ಕಾಸರಗೋಡು - ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 36 ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29 ರಂದು ನಡೆಯುವ ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ-2026 ಕೇರಳ- ಕರ್ನಾಟಕ ಉತ್ಸವವನ್ನು ಸದಾ ನೆನಪಿಸುವ ಲಾಂಛನ (ಲೋಗೋ)ವನ್ನು ಆಹ್ವಾನಿಸಲಾಗಿದೆ.
ನಾಡಿನ ಕಲಾವಿದರು, ಕಲಾಸಕ್ತರು, ಲಾಂಛನವನ್ನು ರಚಿಸಿ, ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ), ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,ಕಾಸರಗೋಡು -671121
ಮೊಬೈಲ್ -9448572016
ಇಮೇಲ್ -
shivaramakasaragod@gmail.com ಈ ವಿಳಾಸಕ್ಕೆ ತಲುಪಿಸಬಹುದು.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ ಕೇರಳ ಕರ್ನಾಟಕ ಉತ್ಸವದ
ಲಾಂಛನವನ್ನು ರಚಿಸಿದವರು ತಮ್ಮ ಹೆಸರು, ವಿಳಾಸ, ಮೊಬೈಲ್ ವಾಟ್ಸ್ ಪ್ ಸಂಖ್ಯೆ ಒಂದು ಭಾವಚಿತ್ರವನ್ನು ಜೊತೆಗೆ ಕಳುಹಿಸಬೇಕು. ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ ಕೇರಳ- ಕರ್ನಾಟಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಯ್ಕೆಯಾದ ಲಾಂಛನ ರಚಿಸಿದ ಕಲಾಕಾರರಿಗೆ ಗೌರವಿಸಲಾಗುವುದು.






