28th June 2026

ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಮನಾಗಿ ಕಳೆದ ೫೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮೈಸೂರ ರಮಾನಂದ ಅವರು ಕನ್ನಡ ಕಲಾರಸಿಕರಿಗೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
೧೮ಜೂನ್, ೧೯೫೬ ರಲ್ಲಿ ಹೊರೆಯಾಲ ಗ್ರಾಮದಲ್ಲಿ ಜನಿಸಿದ ಇವರ ತಂದೆ ಎಚ್.ಪಿ.ರಾಮಚಂದ್ರಯ್ಯ, ತಾಯಿ ಶ್ರೀಮತಿ ಸುಭ್ರರತ್ನಮ್ಮ ಆಗಿದ್ದಾರೆ. ಎಸ್ಎಸ್ಎಲ್ ಸಿಯವರೆಗೆ ಓದಿದ್ದಾರೆ. ರಂಗಕರ್ಮಿಯಾಗಿ ನಟನೆ ಕಲಿತು, ನಾಟಕ ರಚನೆ, ನಿರ್ದೆಶನದಲ್ಲಿ ಮುಖ್ಯವಾಗಿ ತೊಡಗಿಕೊಂಡು ಚಲನಚಿತ್ರ, ದಾರಾವಾಹಿಗಳಲ್ಲೂ ನಟಿಸಿದ್ದಾರೆ.
ಗೆಜ್ಜೆ ಹೆಜ್ಜೆ ರಂಗ ತಂಡವನ್ನು ರೂಪಿಸಿಕೊಂಡು ಕರ್ನಾಟಕ ರಾಜ್ಯದಾದ್ಯಂತ ೮೦೦೦ ಕ್ಕೂ ಮಿಕ್ಕಿ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಸುಮಾರು ೩೫೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವೇದಿಕೆ ನಾಟಕಗಳು ಹಾಗೂ ಬೀದಿನಾಟಕಗಳನ್ನು ವಿಶೇಷವಾಗಿ ಸಾಮಾಜಿಕ ಕಳಕಳಿ ನಾಟಕಗಳನ್ನು ಹಾಸ್ಯ ರೂಪದಲ್ಲಿ ರಚಿಸಿ ಪ್ರದರ್ಶಿಸಿದ್ದಾರೆ.
ರಂಗ ವಿನೋದ ಎಂಬ ವಿಶೇಷವಾದ ರಂಗಭೂಮಿಯ ಮಾಸ ಪತ್ರಿಕೆಯನ್ನು ಹೊರ ತರುತ್ತಿದ್ದಾರೆ. ಗೆಜ್ಜೆ ಹೆಜ್ಜೆ ಪ್ರಕಾಶನದ ಮೂಲಕ ಹಲವಾರು ನಾಟಕಗಳನ್ನು ಪ್ರಕಟಿಸಿದ್ದಾರೆ. ಇವರು ಪ್ರಸಾಧನ ಕಲೆ ಕುರಿತಂತೆ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಅಭಿನಯ ಕಲೆ ಕುರಿತು ತರಬೇತಿ ಶಿಬಿರ ನಡೆಸಿದ್ದಾರೆ. ರಂಗಭೂಮಿ ಬಗ್ಗೆ ಹಲವು ವಿಚಾರ ಸಂಕೀರಣವನ್ನು ನಡೆಸಿದ್ದಾರೆ. ವಿಶ್ವರಂಗಭೂಮಿ ದಿನಾಚರಣೆಯಂದು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅಧ್ಬುತ ನಟನೆ- ಮಾದು ಮದುವೆ ನಾಟಕದಿಂದ ಪ್ರಾರಂಭವಾಗಿ ಕಳ್ಳಬಟ್ಟಿ, ತ್ಯಾಗಿ, ಯಮನ ಹೆಜ್ಜೆ ,ಬರದ ಕೂಗು, ನಾನಿನ್ನೂ ಸತ್ತಿಲ್ಲ, ಅಪ್ಪ ಮಗ, ಕುಡಿತಾಯಣ, ಏಡ್ಸ್, ಮೊದಲಾದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಸುಧಾ ವಾರಪತ್ರಿಕೆಯಲ್ಲಿ ಇವರು ಅಭಿನಯವಿದ್ದ ಸುಬ್ಬನಿಗೊಂದು ಹೆಣ್ಣು ಕೊಡಿ ಎಂಬ ಪೋಟೊ ಕಾಮಿಕ್ಸ್ ಪ್ರಕಟಗೊಂಡಾಗ ನಾಡಿನಾದ್ಯಂತ ಕಲಾರಸಿಕರು ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದರು. ಆಕಾಶವಾಣಿh ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನಾನಿನ್ನು ಸತ್ತಿಲ್ಲ, ಕುಡಿತಾಯಣ, ಮೂರ್ಖರ ದಿನ, ಮಾವ ಬಂದ ಮಾವ, ಪರಿಸರಾಯಣ, ಮೊದಲಾದ ಹಲವಾರು ನಾಟಕಗಳನ್ನು ರಚಿಸಿದ್ದಾರೆ. ವರನಟ ಡಾ. ರಾಜಕುಮಾರ, ಹೆಸರಾಂತ ರಂಗಕರ್ಮಿ ಬಿ.ವಿ.ಕಾರಂತ್, ರಂಗಕರ್ಮಿ ವಿ.ರಾಮಮೂರ್ತಿ, ಎಚ್.ವಿ.ವೆಂಕಟಸುಬ್ಬಯ್ಯ, ಗೋಪಾಲಕೃಷ್ಣ ನಾಯರಿ, ಅಶೋಕ ಬಾದರದಿನ್ನಿ, ಅನಂತನಾಗ್ ಇನ್ನೂ ಹಲವಾರು ರಂಗ ಹಿರಿಯರಿಂದ ನಾಟಕ ಪ್ರದರ್ಶನಗಳಿಗೆ ಮೆಚ್ಚುಗೆ ಪಾತ್ರವಾಗಿವೆ.
ಕುರಿತಾಯಣ ನಾಟಕವನ್ನು ವೀಕ್ಷಿಸಿದ ಪ್ರೇಕ್ಷಕರಲ್ಲಿ ಕೆಲವರು ಅದರಿಂದ ಪ್ರಭಾವಿತರಾಗಿ ಕುಡಿತದ ಅಭ್ಯಾಸವನ್ನು ಬಿಡುವದರ ಕುರಿತು ಚರ್ಚಿಸಿ ಕುಡಿತ ಬಿಡಿಸುವ ಅನುಷ್ಠಾನಕ್ಕೂ ಪ್ರಯತ್ನಿಸಿದ್ದಾರೆ. ಬತ್ತಿಹೋಗಿದ್ದ ನಾಟಕ ಅಭೂತ ಪೂರ್ವ ಆಕರ್ಷಣೆ ಪಡೆಯಿತು. ೧೯೮೬ ರಲ್ಲಿ ಗೆಳೆಯ ಉದಯಕುಮಾರ ಅವರೊಂದಿಗೆ ೩ ತಿಂಗಳ ಕಾಲ ಕರ್ನಾಟಕದಾದ್ಯಂತ ರಂಗ ಪ್ರವಾಸ ಕೈಗೊಂಡು ಬೀದಿ ನಾಟಕ ಪ್ರದರ್ಶಿಸಿದ್ದರು.
ಪ್ರಶಸ್ತಿ-ಗೌರವಗಳು- ೨೦೦೩ ರಲ್ಲಿ ಪೋಲಿಸ್ ಇಲಾಖೆ ಕೋಲಾರ ಜಿಲ್ಲೆ ಮತ್ತು ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯಿAದ ಉತ್ತಮ ಸಮಾಜ ಸೇವಕರು ಪ್ರಶಸ್ತಿ ಪಡೆದಿದ್ದಾರೆ. ೨೦೦೪ ರಲ್ಲಿ ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ರಂಗಭೂಮಿ ಕಲಾವಿದರ ಹಾಗೂ ರಂಗಕರ್ಮಿಗಳ ಒಕ್ಕೂಟದಿಂದ ಕರ್ನಾಟಕ ಕಲಾರತ್ನ ಪ್ರಶಸ್ತಿ ಲಭಿಸಿದೆ. ೨೦೧೨ ರಲ್ಲಿ ಬೆಳಗಾವಿ ಬಾಳೆಹೊನ್ನೂರ ರಂಬಾಪೂರಿ ಶಾಖಾ ಹಿರೇಮಠದಿಂದ ಕೊಡ ಮಾಡಿದ ಶ್ರೀ ರೇಣುಕಾ ರಾಷ್ಟಿçÃಯ ಸದ್ಭಾವಣಾ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ೫೦ ವರ್ಷ ಪೂರೈಸಿದ ಸಂದರ್ಭದಲ್ಲಿ ನೀಡಿದ ರಜತ ಪ್ರಶಸ್ತಿ, ಕರ್ನಾಟಕ ರಾಜ್ಯಾಧ್ಯಂತ ಹಲವು ಸಂಘ ಸಂಸ್ಥೆಗಳು ನೂರಾರು ಪ್ರಶಸ್ತಿ, ಗೌರವಗಳನ್ನು ನೀಡಿದೆ. ಅವರು ನಂ ೬೫೦ , ೧೦ ನೇ ಅಡ್ಡರಸ್ತೆ ೩ ನೇಯ ಮುಖ್ಯ ರಸ್ತೆ, ೨ ನೇ ಹಂತ ಮಹಾಲಕ್ಷಿö್ಮà ಪುರಂ ಬೆಂಗಳೂರು ಇಲ್ಲಿ ವಾಸವಾಗಿದ್ದಾರೆ.
ಲೇಖನ- ಸಿ.ವಾಯ್.ಮೆಣಸಿನಕಾಯಿ, ಸಾಹಿತಿಗಳು
ಪೊ-ನೇಸರಗಿ ತಾ-ಬೈಲಹೊಂಗಲ ಜಿಲ್ಲೆ-ಬೆಳಗಾವಿ
ಮೊ
-೮೦೫೦೧೬೮೫೦೪

ಮೊ-೮೦೫೦೧೬೮೫೦೪

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ