ನೇಸರಗಿ- ರೈತ ಸಂಘಟನೆಗಳನ್ನು ಸ್ಥಾಪಿಸುವದರಿಂದ ರೈತರ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಹೇಳಿದರು.
ಸಮೀಪದ ವಣ್ಣೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಶಾಖೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಪ್ರಯತ್ನಿಸದಿದ್ದರೆ ರೈತಸಂಘದ ಸದಸ್ಯರ ಒಗ್ಗಟ್ಟಿನ ಹೋರಾಟದಿಂದ ಸಾದ್ಯ. ಚಚಡಿ ಏತ ನೀರಾವರಿ ಯೋಜನೆಯನ್ನು
ಎಲ್ಲ ಗ್ರಾಮಗಳಿಗೆ ಅನುಷ್ಠಾನಗೊಳಿಸಬೇಕು.ಶೀಘ್ರ ಚಚಡಿ ಏತ ನೀರಾವರಿ ಯೋಜನೆ ಅನುಷ್ಡಾನಕ್ಕೆ ಆಗ್ರಹಿಸಿ ನೇಸರಗಿ - ಬಾಗಲಕೋಟ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಚಚಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಡಿದ ಸಾಧಕರನ್ನು ಸತ್ಕರಿಸಲಾಯಿತು.
ರೈತ ಸಂಘದ ಮುಖಂಡರಾದ ಪ್ರೇಮ್ ಚೌಗಲಾ, ಸತ್ತೇಪ್ಪ ಮಲ್ಲಾಪುರಿ, ಸಿದಲಿಂಗಪ್ಪ ಪೂಜೇರಿ, ಸಿದ್ದರಾಯ್ ಪರಸಣ್ಣವರ, ಕುಮಾರ್ ತಿಗಡಿ, ವಾಸು ಪಾಂಡೋಳ್ಳಿ,ಬೀರಪ್ಪ ತೋಳಿನವರ,ಮಂಜುನಾಥ್ ವಣ್ಣೂರ್ , ರಾಯಪ್ಪ ಗೌಡಪ್ಪಗೊಳ್ ,
ಹಾಗು ವಣ್ಣೂರ್, ಸುನಕುಂಪಿ, ಮಾಸ್ತಮರಡಿ ಗ್ರಾಮದ ರೈತ ಬಾಂಧವರು ಉಪಸ್ಥಿತರಿದ್ದರು.







