ನೇಸರಗಿ- ಸಮೀಪದ ದೇಶನೂರ ಗ್ರಾಮ ಪಂಚಾಯತ ಕಾರ್ಯಾಲದಲ್ಲಿ ವಲಯ 80ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ಪಿಡಿಓ ಆರ್ ಐ ಪೊಲೀಸನವರ ನೆರವೇರಿಸಿದರು.
1947 ಆಗಸ್ಟ್ 15 ಮಧ್ಯರಾತ್ರಿ 12 ಗಂಟೆಗೆ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಸುಮಾರು ವರ್ಷಗಳ ಕಾಲ ನಮ್ಮ ಹಕ್ಕಾದ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಬಲಿದಾನ-ತ್ಯಾಗದಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ.
ಉಸಿರಿರುವ ತನಕ ಭಾರತೀಯನೆಂದು ಬೀಗು, ಕೊನೆಯುಸಿರೆಳೆಯುವಾಗಲೂ ವಂದೇ ಮಾತರಂ ಎಂದು ಕೂಗು. ಸ್ವಾತಂತ್ರ್ಯ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ ಎಂದರು.
ಈ ಸಂಧರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳಾದ ರಂಗೋಜಿ ಕಂಚಿಮರದ, ಕುಮಾರ ಕೆಳಗಿನಮನಿ, ಶಶಿಕಲಾ ತಳವಾರ, ಸವಿತಾ ಗಡದವರ, ಬಸವರಾಜ ಕರೆನ್ನವರ, ಶೀಲಾ ಕೆಳಗಿನಮನಿ, ಬಸಲಿಂಗವ್ವ ಯರಜರ್ವಿ ಹಾಗೂ ಗ್ರಾಮಸ್ಥರು ಇದ್ದರು.







