ್ರೀ ಸಂಗನಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಆಯೋಜಿಸಿದ ಶ್ರೀ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹೊಸಪೇಟೆ ವತಿಯಿಂದ ಮಕ್ಕಳಲ್ಲಿ ತಂಬಾಕು ಸೇವನೆ ಮಧ್ಯ ಸೇವನೆ ಹಾಗೂ ಗುಟ್ಕಾ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮಗಳ ಬಗ್ಗೆ ಕುರಿತು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸ್ಥಿತಿ ಮತ್ತು ಸದೃಢ ದೇಹ ಸದೃಢ ಮನಸ್ಸು ನಿರ್ಮಾಣ ಆಗಬೇಕಾಗಿದೆ ನಾಡು ನುಡಿ ಸಂಸ್ಕೃತಿ ಸಂಸ್ಕಾರರ ಮಕ್ಕಳಲ್ಲಿ ಅಭಿವೃದ್ಧಿಗೊಂಡು ಪ್ರಗತಿಪತದತ್ತ ಸಾಗಬೇಕೆಂದು ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ ಬಡಿಗೇರ್ ಕನ್ನಡ ಉಪನ್ಯಾಸಕರು ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ರವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕಿತ್ತೂರು ರಾಣಿ ಚೆನ್ನಮ್ಮ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಶ್ರೀಸಂಗಮ ಶನೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಗುರುಗಳು ಧರ್ಮಸ್ಥಳಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ವಾಹಕ ಶ್ರೀಮತಿ ಭಾಗ್ಯಮ್ಮ ಹಾಗೂ ಶಾಲೆಯ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು
ಮೀನುಗಾರರು ಸುರಕ್ಷಿತವಾಗಿ ಮರಳಲಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥನೆ* * *ನೀರು ಪಾಲಾದವರ ಹುಡುಕಾಟಕ್ಕೆ ಸಚಿವರ ಸೂಚನೆ*