ಕಾಸರಗೋಡು ಗೋ- ಕುಟೀರ" ನಿರ್ಮಾಣಕ್ಕೆ ಗೋ- ಭಕ್ತರು,ಗೋ- ಪೋಷಕರು ದಾನಿಗಳಿಂದ ಸಹಕಾರದ ನಿರೀಕ್ಷೆಯಲ್ಲಿ.*.....*
ಕಾಸರಗೋಡು :- ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ 36 ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ "ಕಾಸರಗೋಡು ಗೋ-ಕುಟೀರ"ದ ಕಾಮಗಾರಿಗೆ ಗೋ- ಭಕ್ತರು, ಗೋ -ಪೋಷಕರು, ಗೋ- ದಾನಿಗಳಿಂದ ಆರ್ಥಿಕ ಸಹಾಯ,ಸಹಕಾರ ಪ್ರೋತ್ಸಾಹವನ್ನು ನೀಡುವಂತೆ ಮನವಿ ಮಾಡಲಾಗಿದೆ.
ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ (ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ) ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ -ಕುಟೀರವನ್ನು ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಉದ್ದೇಶದಿಂದ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ದೈವಾರ್ಷಿಕ ಕಾರ್ಯ ಯೋಜನೆಯನ್ನು ಕೈಗೊಳ್ಳಲಾಗಿದೆ.
ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಕಾಸರಗೋಡು ಗೋ-ಕುಟೀರದಲ್ಲಿ ಗೋವುಗಳಿಗೆ ಗೋ-ಗ್ರಾಸ ನೀಡಿ, ಗೋ- ಆರತಿಯನ್ನು ಬೆಳಗಿಸಿ, ಗೋ-ಸಂಕೀರ್ತನೆಯನ್ನು ಹಾಡಿ, ಗೋ-ಕುಟೀರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಶ್ರದ್ಧಾ ಭಕ್ತಿಯಿಂದ ಪಡೆಯಲು ಅವಕಾಶ ಕಲ್ಪಿಸಲಾಗುವುದು. ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನಿಮಿತ್ತ ಕಾಸರಗೋಡು ಗೋ -ಕುಟೀರಕ್ಕೆ ಆಗಮಿಸಿ ಗೋ ಮಾತೆಯ ಸೇವೆ ಸಲ್ಲಿಸಿ ಕುಟುಂಬದವರು ಸಂಭ್ರಮವನ್ನು ಹಂಚಿಕೊಳ್ಳಲು ಉದ್ದೇಶಿಸಲಾಗಿದೆ. ಕಾಸರಗೋಡು ಗೋ - ಕುಟೀರದ ಆವರಣದಲ್ಲಿ ಗೋ- ಭಕ್ತರು, ಗೋ-ಪೋಷಕರು, ಗೋ- ದಾನಿಗಳಿಂದ ಗೋ ಗ್ರಾಸವನ್ನು(ಹಸಿ ಹುಲ್ಲು) ಬೆಳೆಸಲು ಉದ್ದೇಶಿಸಲಾಗಿದೆ.
ಕಾಸರಗೋಡು ಗೋ-ಕುಟೀರ (KASARAGOD GO- KUTEERA)ದ ಪರಿಸರದ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಆಶ್ರಯದಲ್ಲಿ ನಿರ್ಮಾಣವಾಗಲಿರುವ "ಕಾಸರಗೋಡು ಕೃಷಿ ಕುಟೀರ"(KASARAGOD KRISHI KUTEERA)ದಲ್ಲಿ ವಿವಿಧ ಸಂಘ ಸಂಸ್ಥೆಗಳು, ಬ್ಯಾಂಕ್, ಉದ್ಯಮ, ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನ,ಮಠ, ಮಂದಿರ, ವಿವಿಧ ಟ್ರಸ್ಟ್ ಗಳ ನೆರವಿನ ಪ್ರಾಯೋಜಕತ್ವದಡಿಯಲ್ಲಿ ಸಾವಯವ ಕೃಷಿ,ಗ್ರಾಮೀಣ ವಿದ್ಯಾರ್ಥಿಗಳು,ಯುವಜನರು, ಮಹಿಳೆಯರು, ಮಹಿಳಾ ಉದ್ಯೋಗಿಗಳಿಗಾಗಿ ಹೊಲಿಗೆ, ವಸ್ತ್ರ,ವಿನ್ಯಾಸ,ಡಿಸೈನಿಂಗ್ ಮತ್ತು ಕಂಪ್ಯೂಟರ್, ಡಿಜಿಟಲ್ ಮಾಧ್ಯಮ, ಎ ಐ ಅಕ್ಷರ ಕುಟೀರ, ಗ್ರಾಮೀಣ ಜಾನಪದ ವಸ್ತು ಸಂಗ್ರಹಾಲಯ, ಕಾಸರಗೋಡು ಕನ್ನಡ ಪತ್ರಿಕಾ ಮ್ಯೂಸಿಯಂ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಗ್ರಂಥಾಲಯ, ಸಾಹಿತ್ಯ ಕುಟೀರ,ಭಜನಾ ಸಂಕೀರ್ತನಾ ಕುಟೀರ, ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗಾಗಿ ರಜಾ ದಿನಗಳಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ, ಜಾನಪದ, ಇತಿಹಾಸ, ರಂಗಭೂಮಿ, ಯಕ್ಷಗಾನ, ಪ್ರಾದೇಶಿಕ ಜಾನಪದ ಕಲಾ ವೈವಿಧ್ಯ ಕಾರ್ಯ ಚಟುವಟಿಕೆಗಳಿಗಾಗಿ ಕಾಸರಗೋಡು ಸoಸ್ಕೃತಿ ಕುಟೀರ ಸ್ಥಾಪನೆ ಹಾಗೂ ನಮ್ಮ ಮನೆ - ವಿಶ್ರಾಂತಿ ಗ್ರಹ (ರೆಸ್ಟ್ ಹೌಸ್) ವನ್ನು ನಿರ್ಮಿಸಲು ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಪರ್ಕ :-ಶಿವರಾಮ ಕಾಸರಗೋಡು, ಅಧ್ಯಕ್ಷರು,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),(ಕಾಸರಗೋಡು ಗೋ -ಕುಟೀರ )ಕನ್ನಡ ಗ್ರಾಮ,ಕನ್ನಡ ಗ್ರಾಮ ರಸ್ತೆ, ಕಾಸರಗೋಡು-671121 ಮೊಬೈಲ್ :-9448572016
ಇಮೇಲ್ :
shivaramakasaragod@gmail.com
ಗೂಗಲ್ ಪೇ ಸಂಖ್ಯೆ :9448572016 ಇಲ್ಲಿಗೆ ತಮ್ಮ ದೇಣಿಗೆಯನ್ನು ಪಾವತಿಸಿ ಪ್ರೋತ್ಸಾಹಿಸಬಹುದು.
ವಿ. ಸೂ :- ಈ ಪ್ರಕಟಣೆಯನ್ನು ತಮ್ಮ ವಾಟ್ಸಾ ಪ್ ಗ್ರೂಪ್ ಗಳು ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ (ಫಾರ್ವಡ್) ಮೂಲಕ ನಾಡಿನಾದ್ಯಂತ ಸರ್ವ ಸಮಾಜದ ಬಂಧುಗಳಿಗೆ ತಲುಪಿಸಿ, ನಮ್ಮೊಂದಿಗೆ ಸಹಕರಿಸಿರಿ.







