ಬೆಂಗಳೂರು- ಗೆಜ್ಜೆ ಹೆಜ್ಜೆ ರಂಗ ತಂಡ (ನೋಂ.) 2ನೇ ಹಂತ, ಮಹಾಲಕ್ಷ್ಮೀಪುರ, ಬೆಂಗಳೂರು ಈ ಸಂಸ್ಥೆ 50 ವರ್ಷಗಳನ್ನು ಸಮೀಪಿಸಲಿರುವ ರಂಗಕಾಯಕ
ರಂಗ ಕಾರ್ಯಕ್ರಮವು ದಿ.27, ಆಗಸ್ಟ್ ರಂದು ಸಂಜೆ 4 ಗಂಟೆಯಿಂದ 9ರವರೆಗೆ ಸೇವಾ ಸದನ, 14ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು ಇಲ್ಲಿ ನಡೆಯಲಿದೆ.
ಅಂದು ಕೀರ್ತಿಶೇಷರಾದ ಉಮೇಶಣ್ಣ, ಬ್ಯಾಂಕ್ ಜನಾರ್ದನ್ , ಕರಿಬಸವಯ್ಯ, ಮೈಕೇಲ್ ಮಧು, ಮಿಮಿಕ್ರಿ ರಾಜಗೋಪಾಲ್, ಮನದೀಪ್ ರಾಯ್, ಶಂಖನಾದ ಅರವಿಂದ್, 'ಮೋಹನ್ ಜುನೇಜಾ ಅವರುಗಳ ಗೌರವಪೂರ್ವಕ ನೆನವರಿಕೆ ಕಾರ್ಯಕ್ರಮ ಹಾಗೂ ಕಂಡಕ್ಟರ್ ಗಂಗರಾಜ್ ವಿರಚಿತ
'ಅವ್ವ' ಮತ್ತು 'ಶಿವಪುರ' ನಾಟಕಗಳ ಪ್ರಸ್ತುತಿ ನಡೆಯಲಿದೆ.
ಈ ನಾಟಕದ ನಿರ್ದೇಶನವನ್ನು ಚಲನಚಿತ್ರ ನಟ ಮೈಸೂರು ರಮಾನಂದ್ ಮಾಡಿದ್ದಾರೆ. ಅಂದು ಕಲಾಭಿಮಾನಿಗಳು ಉಪಸ್ಥಿತರಿರಲು ಕೋರಲಾಗಿದೆ.







