ಕಾಸರಗೋಡು:-ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಪೋಷಿಸುವ ಮೂಲಕ ಕಾಸರಗೋಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯುವ ಸಮ್ಮೇಳನ, ಸಮಾವೇಶ, ಸಾಹಿತ್ಯೋತ್ಸವ ಕಾರ್ಯಕ್ರಮಗಳು ಕೇರಳ ಕರ್ನಾಟಕ ರಾಜ್ಯ ಮಟ್ಟದ ಲ್ಲಿ ಗುರುತಿಸಿ ಕೊಂಡಿದೆ. ಎಂದು ಕವಿ ,ಅಧ್ಯಾಪಕ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಹೇಳಿದರು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದ ಸಭಾಂಗಣದಲ್ಲಿ ನಡೆದ ಚಿಗುರಿದ ಕನಸು ಕೃತಿ ಬಿಡುಗಡೆ ಮತ್ತು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಧ್ಯಾರ್ಥಿ ಪ್ರತಿಭೆ ಕು.ಸಮೃದ್ಧಿ ಆಳ್ವ ಅವರ ಚೊಚ್ಚಲ ಕವನ ಸಂಕಲನ "ಚಿಗುರಿದ ಕನಸು" ಕೃತಿಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಬಿಡುಗಡೆಗೊಳಿಸಿದರು. ಮಂಗಳೂರಿನ ಅನಾವರಣ ಸಾಮಾಜಿಕ, ಸಾಹಿತ್ಯ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನದ ಅಧ್ಯಕ್ಷೆ , ನ್ಯಾಯವಾದಿ ಪರಿಮಳ ರಾವ್ ಕೃತಿ ಪರಿಚಯ ಮಾಡಿದರು .ಇದೇ ಸಂದರ್ಭದಲ್ಲಿ ಕೃತಿ ಕರ್ತೆ ಸಮೃದ್ಧಿ ಆಳ್ವರನ್ನು ಸನ್ಮಾನಿಸಲಾಯಿತು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಧಾರ್ಮಿಕ ಮುಂದಾಳು ಡಾ.ಕೆ. ಏನ್. ವೆಂಕಟ್ರಮಣ ಹೊಳ್ಳ , ಸಂಘಟಕ ಸುಭಾಷ್ ಪೆರ್ಲ, ಪ್ರಾಂಶುಪಾಲ ಬಿಂದುಸಾರ ಶೆಟ್ಟಿ , ಮುಖ್ಯೋಪಾಧ್ಯಾಯಿನಿ ಸುರೇಖ ಕೆ.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸವಿತಾ ಟೀಚರ್ ಕಾಸರಗೋಡು, ಪತ್ರಕರ್ತ ವೀಜಿ ಕಾಸರಗೋಡು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ.ರಮೇಶ, ಉಳ್ಳಾಲ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ , ಮಂಗಳೂರಿನ ರೇಡಿಯೋ ಸಾರಂಗ್ ಸಂಪಾದಕ ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಸಮೃದ್ಧಿ ಆಳ್ವ ಅವರ ಹೆತ್ತವರಾದ ಪ್ರಣವ್ ಕುಮಾರ್ ಆಳ್ವ, ಬಿಂದಿಯಾ ಆಳ್ವ, ಮಾಜಿ ನಗರ ಸಭಾ ಸದಸ್ಯ ಶಂಕರ ಕೆ. ಉಪಸ್ಥಿತರಿದ್ದರು. ಕನ್ನಡ ಗ್ರಾಮದ ಕುಶಲ ಕುಮಾರ ಕೆ. ಸಂಯೋಜನೆ ಮಾಡಿದ್ದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ಸ್ವಾಗತಿಸಿದರು. ಕಲಾವಿದ ದಿವಾಕರ ಪಿ.ಅಶೋಕ ನಗರ ವಂದಿಸಿದರು. ಕವಯಿತ್ರಿ ಹರ್ಷಿತಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
ಆನಂತರ ನಡೆದ ಕವಿಗೋಷ್ಠಿಯಲ್ಲಿ ಎಂ.ಎ ಮುಸ್ತಾಫಾ ಬೆಳ್ಳಾರೆ, ರವೀಂದ್ರನ್ ಪಾಡಿ, ಅವನಿ ಕರಿಂಬಿಲ, ಸುಮನಾ ಕರಿಂಬಿಲ, ಸರ್ವಮಂಗಳ ಪುಣಿoಚತ್ತಾಯ , ಎಡ್ವರ್ಡ್ ಲೋಬೊ ತೊಕ್ಕೊಟ್ಟು,ಸಮೃದ್ಧಿ ಆಳ್ವ, ಸುತೀಕ್ಷಾ ಆಳ್ವ, ಶಶಿಕಲಾ ಟೀಚರ್ ಕುಂಬ್ಳೆ,ನೀತಿಕಾ ಚೌಕಿ, ಕೃಪೇಶ್ ಜಿ.ಎಸ್.ಕಲ್ಲಕಟ್ಟ, ಸ್ವರಚಿತ ಕವನ ವಾಚಿಸಿದರು. ಹರ್ಷಿತಾ ಪೆರ್ಲ ನಿರೂಪಿಸಿದರು.
ಪತ್ರಕರ್ತರಾದ ವೀಜಿ, ಕಾಸರಗೋಡು ಪ್ರದೀಪ್ ಬೇಕಲ್ ,ಶ್ರೀಕಾಂತ್ ಕಾಸರಗೋಡು, ರಾಧಾಕೃಷ್ಣ ಕೆ. ಉಳಿಯತ್ತಡ್ಕ ,ಕೆ. ಜಗದೀಶ ಕೂಡ್ಲು , ಸುಭಾಷ್ ಪೆರ್ಲ,ಪ್ರಣಪ್ ಕುಮಾರ್ ಆಳ್ವ ವಿಷ್ಣು ಕೆ ಶ್ಯಾನುಭೋಗ್ , ಯೋಗೀಶ್ ಎನ್. ಕೋಟೆಕಣಿ ಕವಿಗಳಿಗೆ ಸ್ಮರಣೆ ನೀಡಿ ಗೌರವಿಸಿದರು.
ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29ರಂದು ನಡೆಯುವ ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ - ಕೇರಳ- ಕರ್ನಾಟಕ ಉತ್ಸವದ ಮುನ್ನುಡಿಯಾಗಿ ನಡೆದ ಈ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವವು ಯಶಸ್ವಿಯಾಗಿ ನಡೆಯಿತು.






