ಧಾರ್ಮಿಕ ಸಾಹಿತ್ಯ ಶೈಕ್ಷಣಿಕ ಹಾಗೂ ಸಮಾಜ ಸೇವೆಗಳ ಮೂಲಕ ಜನಮನ ಗೆದ್ದ ಡಾ.ಬಿ.ವಿ ಪೂರ್ಣಿಮಾ ಅವರಿಗೆ "ಮೌಲ್ಯಾಧಾರಿತ ಸಾಧಕ ರಾಜ್ಯ ಪ್ರಶಸ್ತಿ -2026"
ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಿ.ವಿ.ಪೂರ್ಣಿಮಾ ರವರು 1997ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ಸಮಾಜ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು 2004 ರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಯನ್ನು ಆರಂಭಿಸಿದರು. ಸ್ವತಃ ಶಿಕ್ಷಕಿಯಾಗಿದ್ದ ಇವರು ಮಕ್ಕಳಲ್ಲಿ ಅಪಾರ ಪ್ರೀತಿಯನ್ನು ಹೊಂದಿದ್ದು ಅದರಲ್ಲೂ ವಿಶೇಷವಾಗಿ ಬಡ ಮಕ್ಕಳಲ್ಲಿ ದಯೆ ಹಾಗೂ ಅನುಕಂಪ ಉಳ್ಳವರಾಗಿದ್ದು ಮಕ್ಕಳಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕ ಲೇಖನಿ ಸಮವಸ್ತ್ರ ಗಳನ್ನು ನೀಡಿ ಮಕ್ಕಳಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಈ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ಇವರ ಸೇವೆ ಗಣನೀಯವಾಗಿರುವುದನ್ನು ಗುರುತಿಸಿದ ಹಲವು ಸಂಸ್ಥೆಗಳು ಇವರಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ.2014ರಲ್ಲಿ ಇವರು1220 ಭಜನಾ ಕಾರ್ಯಕ್ರಮಗಳನ್ನು ಪೂರೈಸಿದ ಸಂದರ್ಭ ದಲ್ಲಿ ಇವರಿಗೆ ಇವರ( ಗುಂಡಪ್ಪ ಮೇಷ್ಟ್ರು ) ಗುರುಗಳೇ ಸಹಸ್ರ ಭಜನಾ ಸಾಮ್ರಾಜ್ಯ್ನಿ ಎಂಬ ಬಿರುದನ್ನು ನೀಡಿ ಗೌರವಿಸಿರುತ್ತಾರೆ. ಹಾಗೆ ಇವರ ಸೇವೆಗಳನ್ನು ಮುಂದುವರೆಸುತ್ತಾ ಈವ ರೆವಿಗೆ 1720 ಕಾರ್ಯಕ್ರಮಗಳನ್ನು ಮಾಡಿ "ಸಂಘಟನಾ ಚತುರೆ "ಎಂಬ ಬಿರುದನ್ನು ಸಹ ಹೊಂದಿದ್ದಾರೆ. ಇದಲ್ಲದೆ ಆಧ್ಯಾತ್ಮ ಚಿಂತಕರಾದ ಇವರು ಶಾಲಾ ಮಕ್ಕಳಿಗೆ ಶಿಕ್ಷಣದೊಂದಿಗೆ ಧರ್ಮದ ಅರಿವು ಮೂಡಿಸುವ ಸಲವಾಗಿ ಉಚಿತವಾಗಿ ಭಗವದ್ಗೀತೆಯನ್ನು ಶಾಲೆಯ ಮುಖ್ಯಸ್ಥರಿಂದ ಅನುಮತಿ ಪಡೆದು ವಾರದಲ್ಲಿ ಎರಡು ದಿನ ತರಗತಿಗಳನ್ನು ತೆಗೆದುಕೊಂಡು ಶಾಲಾ ಮಕ್ಕಳಿಗೆ ಉಚಿತವಾಗಿ ಭಗವದ್ಗೀತೆ ಹಾಗೂ ದಕ್ಷಿಣ ಮೂರ್ತಿ ಸ್ತೋತ್ರಗಳನ್ನು ಹೇಳಿಕೊಡುತ್ತಿರುತ್ತಾರೆ. ಇವರು ಮಾಡುತ್ತಿರುವ ಸೇವೆಯನ್ನು ನಾಡಿನ ಸಮಾಚಾರ ದಿನ ಪತ್ರಿಕೆಯವರು ಗುರುತಿಸಿ ಇವರಿಗೆ "ಹೆಮ್ಮೆಯ ಕನ್ನಡತಿ ರಾಜ್ಯ ಪ್ರಶಸ್ತಿಯನ್ನು"2024 ರಲ್ಲಿ ನೀಡಿ ಗೌರವಿಸಿರುತ್ತಾರೆ ನೀಡಿ ಗೌರವಿಸುತ್ತಾರೆ. ವಿಶೇಷ ದಿನಗಳಲ್ಲಿ ದೀನದಲಿತರ ಬಡಾವಣೆಗಳಲ್ಲಿ ಅನ್ನದಾಸೋಹವನ್ನು ಸಹ ಮಾಡುತ್ತಿರುತ್ತಾರೆ. ಹಾಗೂ ವಂಚನೆಗೊಒಳಗಾದ ಮಹಿಳೆಯರು, ಬಡತನದಲ್ಲಿ ಬೆಂದು ಹೋಗುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡಿ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿರುತ್ತಾರೆ. ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಾರಕ್ಕೆ ಒಂದು ಬಾರಿ, ಸರ್ಕಾರಿ ಆಸ್ಪತ್ರೆಗಳಗೆ ದೂರದಿಂದ ಬಂದು ಆಸ್ಪತ್ರೆಯಲ್ಲಿ ಪರದಾಡುತ್ತಿರುವವರೆಗೆ ದಾಸೋಹವನ್ನು ಸಹ ಮಾಡುತ್ತಾರೆ. ಮತ್ತು ಹೆಣ್ಣು ಮಕ್ಕಳ ಕಾಲೇಜುಗಳಲ್ಲಿ ವರ್ಷಕ್ಕೆ ಒಂದು ಬಾರಿ ಉಚಿತ ವೈದ್ಯಕೀಯ ತಪಾಸಣೆಯನ್ನು ಸಹ ಆಯೋಜನೆ ಮಾಡಿಸು ತ್ತಾರೆ. ಇಂತಹ ಬಹುಮುಖ ಸೇವೆಗಳನ್ನು ಮಾಡುತ್ತಿರುವ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಅನೇಕ ಸಂಘ ಸಂಸ್ಥೆಗಳು, ಇನ್ನೂ ಹಲವಾರು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ . ಇದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧರಾಗಿ ವಿಕೇಂದ್ರೀಕರಣ ಆಡಳಿತ ಸುಧಾರಣೆ ಹಾಗೂ ಜನಪರ ಆಡಳಿತಕ್ಕೆ ಹೊಸ ದಿಕ್ಕು ತೋರಿದ ದೂರ ದೃಷ್ಟಿಯ ರಾಜಕಾರಣಿ ದಿವಂಗತ ರಾಮಕೃಷ್ಣ ಹೆಗ್ಡೆಯವರ ಜನ್ಮ ಶತಮಾನೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ.ಬಿ.ವಿ. ಪೂರ್ಣಿಮಾ ರವರ ಧಾರ್ಮಿಕ ಸಾಹಿತ್ಯ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳನ್ನು ಗುರುತಿಸಿದ ರಾಜ್ಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ರವರು ಇವರಿಗೆ "ಮೌಲ್ಯಾಧಾರಿತ ಸಾಧಕ ರಾಜ್ಯ ಪ್ರಶಸ್ತಿ" ನೀಡಿ ಗೌರವಿಸಿರುತ್ತಾರೆ . ರಾಜಕೀಯ ವರ್ಗದವರು ಸಹ ಇವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಗಮನಾರ್ಹವಾಗಿದೆ. ಮೌಲ್ಯ ದಾರಿತ ರಾಜಕಾರಣಿ ಕೀರ್ತಿಶೇಷ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ ಸಮಾರಂಭದ ವೇದಿಕೆಯ ಗಣ್ಯರು ಸಹ ಇವರಿಗೆ ಶುಭ ಹಾರೈಸಿದ್ದಾರೆ.

