

6th September 2025

"ಗುರು ಬ್ರಹ್ಮ, ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ.. ತಸ್ಮೈ ಶ್ರೀ ಗುರುವೇ ನಮಃ" ಗುರು ಎಂದರೆ ಶಿಕ್ಷಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸುತ್ತಾರೆ.
"ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು" ಮಕ್ಕಳಿಗೆ ಅಮ್ಮನೇ ಮೊದಲು ಗುರು ಮನೆಯಿಂದಲೇ ಪ್ರಥಮ ಪಾಠ ಪ್ರಾರಂಭವಾಗುತ್ತದೆ.
"ವರ್ಣ ಮಾತ್ರo ಕಲಿಸಿದಾತಂ ಗುರು" ಸೋಮನಾಥ ಕವಿ ಪ್ರಕಾರ ಯಾರಿಂದ ನಾವು ಒಂದು ಅಕ್ಷರವನ್ನು ಕಲಿಯುತ್ತಿವಿಯೋ ಅವನೇ ಗುರು. ಅವರು ವಿದ್ಯಯಲಿ ಮತ್ತು ವಯಸಿನಲ್ಲಿ ನಮಗಿಂತ ಚಿಕ್ಕವರು ಇರಬಹುದು ಅಥವಾ ದೊಡ್ಡವರು ಇರಬಹುದು.
ಶಿಕ್ಷಕ ಎಂದರೆ ಜ್ಞಾನ, ಕೌಶಲ್ಯ, ಮತ್ತು ಮೌಲ್ಯಗಳನ್ನು ಇತರರಿಗೆ ಕಲಿಸುವ ಅಥವಾ ಮಾರ್ಗದರ್ಶನ ನೀಡುವ ವ್ಯಕ್ತಿ. ಅವರು ಶಾಲೆಯಂತಹ ಔಪಚಾರಿಕ ಅಥವಾ ಕುಟುಂಬದಂತಹ ಅನೌಪಚಾರಿಕ ವ್ಯವಸ್ಥೆಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಬಹುದು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಜತೆಗೆ, ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಾಯ ಮಾಡುತ್ತಾರೆ.
ಶಿಕ್ಷಕರ ದಿನಾಚರಣೆಯು ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸಲ್ಪಡುತ್ತದೆ. ಈ ದಿನ ಭಾರತದ ಎರಡನೇ ರಾಷ್ಟ್ರಪತಿ, ಶ್ರೇಷ್ಠ ಶಿಕ್ಷಕ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888 ಜನ್ಮದಿನವಾ 5 ರಂದು ತಮಿಳುನಾಡಿನ ತಿರುತನಿ ಎಂಬಲ್ಲಿ ಜನಿಸುತ್ತಾರೆ. ಡಾ. ರಾಧಾಕೃಷ್ಣನ್ ಅವರು 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದಾಗ, ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ಕೇಳಿಕೊಂಡರು. ಅವರು ಆಡಂಬರದ ಆಚರಣೆಗೆ ಒಪ್ಪಲಿಲ್ಲ, ಆದರೆ ಆ ದಿನ ಶಿಕ್ಷಕರ ದಿನವಾದರೆ ನಾನು ಹೆಚ್ಚು ಸಂತೋಷವಾಗಿರುತ್ತೇನೆ ಎಂದು ಡಾ ರಾಧಾಕೃಷ್ಣನ್ ಹೇಳಿದರು. ಅಂದಿನಿಂದ ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ.
ಏಪ್ರಿಲ್ 1909 ರಲ್ಲಿ, ರಾಧಾಕೃಷ್ಣನ್ ಅವರನ್ನು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗಕ್ಕೆ ನೇಮಿಸಲಾಯಿತು . ನಂತರ, 1918 ರಲ್ಲಿ, ಅವರನ್ನು ಮೈಸೂರು ವಿಶ್ವವಿದ್ಯಾಲಯವು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಆಯ್ಕೆ ಮಾಡಿತು , ಅಲ್ಲಿ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಲಿಸಿದರು . ಹೊತ್ತಿಗೆ ಅವರು ದಿ ಕ್ವೆಸ್ಟ್ , ಜರ್ನಲ್ ಆಫ್ ಫಿಲಾಸಫಿ ಮತ್ತು ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಥಿಕ್ಸ್ ನಂತಹ ಪ್ರಸಿದ್ಧ ಜರ್ನಲ್ಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದರು . ಅವರು ತಮ್ಮ ಮೊದಲ ಪುಸ್ತಕ ದಿ ಫಿಲಾಸಫಿ ಆಫ್ ರವೀಂದ್ರನಾಥ ಟ್ಯಾಗೋರ್ ಅನ್ನು ಸಹ ಪೂರ್ಣಗೊಳಿಸಿದರು . ಟ್ಯಾಗೋರ್ ಅವರ ತತ್ವಶಾಸ್ತ್ರವು "ಭಾರತೀಯ ಚೇತನದ ನಿಜವಾದ ಅಭಿವ್ಯಕ್ತಿ" ಎಂದು ಅವರು ನಂಬಿದ್ದರು . ಅವರ ಎರಡನೇ ಪುಸ್ತಕ, ದಿ ರೇನ್ ಆಫ್ ರಿಲಿಜನ್ ಇನ್ ಕಂಟೆಂಪರರಿ ಫಿಲಾಸಫಿ 1920 ರಲ್ಲಿ ಪ್ರಕಟವಾಯಿತುಈ ದಿನವು ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ವಹಿಸುವ ಅಮೂಲ್ಯ ಪಾತ್ರವನ್ನು ಗುರುತಿಸಿ, ಅವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಶಿಕ್ಷಣದ ಪ್ರಾಮುಖ್ಯತೆಯನ್ನು ಮತ್ತು ನಿಸ್ವಾರ್ಥ ಸೇವೆಗಳನ್ನು ಸ್ಮರಿಸುತ್ತದೆ.
ಶಾಲೆ, ಕಾಲೇಜುಗಳಲ್ಲಿ ಈ ದಿನ ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ಗೌರವಿಸುವ ಜೊತೆಗೆ ಶಿಕ್ಷಕರನ್ನ ಗೌರವಿಸಿ, ಸ್ಮರಿಸುವ ಕೆಲಸಗಳು ನಡೆಯುತ್ತವೆ. ಈ ದಿನ ಶಾಲಾ, ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ.
ಈ ದಿನವು ಡಾ. ಸರ್ವಪಲ್ಲಿ . ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ, ಅವರು ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುತ್ತದೆ. ನಮ್ಮೆಲ್ಲರ ಜೀವನದಲ್ಲೂ ತಂದೆ–ತಾಯಿಗಳಂತೆ ಶಿಕ್ಷಕರ ಪಾತ್ರವು ಬಹಳ ಮಹತ್ವದ್ದು. ಕೈಹಿಡಿದು ಅಕ್ಷರ ತಿದ್ದಿ, ಓದಿ–ಬರೆಯಲು ಕಲಿಸುವುದಷ್ಟೇ ಬದುಕಿನ ಕೌಶಲಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಒಂದರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ ಶಿಲ್ಪಿಗಳು. ಬದುಕಿನಲ್ಲಿ ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವವರೇ ಶಿಕ್ಷಕರು. ಇಂತಹ ದೈವಸ್ವರೂಪಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ದಿನವನ್ನು ನಿಗದಿ ಪಡಿಸಲಾಗಿದೆ, ಅದುವೇ ಶಿಕ್ಷಕರ ದಿನಾಚರಣೆ.
.
ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡುವಲ್ಲಿ ಶಿಕ್ಷಕರ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸಲು ಈ ದಿನ ಮೀಸಲಾಗಿದೆ.
*ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ* ಶಿಕ್ಷಕರು ದೇಶದ ಭವಿಷ್ಯದ ನಿರ್ಮಾಪಕರೆಂದು ಪರಿಗಣಿಸಲ್ಪಡುತ್ತಾರೆ, ಏಕೆಂದರೆ ಅವರು ಮನುಷ್ಯ ಸ್ವರೂಪದ ಪ್ರಜೆಗಳನ್ನು ರೂಪಿಸುತ್ತಾರೆ.
ಅವರ ತಾಳ್ಮೆ, ಪ್ರೀತಿ, ಮತ್ತು ಮಾರ್ಗದರ್ಶನವು ವಿದ್ಯಾರ್ಥಿಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಗುರುಗಳ ಪಾತ್ರ ಮಹತ್ವದ್ದು.
*ಶಿಕ್ಷಣಕ್ಕೆ ಮನ್ನಣೆ:*
ಶಿಕ್ಷಕರು ಕೇವಲ ಜ್ಞಾನವನ್ನು ನೀಡುವುದಲ್ಲದೆ, ನೈತಿಕ ಮೌಲ್ಯಗಳನ್ನು ತುಂಬಿ, ದೇಶ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂಬುದನ್ನು ಈ ದಿನ ಸ್ಮರಿಸುತ್ತದೆ.
*ಆಧ್ಯಾತ್ಮಿಕ ಮತ್ತು ನೈತಿಕ *ಬೆಳವಣಿಗೆ:*
ಶಿಕ್ಷಕರು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಲು ಸಹಾಯ ಮಾಡುತ್ತಾರೆ.
ಈ ದಿನದಂದು, ದೇಶದಾದ್ಯಂತ ಶಿಕ್ಷಕರನ್ನು ಗೌರವಿಸಲಾಗುತ್ತದೆ ಮತ್ತು ಅವರ ಪಾತ್ರವನ್ನು ಸ್ಮರಿಸಲಾಗುತ್ತದೆ, ಇದರಿಂದಾಗಿ ಶಿಕ್ಷಣದ ಮಹತ್ವ ಮತ್ತು ಶಿಕ್ಷಕರ ಕೊಡುಗೆಯ ಬಗ್ಗೆ ಜನರಲ್ಲಿ ಅರಿವು ಮೂಡುತ್ತದೆ.
*ಬೋಧನೆ:*
ಶಿಕ್ಷಕರು ಸಾಕ್ಷರತೆ, ಸಂಖ್ಯಾಶಾಸ್ತ್ರ, ಕಲೆ, ಧರ್ಮ, ಮತ್ತು ಇತರ ಜೀವನ ಕೌಶಲ್ಯಗಳನ್ನು ಕಲಿಸುತ್ತಾರೆ.
*ಮಾರ್ಗದರ್ಶನ:*
ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ತಲುಪಲು, ಉತ್ತಮ ಮಾನವರಾಗಿ ಬೆಳೆಯಲು, ಮತ್ತು ಸಮಾಜದ ಉತ್ತಮ ನಾಗರಿಕರಾಗಲು ಶಿಕ್ಷಕರು ಸಹಾಯ ಮಾಡುತ್ತಾರೆ.
*ರಕ್ಷಣೆ:*
ವಿದ್ಯಾರ್ಥಿಗಳನ್ನು ಬೆದರಿಸುವಿಕೆ, ಲೈಂಗಿಕ ಕಿರುಕುಳ, ಮತ್ತು ಇತರ ಹಾನಿಗಳಿಂದ ರಕ್ಷಿಸುವ ಕಾನೂನುಬದ್ಧ ಕರ್ತವ್ಯವನ್ನು ಶಿಕ್ಷಕರು ಹೊಂದಿರುತ್ತಾರೆ.
*ಶಿಸ್ತು:*
ವಿದ್ಯಾರ್ಥಿಗಳ ಶಿಸ್ತನ್ನು ಕಾಪಾಡುವ ಜವಾಬ್ದಾರಿಯೂ ಕೆಲವೊಮ್ಮೆ ಶಿಕ್ಷಕರ ಮೇಲಿರುತ್ತದೆ.
*ವೃತ್ತಿಪರ ಕರ್ತವ್ಯಗಳು:*
ಪಾಠಗಳನ್ನು ಸಿದ್ಧಪಡಿಸುವುದು, ಪಾಠಗಳನ್ನು ನೀಡುವುದು, ವಿದ್ಯಾರ್ಥಿಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದು, ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಹಾಯ ಮಾಡುವುದು ಇತ್ಯಾದಿ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಾರೆ. *ವಿದ್ಯಾರ್ಥಿಗಳ ಕೃತಜ್ಞತೆ:*
ವಿದ್ಯಾರ್ಥಿಗಳು ಭಾಷಣಗಳು, ಕಾರ್ಯಕ್ರಮಗಳು ಮತ್ತು ಉಡುಗೊರೆಗಳ ಮೂಲಕ ತಮ್ಮ ಶಿಕ್ಷಕರ ಬಗ್ಗೆ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇದು ಒಂದು ಉತ್ತಮ ಅವಕಾಶ.
*ಶ್ರೀಧರ ಹಿರೇಮಠ*
*ದೈಹಿಕ ಶಿಕ್ಷಣ ಶಿಕ್ಷಕರು, ಗುಡದೂರ*

ಸೂರ್ಯ ನ್ಯೂಸ್ ಕನ್ನಡ ವಾರ್ಷಿಕೋತ್ಸವದಲ್ಲಿ ಹೊನ್ನುರಸ್ವಾಮಿ ಕೆ.ಟಿ. ಅವರಿಗೆ “ನಿರ್ಭೀತ ವರದಿಗಾರ ರತ್ನ” ಪ್ರಶಸ್ತಿ ಪ್ರದಾನ